May 20, 2024

MALNAD TV

HEART OF COFFEE CITY

ಕಾಡಿನಿಂದ ನಾಡಿಗೆ ಪ್ರಾಣಿಗಳು ಬರಲು ಬಫರ್ ಝೋನ್ ನಿಯಮವೇ ಕಾರಣ : ವಿಜಯ್ ಕುಮಾರ್

1 min read

ಕಸ್ತೂರಿ ರಂಗನ್ ವರದಿ ಮುಳ್ಳಯನಗಿರಿ ಮೀಸಲು ಅರಣ್ಯ ಸಮಸ್ಯೆ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಚರ್ಚೆಗೆ ಬಾರದೆ ಜಿಲ್ಲೆಯ ಜನರಿಗೆ ದ್ರೋಹವಾಗಿದೆ ಎಂದು ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ವಿಜಯ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು

ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಕಸ್ತೂರಿರಂಗನ್ ವರದಿ, ಡೀಮ್ಡ್ ಅರಣ್ಯ, ಇನಾಂ ಭೂಮಿ, ಸೊಪ್ಪಿನ ಬೆಟ್ಟ, ಅರಣ್ಯ, ಕಂದಾಯ ಭೂಮಿ ಈ ಎಲ್ಲ ಸಮಸ್ಯೆಗಳನ್ನು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮರೆಮಾಚಿ ಸಮಸ್ಯೆಗೂ ನಮಗೂ ಸಂಬಂಧವೇ ಇಲ್ಲ ಎನ್ನುವಂತೆ ಜನಪ್ರತಿನಿಧಿಗಳು ನಡೆದುಕೊಂಡ್ರು ಅಕ್ರಮ-ಸಕ್ರಮ, ದರಖಾಸ್ತು ಮತ್ತಿತರೆ ರೈತರ ಭೂಮಿಗಳನ್ನು ದಶಕಗಳಿಂದ ಪೋಡಿ ಮಾಡುತ್ತಿಲ್ಲ. ಸಮಸ್ಯೆ ಇತ್ಯರ್ಥಪಡಿಸಬೇಕಿರುವ ಎಫ್‌ಎಸ್‌ಓಗಳು ಸಿವಿಲ್ ನ್ಯಾಯಾಧೀಶರಂತೆ ಕಾರ್ಯನಿರ್ವಹಿಸಬೇಕು ಎಂಬ ನಿಯಮವಿದೆ. ಆದರೆ. ಇವರನ್ನು ಸ್ವ ಇಚ್ಛೆಯಿಂದ ಕೆಲಸ ಮಾಡಲು ಅರಣ್ಯ ಇಲಾಖೆ ಅಧಿಕಾರಿಗಳು ಬಿಡುತ್ತಿಲ್ಲ ಎಂದು ವಿಜಯಕುಮಾರ್ ಆರೋಪಿಸಿದ್ದಾರೆ. ಇದೇ ವೇಳೆ ಮಾತನಾಡಿದ ಅವರು ಈಗಾಗಲೇ ಕಾಡು ಪ್ರಾಣಿಗಳು ಕಾಡನ್ನು ಬಿಟ್ಟು ನಾಡಿಗೆ ವಲಸೆ ಬರುತ್ತಿದ್ದು ಜನರಲ್ಲಿ ಜೀವ ಭಯದ ಆತಂಕ ಉಂಟುಮಾಡಿದೆ. ಬಫರ್ ಝೋನ್ ಕಾರಣದಿಂದ ಈ ಕಂಟಕ ಉಲ್ಬಣ ಆಗಲಿದ್ದು, ಜಿಲ್ಲಾಡಳಿತ ಜನಪ್ರತಿನಿಧಿಗಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸಮಾಲೋಚನೆ ನಡೆಸಿ, ಇದಕ್ಕೆ ಶಾಶ್ವತ ಪರಿಹಾರ ರೂಪಿಸಬೇಕೆಂದು ಅವರು ಒತ್ತಾಯಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!