May 11, 2024

MALNAD TV

HEART OF COFFEE CITY

ಯಾರೆಲ್ಲಾ ಬಿಜೆಪಿ ತೊರೆದಿದ್ದಾರೋ ಅವರೆಲ್ಲಾ ಮೋದಿಗಾಗಿ ಬಿಜೆಪಿಗೆ ಬರುವಂತೆ ಪ್ರಾರ್ಥನೆ : ಕೇಂದ್ರ ಸಚಿವೆ ಶೋಭಾ

1 min read

 

ಚಿಕ್ಕಮಗಳೂರು. ಯಾರೆಲ್ಲಾ ಪಕ್ಷ ಬಿಟ್ಟು ಹೋಗಿದ್ದಾರೋ ಅವರೆಲ್ಲರೂ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಸಲುವಾಗಿ ವಾಪಸ್ ಬರಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮನವಿ ಮಾಡಿದ್ದಾರೆ. ನಗರದಲ್ಲಿ ಸಂಸದರ ಕಚೇರಿಯಲ್ಲಿ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿಗೂ ಅನ್ವಯಿಸುತ್ತದೆಯೇ ಎಂಬ ಪ್ರಶ್ನೆಗೆ, ಮೋದಿ ಹಾಗೂ ದೇಶದ ಸಲುವಾಗಿ ಹಾಗೂ ಮುಂದಿನ ಪೀಳಿಗಾಗಿ ಎಲ್ಲರೂ ವಾಪಸ್ ಬರಬೇಕಿದೆ ಎಂದರು. ವಿಶ್ವದಲ್ಲಿ ಶಾಂತಿ ನೆಲೆಸಲು ಎಲ್ಲರೂ ಸೇರಿ ಬಿಜೆಪಿ ಮತ್ತು ದೇಶವನ್ನ ಕಟ್ಟಬೇಕಿದೆ. ಅದಕ್ಕಾಗಿ ಯಾರೇ ಪಕ್ಷ ಬಿಟ್ಟು ಹೊಗಿದ್ದರೂ ಅವರು ಮರಳಿ ಬರಲು ಸ್ವಾಗತವಿದೆ ಎಂದರು. ಕೆಲವು ಬಿಜೆಪಿ ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಮುಂದಾಗಿದ್ದಾರೆ ಎಂಬ ಪ್ರಶ್ನೆಗೆ, ಬೇರೆ-ಬೇರೆ ಕಾರಣಕ್ಕೆ ನಾವು ವಿಧಾನಸಭಾ ಚುನಾವಣೆಯನ್ನ ಸೋತಿದ್ದೇವೆ. ಮತ್ತೊಮ್ಮೆ ಬಿಜೆಪಿಯನ್ನು ಗಟ್ಟಿಯಾಗಿ ಕಟ್ಟಬೇಕಿದೆ. ನಮ್ಮ ಪಕ್ಷದ ತತ್ವ-ಸಿದ್ಧಾಂತವನ್ನು ಒಪ್ಪಿ ಅವರು ಪಕ್ಷ ಸೇರಿದ್ದರು. ಅವರು ಬಿಜೆಪಿಯಲ್ಲೇ ಮುಂದುವರಿಯುತ್ತಾರೆ ಎನ್ನುವ ವಿಶ್ವಾಸ ಇದೆ ಎಂದರು. ಅಧಿಕಾರ ಇದ್ದಾಗ ಬಂದರು, ಅಧಿಕಾರ ಇಲ್ಲದಾಗ ಹೋದರು ಎನ್ನುವ ಕೆಟ್ಟ ಹೆಸರನ್ನು ಅವರು ತೆಗೆದುಕೊಳ್ಳುವುದಿಲ್ಲ. ಹಾಗಾಗಿ, ಅವರು ಬಿಜೆಪಿಯಲ್ಲೇ ಇರುತ್ತಾರೆಂಬ ವಿಶ್ವಾಸವಿದೆ ಎಂದರು. ಅವರು ಬಿಜೆಪಿ ಬಗ್ಗೆ ಬೇಸರ ಮಾಡಿಕೊಳ್ಳಲು ಯಾವುದೇ ಕಾರಣಗಳಿಲ್ಲ. ಈ ಕಾರಣಕ್ಕೆ ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಲು