May 16, 2024

MALNAD TV

HEART OF COFFEE CITY

ಪ್ರಜ್ವಲ್ ರೀತಿಯ ಜೆಡಿಎಸ್ ಮುಖಂಡ ಚಿಕ್ಕಮಗಳೂರಲ್ಲಿ ಇದ್ದಾನೆ

1 min read

ಪ್ರಜ್ವಲ್ ರೇವಣ್ಣ ಮಾದರಿಯಲ್ಲಿ ಚಿಕ್ಕಮಗಳೂರಿನ ಜಿಡಿಎಸ್ ಮುಖಂಡರೊಬ್ಬರದ್ದು ಅಶ್ಲೀಲ ವಿಡಿಯೋ ಇದ್ದು ಶೀಘ್ರ ಹೊರಬರಬಹುದು ಎಂದು ಕೆ.ಪಿ.ಸಿ.ಸಿ ವಕ್ತಾರ ಎಚ್ ಎಚ್ ದೇವರಾಜ್ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಪ್ರಜ್ವಲ್ ರೀತಿಯ ನಾಯಕರು ನಮ್ಮಲ್ಲೂ ಇದ್ದಾರೆ ಎಂದಿರುವ ದೇವರಾಜ್ ಮುಂದೆ ಕಾದು ನೋಡಿ ಎನ್ನುತ್ತಿದ್ದಾರೆ.

ರಾಜ್ಯದಲ್ಲಿ ಬಾರೀ ಸದ್ದು ಮಾಡುತ್ತಿರುವ ಪ್ರಜ್ವಲ್ ರೇವಣ್ಣ ಸೆಕ್ಸ್ ಸ್ಕ್ಯಾಂಡಲ್ ರೀತಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಜೆಡಿಎಸ್ ಮುಖಂಡರೊಬ್ಬರದ್ದು ಅಶ್ಲೀಲ ವಿಡಿಯೋ ಇದೆ ಅದೂ ಮುಂದೊಂದು ದಿನ ಹೊರಬರಬಹುದು ಎಂದು ಕೆ.ಪಿ.ಸಿ.ಸಿ ವಕ್ತಾರ ಎಚ್ ಎಚ್ ದೇವರಾಜ್ ಗಂಭೀರ ಹೇಳಿಕೆ ನೀಡಿದ್ದಾರೆ. ತಾನು ದಶಕಗಳ ಕಾಲ ಜೆಡಿಎಸ್ ಪಕ್ಷದಲ್ಲಿ ಇದ್ದೆ ಆದರೆ ಅಲ್ಲಿದ್ದೆ ಎಂದು ಹೇಳಿಕೊಳ್ಳಲು ಅಸಹ್ಯ ಹುಟ್ಟಿಸುತ್ತದೆ ಎಂದು ಹೇಳಿರುವ ಅವರು ಪ್ರಜ್ವಲ್ ರೀತಿಯ ಪ್ರಕರಣ ಎಚ್ ಡಿ ಕುಮಾರಸ್ವಾಮಿ ಯವರದ್ದು ಹೊರಬಂದರೂ ಆಶ್ಚರ್ಯ ಪಡುವಂತಿಲ್ಲ ಎಂದರು. ಅಲ್ಲದೇ ರಾಧಿಕಾ ಕುಮಾರಸ್ವಾಮಿ ಮುಂದೆ ಬಂದು ದೂರು ನೀಡಿದರೆ ಕಾಂಗ್ರೆಸ್ ಮಹಿಳಾ ಘಟಕ ಅವರಿಗೆ ನ್ಯಾಯ ಕೊಡಿಸಲು ಸಿದ್ದವಿದೆ ಎಂದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಜೆಡಿಎಸ್ ನಾಯಕನೊಬ್ಬನು ಪ್ರಜ್ವಲ್ ರೀತಿಯೆ ಇದ್ದಾನೆ ಎಂದಿರುವ ಎಚ್ ಎಚ್ ದೇವರಾಜ್ ಹೇಳಿದ್ದಾರೆ. ಬದುಕಲು ನಾಲಾಯಕ್ ಅವನು ಎಂದು ಪ್ರಜ್ವಲ್ ವಿರುದ್ಧ ಗುಡುಗಿದ ಅವರು ಕೂಡಲೇ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದ್ದಾರೆ

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!