May 20, 2024

MALNAD TV

HEART OF COFFEE CITY

ರಸ್ತೆ ಮಧ್ಯೆ ಗಂಟೆಗಟ್ಟಲೆ ನಿಂತಲ್ಲೇ ನಿಂತ ಒಂಟಿ ಸಲಗ

1 min read

 

 

ಚಾರ್ಮಾಡಿ ಘಾಟಿಯಲ್ಲಿ ಒಂಟಿ ಸಲಗವೊಂದು ಗಂಟೆ ಗಟ್ಟಲೆ ರಸ್ತೆ ಮಧ್ಯೆ ನಿಂತು ವಾಹನ ಸವಾರರಿಗೆ ಗಾಬರಿ ಹುಟ್ಟಿಸಿದೆ. ಘಾಟಿಯ ಎರಡನೇ ತಿರುವಿನಲ್ಲಿ ನಿಂತಲ್ಲೇ ನಿಂತಿದ್ದು ದಕ್ಷಿಣ ಕನ್ನಡ ಜಿಲ್ಲೆಗೆ ತೆರಳಲು ವಾಹನಗಳು ಸಾಗದೆ ಗಂಟೆ ಯಿಂದ ಟ್ರಾಫಿಕ್ ಜಾಮ್ ಉಂಟಾಗಿದೆ. 

 

ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ದಿನೆ ದಿನೇ ಹೆಚ್ಚುತ್ತಿದ್ದು ನಿತ್ಯ ಬೇರೆ ಬೇರೆ ಕಾರಣಗಳಿಗೆ ಸುದ್ದಿಯಲ್ಲಿರುವ ಚಾರ್ಮಾಡಿ ಘಾಟ್ ನಲ್ಲಿ ಒಂಟಿ ಸಲಗ ರಸ್ತೆ ಮಧ್ಯೆ ಬಂದು ನಿಂತು ಗಂಟೆಗೂ ಹೆಚ್ಚು ಕಾಲ ಸಂಚಾರ ಬಂದ್ ಆಗುವ ಜೊತೆಗೆ ವಾಹನಗಳ ಸವಾರರು ಗಾಬರಿಗೊಂಡು ನಿಂತಲ್ಲೇ ನಿಲ್ಲುವಂತಾಗಿತ್ತು, ಚಾರ್ಮಾಡಿ ಘಾಟ್ ನ ಎರಡನೇ ತಿರುವಿನಲ್ಲಿ ಬಂದು ನಿಂತ ಕಾಡಾನೆ ಅಲುಗಾಡದೆ ಗಂಟೆಯಾದರೂ ಕದಲದೆ ರಸ್ತೆಯಲ್ಲಿ ಹೋಗುವ ಬರುವ ಜನರಿಗೆ ಗಾಬರಿ ಉಂಟುಮಾಡಿತ್ತು, ದಕ್ಷಿಣ ಕನ್ನಡ ಜಿಲ್ಲೆಗೆ ತೆರಳುವ, ಇತ್ತ ಚಿಕ್ಕಮಗಳೂರು ಕಡೆಗೆ ಬರುವ ವಾಹನಗಳು ಗಂಟೆಯಾದರೂ ನಿಂತಲ್ಲೇ ನಿಲ್ಲುವಂತೆ ಪರಿಸ್ಥಿತಿ ನಿರ್ಮಾಣವಾಗಿತ್ತು, ಕೆಲವು ವೇಳೆ ಅತ್ತಿತ್ತ ಓಡಾಡುವ ವೇಳೆ ಹತ್ತಿರವಿದ್ದ ವಾಹನ ಸವಾರರು ಭೀತಿಯಿಂದ ವಾಪಸ್ ಹೋಗುತ್ತಿರುವ ಘಟನೆ ಸಹಾ ನಡೆದಿದೆ. ಇನ್ನು ಆನೆಯ ಚಲನವಲನ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯುತ್ತಾ ಕೆಲವರು ನಿರತರಾಗಿದ್ದರು. ಜಿಲ್ಲೆಯಲ್ಲಿ ಕಾಡಾನೆ ಹಾವಳಿ ವಿಪರೀತವಾಗಿದ್ದು ಎಲ್ಲಿ ಏನು ಅನಾಹುತ ಸಂಭವಿಸುತ್ತೊ ಎಂದು ಕಾಯುವಂತಾಗಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!