ಶ್ರಮಿಸಬೇಕಿದೆ. ದೇಶ ಹಾಗೂ ವಿಶ್ವಕ್ಕೆ ಮೋದಿ ಬೇಕಾಗಿದೆ. ಹಲವು ದೇಶ ಭಾರತದ ಕಡೆ ನೋಡುತ್ತಿದೆ. ಜಗತ್ತಿನ ಶಾಂತಿಗಾಗಿ ಮೋದಿ ಬೇಕಿದೆ. ಹಾಗಾಗಿ, ಬೇರೆ ಯಾರು ಪಕ್ಷ ಬಿಟ್ಟಿದ್ದಾರೋ ಅವರನ್ನೂ ಸೇರಿಸಿಕೊಂಡು ಪಕ್ಷವನ್ನು ಗಟ್ಟಿಗೊಳಿಸುವ ಅಗತ್ಯವಿದೆ ಎಂದರು. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಿದೆ. ಮೋದಿಯಂತಹ ನಾಯಕ ಮತ್ತೊಮ್ಮೆ ಈ ದೇಶಕ್ಕೆ ಬೇಕಾಗಿದೆ. ಯಾವುದೇ ಪಕ್ಷ ಹಾಗೂ ಐ.ಎನ್.ಡಿ.ಐ.ಎ.ನಲ್ಲೇ ಆಗಲಿ ಇಲ್ಲ. ನಮ್ಮ ದೇಶದ ನಾಯಕನನ್ನ ಪ್ರಪಂಚ ಮೆಚ್ಚುತ್ತಿರುವ ಹಿನ್ನೆಲೆ ಅವರನ್ನು ಮತ್ತೆ ಪ್ರಧಾನಿ ಮಾಡಲು ಎಲ್ಲರೂ ಒಂದುಗೂಡಬೇಕಿದೆ ಎಂದರು. ಐ.ಎನ್,ಡಿ.ಐ.ಎ.ನಲ್ಲಿ ಇರುವ ಕಾರಣಕ್ಕೆ ಒತ್ತಡದಲ್ಲಿ ತಮಿಳುನಾಡಿಗೆ ನೀರು ಬಿಟ್ಟರೆ ನಮ್ಮ ರಾಜ್ಯದ ರೈತರಷ್ಟೇ ಅಲ್ಲ. ಬೆಂಗಳೂರಿನ ಜನರಿಗೂ ಕುಡಿಯುವ ನೀರಿನ ತತ್ವಾರ ಎದುರಾಗಲಿದೆ ಎಂದು ರಾಜ್ಯ ಸಕಾರವನ್ನು ಎಚ್ಚರಿಸಿದರು. ಈ ವರ್ಷ ಕರ್ನಾಟಕದಲ್ಲಿ ಮಳೆ ಪ್ರಮಾಣ ಕಡಿಮೆ ಇದೆ. ಬಹಳಷ್ಟು ಜಿಲ್ಲೆಗಳಲ್ಲಿ ಮಳೆ ಕೊರತೆ ಆಗಿದೆ. ರಾಜ್ಯ ಸರ್ಕಾರದಿಂದ ತಮಿಳುನಾಡಿಗೆ ಈ ವಿಚಾರವನ್ನು ಮನವರಿಕೆ ಮಾಡುವ ಕೆಲಸ ಆಗಬೇಕು ಎಂದರು. ಈಗಾಗಲೇ ಬೆಂಗಳೂರಿಗೆ ಅಗತ್ಯ ಇರುವಷ್ಟು ನೀರು ಪೂರೈಸಲಾಗುತ್ತಿಲ್ಲ. ಮತ್ತೊಂದೆಡೆ ವಿದ್ಯುತ್ ಇಲ್ಲ. ಈ ಎಲ್ಲಾ ಕಾರಣಕ್ಕೆ ಮಂಡ್ಯ, ಮೈಸೂರು ಭಾಗದ ಜನರಿಗೂ ಕುಡಿಯುವ ನೀರಿಗೆ ಸಮಸ್ಯೆಯಾಗುವ ಸ್ಥಿತಿಯನ್ನು ಸರ್ಕಾರವೇ ನಿರ್ಮಾಣ ಮಾಡುತ್ತಿದೆ ಎಂದು ಆರೋಪಿಸಿದರು. ಸರ್ಕಾರ ಜನರ ದೃಷ್ಠಿಯಿಂದ ಯೋಚಿಸುತ್ತಿಲ್ಲ. ಅವರೊಳಗಿನ ಗೊಂದಲದ ಕಾರಣಕ್ಕೆ ರಾಜ್ಯದ ಜನರ ಹಿತದೃಷ್ಠಿ ಬಲಿಕೊಡುವ ಕೆಲಸ ಆಗುತ್ತಿದೆ. ನಮ್ಮ ಜಲಾಶಯಗಳಲ್ಲಿ ನೀರಿಲ್ಲ ಎನ್ನುವುದನ್ನು ಗಟ್ಟಿ ಧ್ವನಿಯಲ್ಲಿ ಮನವರಿಕೆ ಮಾಡಬೇಕಿತ್ತು. ಅದು ಆಗುತ್ತಿಲ್ಲ ಎಂದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!