May 7, 2024

MALNAD TV

HEART OF COFFEE CITY

ಮೂಲಭೂತ ಸೌಲಭ್ಯಕ್ಕಾಗಿ ಮೋದಿಗೆ ಪತ್ರ, ಹಳ್ಳಿಗರ ಜೊತೆ ಮಾತನಾಡಲಿರುವ ನಮೋ

1 min read

 

ಚಿಕ್ಕಮಗಳೂರು.: ಕಳೆದ 10 ವರ್ಷಗಳಿಂದ ರೋಡು, ನೀರು, ವಿದ್ಯುತ್, ಶಿಕ್ಷಣ ಯಾವುದೂ ಇಲ್ಲದೆ ಬದುಕುತ್ತಿದ್ದ ಜನ ಜಿಲ್ಲೆಯ ಕಳಸ ತಾಲೂಕಿನ ಕಾಡಂಚಿನ ಕುಗ್ರಾಮ ಕುಂಬಳಡಿಕೆಯ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದು ಮುಂದಿನ ಹತ್ತು ದಿನದಲ್ಲಿ ಪ್ರಧಾನಿ ಮೋದಿಯೇ ಆ ಹಳ್ಳಿಯ ಜನರ ಜೊತೆ ಸಮಸ್ಯೆಯ ಬಗ್ಗೆ ಮಾತನಾಡಲಿದ್ದಾರೆ. ದೇಶಕ್ಕೆ ಸ್ವತಂತ್ರ ಬಂದು ಏಳೂವರೆ ದಶಕಗಳೇ ಕಳೆದರು ಈ ಹಳ್ಳಿಯ ಜನ ನಿರ್ಗತಿಕರು-ನಿರಾಶ್ರಿತರಂತೆಯೇ ಬದುಕುತ್ತಿದ್ದಾರೆ. ಜನನಾಯಕರು-ಅಧಿಕಾರಿಗಳಿಗೆ ಹೇಳಿ-ಹೇಳಿ ಸಾಕಾಯ್ತು. ಮನವಿ ಮಾಡಿ…ಮಾಡಿ…. ಸುಸ್ತಾಯ್ತು. ಹಾಗಾಗಿ, ಕೊನೆಗೆ ನಮ್ಮ ಪಾಲಿಗೆ ಪ್ರಧಾನಿ ಮೋದಿಯಾದ್ರು ಇದ್ದಾರ ನೋಡೋಣ ಎಂದು ಮೋದಿಗೆ ಪತ್ರ ಬರೆದಿದ್ದಾರೆ. ಪತ್ರ ಬರೆದ ಕೂಡಲೇ ಮೋದಿ ಕಚೇರಿಯಿಂದ ಉತ್ತರ ಕೂಡ ಬಂದಿದ್ದು, ಖುದ್ದು ಪ್ರಧಾನಿಯೇ ನಿಮ್ಮ ಜೊತೆ ಸಮಸ್ಯೆ ಬಗ್ಗೆ ಮಾತನಾಡಲಿದ್ದಾರೆ ಎಂದು ಪತ್ರ ಬಂದಿದೆ. ಇದರಿಂದ ಹಳ್ಳಿಗರಲ್ಲೂ ಖುಷಿಯಾಗಿದೆ.

ಈ ಗ್ರಾಮದಲ್ಲಿ ಬರೋಬ್ಬರಿ 70ಕ್ಕೂ ಹೆಚ್ಚು ಕುಟುಂಬಗಳಿವೆ. ಅವರ ನೋವಿನ ಕೂಗೂ ಯಾರಿಗೂ ಕೇಳಿಸಿಲ್ಲ. ಏಕೆಂದರೆ, ಇಲ್ಲಿನ ಜನ ಟಾರ್ಪಲ್‍ನಲ್ಲಿ ತಾತ್ಕಾಲಿಕ ಶೆಡ್ ಹಾಕಿಕೊಂಡು ಬದುಕುತ್ತಿದ್ದಾರೆ. ಇಲ್ಲಿನ ಜನ ಹಲವು ದಶಕಗಳಿಂದ ಹೀಗೆ ಬದುಕುತ್ತಿರೋದು. ಇಲ್ಲಿಗೆ ಬಂದು 10 ವರ್ಷವಾಗಿದೆ. ಅಂದಿನಿಂದಲೂ ಹೀಗೆ ಇದ್ದಾರೆ. ಜಿಲ್ಲಾಡಳಿತ-ಜನಪ್ರತಿನಿಧಿಗಳಿ ಮನವಿ ಮಾಡಿ…ಮಾಡಿ… ಸುಸ್ತಾದ ಈ ಗಿರಿಜನರು ಇದೀಗ ಪ್ರಧಾನಿ ನರೇಂದ್ರ ಮೋದಿ ಮೊರೆ ಹೋಗಿದ್ದಾರೆ. ಖುದ್ದು ಗ್ರಾಮಸ್ಥರೇ ಪ್ರಧಾನಿಗೆ ಪತ್ರ ಬರೆದು ತಮ್ಮ ಗ್ರಾಮದ ಸಮಸ್ಯೆ ಹೇಳಿಕೊಂಡಿದ್ದಾರೆ.

