May 19, 2024

MALNAD TV

HEART OF COFFEE CITY

ಎಚ್.ಡಿ ಕುಮಾರಸ್ವಾಮಿ ಕಿಂಗ್ ಆಫ್ ಬ್ಲಾಕ್ ಮೇಲರ್ : ಡಿ.ಕೆ ಶಿವಕುಮಾರ್

1 min read

 

 

ಎಚ್.ಡಿ ಕುಮಾರಸ್ವಾಮಿ ಕಿಂಗ್ ಆಫ್ ಬ್ಲಾಕ್ ಮೇಲರ್ ಆಗಿದ್ದು ರಾಜಕಾರಣಿಗಳು ಆಫೀಸರ್ ಗಳನ್ನು ಹೆದರಿಸುತ್ತಾರೆ ಅವರದ್ದು ಇದೆ ಕೆಲಸ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಆರೋಪಿಸಿದ್ದಾರೆ. ಪೆನ್ ಡ್ರೈವ್ ಪ್ರಕರಣದ ಡೈರೆಕ್ಟರ್ ಪ್ರೊಡ್ಯುಸರ್ ಎಲ್ಲಾ ಎಚ್.ಡಿ ಕೆಯವರೆ ಎಂದು ಡಿ.ಕೆ ಹೇಳಿದ್ದಾರೆ

 

ಪೆನ್ ಡ್ರೈವ್ ವಿಚಾರ ಎಲ್ಲಾ ಕುಮಾರಸ್ವಾಮಿಯವರಿಗೆ ಗೊತ್ತು

ಕುಮಾರಣ್ಣನಿಗೆ ನನ್ನ ರಾಜೀನಾಮೆ ಬೇಕಂತೆ, ಒಕ್ಕಲಿಗ ನಾಯಕರ ಪೈಪೋಟಿಯಂತೆ, ಅವರಿಗೆ ನನ್ನ ರಾಜೀನಾಮೆ ಬೇಕಂತೆ ಕೊಡೋಣ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಚಿಕ್ಕಮಗಳೂರಿನಲ್ಲಿ ಹೇಳಿದ್ದಾರೆ. ಎಲ್ಲರನ್ನ ಮುಗಿಸೋದೇ ಅಲ್ವಾ ಅವರ ಕೆಲಸ, ಕುಮಾರಸ್ವಾಮಿ ಅವರೇ ಕಿಂಗ್ ಆಫ್ ಬ್ಲಾಕ್ ಮೇಲರ್ ಆಗಿದ್ದು 

ಆಫೀಸರ್ಸು, ಪೊಲಿಟಿಷಿಯನ್ಸ್ ಗಳಿಗೆ ಹೆದರಿಸುತ್ತಿದ್ದಾರೆ ಅವರದ್ದು ಇದೇ ಕೆಲಸ ಎಂದು ಡಿ.ಕೆ ಗಂಭೀರವಾಗಿ ಎಚ್.ಡಿ.ಕೆಗೆ ತಿರುಗೇಟು ನೀಡಿದರು. ಇದೆಲ್ಲವನ್ನ 

ಚರ್ಚೆ ಮಾಡಲು ಟೈಮ್ ಇದೆ ಅಸೆಂಬ್ಲಿಗೆ ಎಲ್ಲಾ ತಗೊಂಡ್ ಬರ್ಲಿ ಚರ್ಚೆ ಮಾಡೋಣ ಎಂದು ಶಿವಕುಮಾರ್ ಸವಾಲು ಹಾಕಿದರು. 

ದೇವೇಗೌಡರು ಮತ್ತು ನನ್ನ ಹೆಸರು ತೆಗೆದುಕೊಳ್ಳುವುದು ಬೇಡ ಅಂದಿದ್ದು

ಅವರದ್ದೇ ಬೇರೆ ಫ್ಯಾಮಿಲಿ ನಮ್ಮದೇ ಬೇರೆ ಫ್ಯಾಮಿಲಿ ಎಂದಿದ್ರು 

ಉಪ್ಪು ತಿಂದವನು ನೀರು ಕುಡಿಬೇಕು ಎಂದವರು ಈಗ ಯಾಕೆ ಉರಿ ಮಾಡಿಕೊಳ್ಳುತ್ತಿದ್ದಾರೆ ಇವರು ಲಾಯರ್ರಾ, ಜಡ್ಜಾ… ಹೋಗಿ ವಾದ ಮಾಡಲಿ, ಶಿವಕುಮಾರ್, ಸಿದ್ದರಾಮಯ್ಯ, ಸುರ್ಜೆವಾಲ ಒಳಗೊಂಡ ಇನ್ವೆಸ್ಟಿಗೇಷನ್ ಟೀಮ್ 

ಕಥಾನಾಯಕ, ಡೈರೆಕ್ಟರ್, ಪ್ರೋಡ್ಯೂಸರ್ ಎಲ್ಲಾ ಕುಮಾರಸ್ವಾಮಿಯವರೇ, ಆಗಿದ್ದು, ಎಲ್ಲಾ ಅವರಿಗೆ  ಗೊತ್ತಿದೆ. 

ಅವರು ಕಾರ್ಯಕರ್ತರು ಅಂತೆ, ಮರ್ಯಾದೆ ಇದ್ರೆ ಹೋಗಿ ಧೈರ್ಯ ತುಂಬಲಿ, ಕುಮಾರಸ್ವಾಮಿಗೆ ನನ್ನ ಮೇಲೆ ಮಾತಾಡದಿದ್ರೆ ಮಾರ್ಕೆಟ್ ಓಡಲ್ಲ ನನ್ನ ಹೆಸರು ಇರದಿದ್ರೆ ನೀವು ತೊರ್ಸಲ್ಲ ಎಂದು ಮಾಧ್ಯಮದವರನ್ನೆ ಕೇಳಿದರು. 

ನನ್ನ ಹೆಸರು ಇಲ್ಲದಿದ್ರೆ ಪಾಪ ಅವರಿಗೆ ನಿದ್ದೆಯೇ ಬರಲ್ಲ ಎಂದು 

ಚಿಕ್ಕಮಗಳೂರಿನಲ್ಲಿ ಡಿ ಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!