May 10, 2024

MALNAD TV

HEART OF COFFEE CITY

ಸೋರುತಿಹುದು ಶಾಲೆ ಮಾಳಿಗೆ – ಜ್ಞಾನ ದೇಗುಲದಿ ವಿದ್ಯಾರ್ಥಿಗಳ ಪರದಾಟ

1 min read

ಚಿಕ್ಕಮಗಳೂರು: ರಾಜ್ಯದಲ್ಲಿ ಮಠ್ಯಪುಸ್ತಕ ಪರಿಷ್ಕರಣೆ ಸಂಬಂಧ ಬಾರೀ ಚರ್ಚೆ ನಡೆಯು ತ್ತಿದೆ. ಆದರೆ, ಮಲೆನಾಡಿನ ಶಾಲೆಯೊಂದರ ವಿದ್ಯಾರ್ಥಿಗಳು ಮಳೆಯಿಂದ ನೆನೆದ ಪುಸ್ತಕ ಗಳನ್ನು ಬಿಸಿಲಿನಲ್ಲಿ ಒಣಗಿಸಿ ಓದಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರಿಂದ ಬೇಸತ್ತ ಪೋಷಕರು ವಿದ್ಯಾರ್ಥಿಗಳನ್ನು ಬೇರೆ ಶಾಲೆಗೆ ಸೇರಿಸಲು ಮುಂದಾಗಿದ್ದಾರೆ.
ಖಾಸಗಿ ಶಾಲೆಗಳ ಅಬ್ಬರದಲ್ಲಿ ಇಂದು ಸರ್ಕಾರಿ ಬಹುತೇಕ ಶಾಲೆಗಳ ಬಾಗಿಲು ಮುಚ್ಚು ತ್ತಿವೆ. ಇಂತಹ ಪರಿಸ್ಥಿತಿಯಲ್ಲೂ ಬಡ ವಿದ್ಯಾರ್ಥಿಗಳೇ ಹೆಚ್ಚಾಗಿರುವ ಶಾಲೆಯ ಪರಿಸ್ಥಿತಿ ಹೀಗಾಗಿದ್ದು ನಿತ್ಯ ಪೋಷಕರು ಹಿಡಿಶಾಪ ಹಾಕುತ್ತಿದ್ದಾರೆ.

ಜಿಲ್ಲೆಯ ಕಳಸ ತಾಲ್ಲೂಕು ತನೋಡಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಪರಿಸ್ಥಿತಿ ಇದಾಗಿದೆ. ಮಲೆನಾಡು ಎಂದರೇ ಮಳೆಯ ಅಬ್ಬರ ತುಸು ಜಾಸ್ತಿಯೇ, ಬಾರೀ ಮಳೆ ಬಂದರೇ ಈ ಶಾಲೆ ಸೋರುತ್ತದೆ. ಪಠ್ಯಪುಸ್ತಕಗಳು ಮಳೆ ನೀರಿನಿಂದ ನೆನೆದು ಹೋಗುತ್ತದೆ. ಮತ್ತೇ ಪುಸ್ತಕವನ್ನು ಬಳಕೆ ಮಾಡಬೇಕು ಎಂದರೇ ಬಿಸಿಲು ಮೂಡುವರೆಗೂ ಕಾದು ಪುಸ್ತಕಗಳನ್ನು ಒಣಸಿಗಿಕೊಂಡು ಉಪಯೋಗಿಸುವ ಸ್ಥಿತಿ ಇದೆ.
ಈ ಶಾಲೆಯಲ್ಲಿ 1ನೇ ತರಗತಿಯಿಂದ 5ನೇ ತರಗತಿ ವರೆಗೂ ಇದ್ದು, 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಜ್ಞಾನಾರ್ಜನೆ ಮಾಡುತ್ತಿದ್ದಾರೆ. ಇಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾ ರ್ಥಿಗಳು ಬಡ ಕುಟುಂಬದವರಾಗಿದ್ದು, ಶಾಲಾ ಕಟ್ಟಡ ಸಂಪೂರ್ಣ ಶಿಥಿಲವಾಗಿದೆ. ಜೋರು ಮಳೆ ಬಂದರೇ ಮಳೆನೀರು ಶಾಲಾ ಕೊಠಡಿಯೊಳಗೆ ತುಂಬಿಕೊಳ್ಳುತ್ತದೆ.
ಶಾಲಾ ಕಟ್ಟಡದ ಮೇಲ್ಚಾವಣಿ ಸಂಪೂರ್ಣ ಶಿಥಿಲಗೊಂಡಿದ್ದು, ಶಾಲಾ ಕೊಠಡಿಯ ಎಲ್ಲೆಂ ದರಲ್ಲಿ ಸೋರುತ್ತದೆ. ಪಠ್ಯಪುಸ್ತಕಗಳು ಮಳೆನೀರಿನಿಂದ ಒದ್ದೆಯಾಗುತ್ತಿದ್ದು, ಬಿಸಿಲಿನಲ್ಲಿ ಒಣ ಗಿಸಿ ಓದಬೇಕಾಗಿದ್ದು, ಇದರಿಂದ ಬೇಸತ್ತ ಪೋಷಕರು ಬೇರೆ ಶಾಲೆಯತ್ತಾ ಮುಖ ಮಾಡಿ ದ್ದಾರೆ.

 

 

ಇತ್ತೀಚೆಗೆ ಸುರಿದ ಬಾರೀ ಮಳೆಗೆ ಶಾಲಾ ಕೊಠಡಿಯೊಳಗೆ ನೀರು ತುಂಬಿಕೊಂಡು ಪಠ್ಯ ಪಸ್ತಕಗಳು ಒದ್ದೆಯಾಗಿದ್ದು, ಪಠ್ಯಪುಸ್ತಕಗಳನ್ನು ಮಕ್ಕಳು ಬಿಸಿಲಿನಲ್ಲಿ ಒಣಗಿಸಿರುವ ದೃಶ್ಯ ಮನಕಲಕುವಂತಿದೆ. ಸರ್ಕಾರಿ ಶಾಲೆ ಎಂದರೇ ದೂರ ನಿಲ್ಲುವ ಪೋಷಕರ ನಡುವೆ ಸರ್ಕಾರಿ ಶಾಲೆಯನ್ನು ಉಳಿಸಬೇಕಿದೆ. ಶಿಥಿಲಗೊಂಡಿರುವ ಶಾಲಾ ಕಟ್ಟಡವನ್ನು ದುರಸ್ಥಿಗೊಳಿಸಿ ಶಾಲೆಯನ್ನು ಉಳಿಸಲು ಜಿಲ್ಲಾಡಳಿತ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಬೇ ಕೆಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!