 

 

ಹಳ್ಳಿಗರ ನೋವಿಗೆ ಎಚ್ಚೆತ್ತ ಪ್ರಧಾನಿ ಕಾರ್ಯಾಲಯ ಇದೀಗ ಸಂತ್ರಸ್ಥರ ನೆರವಿಗೆ ನಿಂತಿದೆ. ಮುಂದಿನ ಹತ್ತು ದಿನದಲ್ಲಿ ಖುದ್ದು ಪ್ರಧಾನಿ ಮೋದಿಯೇ ನಿಮಗೆ ಕರೆ ಮಾಡಿ ಸಮಸ್ಯೆ ಆಲಿಸುತ್ತಾರೆ ಎಂದು ಪ್ರಧಾನಿ ಕಾರ್ಯಾಲಯದಿಂದ ತಿಳಿಸಿರುವುದಕ್ಕೆ ಗ್ರಾಮಸ್ಥರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ನಿಮಗೆ ಏನು ಬೇಕು ಅಂತ ಕಳೆದ 10 ವರ್ಷದಿಂದ ಯಾವ ಅಧಿಕಾರಿಗಳಾಗಲಿ, ಜನಪ್ರತಿನಿಧಿಯಾಗಲಿ ಬಂದಿಲ್ಲ. ಯಾರಾದರೂ ಬಂದರೆ ಸಮಸ್ಯೆ ಹೇಳಿಕೊಳ್ಳಬಹುದು. ಯಾರೂ ಬರದಿದ್ದರೆ ಹೇಗೆ ಹೇಳೋದು. ನಾವು ಹೇಳಿ…ಹೇಳಿ… ಸಾಕಾಗಿದೆ ಎಂದು ಹಳ್ಳಿಗರ ತಮ್ಮ ಅಸಹಾಯಕ ಸ್ಥಿತಿಯನ್ನ ಹೊರಹಾಕುತ್ತಿದ್ದಾರೆ. ಇಲ್ಲಿ ಟಾರ್ಪಲ್ ಕಟ್ಟಿಕೊಂಡು ಬದುಕುತ್ತಿರೋರೆ ಹೆಚ್ಚು. ಇದು ಯತೇಚ್ಛಚಾಗಿ ಮಳೆ ಬೀಳುವ ಪ್ರದೇಶ. ಜೋರು ಮಳೆ ಬಂದರೆ ಮನೆಯೊಳಗೆ ನೀರು ನಿಲ್ಲುತ್ತೆ. ಆ ರೀತಿ ಬದುಕುತ್ತಿದ್ದಾರೆ ಇಲ್ಲಿನ ಜನ. ಇಲ್ಲಿ ಕರೆಂಟ್ ಇಲ್ಲ. ಸೀಮೆಎಣ್ಣೆಯೂ ಸಿಗಲ್ಲ. ಇಲ್ಲಿನ ಜನ ಡಿಸೇಲ್‍ನಲ್ಲಿ ದೀಪ ಉರಿಸಿಕೊಂಡು ಬದುಕ್ತಿದ್ದಾರೆ. ಮಕ್ಕಳು ಓದೋದು ಕೂಡ ಅದೇ ಡಿಸೇಲ್ ಬೆಳಕಲ್ಲಿ. ಹಾಗಾಗಿ, ಹಲವು ವರ್ಷಗಳಿಂದ ತಮ್ಮ ಸ್ಥಳೀಯ ಜನಪ್ರತಿನಿಧಿಗಳಿಗೆ ತಮ್ಮ ಸಂಕಷ್ಟ ಹೇಳಿ ರೋಸಿ ಹೋದ ಜನ ನಮ್ಮ ಪಾಲಿಗೆ ಪ್ರಧಾನಿಯಾದರೂ ಇದ್ದಾರಾ ಎಂದು ಪತ್ರ ಬರೆದಿದ್ದಾರೆ. ಕೂಡಲೇ ಪ್ರಧಾನಿ ಕಾರ್ಯಾಲಯದಿಂದ ಪತ್ರ ಬಂದಿದ್ದು, ಗಿರಿಜನರ ಸಂಕಷ್ಟಕ್ಕೆ ನೆರವಾಗಲು ಮುಂದಾಗಿದ್ದಾರೆ. ಗ್ರಾಮಸ್ವರಾಜ್ಯ, ಗ್ರಾಮ ನೈರ್ಮಲ್ಯ, ಗ್ರಾಮ ರಾಮರಾಜ್ಯ ಅಂತೆಲ್ಲಾ ವೇದಿಕೆ ಮೇಲೆ ಮಾರುದ್ಧ ಭಾಷಣ ಬಿಗಿಯೋ ಜನಪ್ರತಿನಿಧಿಗಳು ಜಾಗ ನೀಡಿದ ಮೇಲೆ ಕನಿಷ್ಟ ಮೂಲಭೂತ ಸೌಕರ್ಯ ನೀಡದಿರೋದು ನಿಜಕ್ಕೂ ದುರಂತ. ಈಗ ಪ್ರಧಾನಿ ಕಾರ್ಯಲಯದಿಂದ ಹಳ್ಳಿಗರ ಪತ್ರಕ್ಕೆ ಉತ್ತರವೇನೋ ಬಂದಿದೆ. ಆದ್ರೆ, ಕೆಲಸ ಆಗುತ್ತೋ ಇಲ್ವೋ ಗೊತ್ತಿಲ್ಲ. ಮೋದಿ ಮಾತನಾಡಿದ ಕೂಡಲೇ ಕೆಲಸ ಆಗಬೇಕು ಅಂದ್ರೆ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಕಾರ್ಯಪ್ರವೃತ್ತರಾಗಬೇಕು. ಅದು ಆಗುತ್ತಾ… ಇಷ್ಟು ವರ್ಷ ಮಾಡದವರು ಈಗ ಮಾಡುತ್ತಾರಾ ಕಾದುನೋಡ್ಬೇಕು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!