May 10, 2024

MALNAD TV

HEART OF COFFEE CITY

ಕಾಂಗ್ರೆಸ್, ಬಿಜೆಪಿ ಅಭಿವೃದ್ದಿಗೆ ಹಿನ್ನೆಡೆ_ಸುಧಾಕರ್ ಶೆಟ್ಟಿ

1 min read

 

ಕೊಪ್ಪ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಹಾಗೂ ಈ ಹಿಂದೆ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷಗಳು ಅಭಿವೃದ್ಧಿಯನ್ನು ಕಡೆಗಣಿಸಿವೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಜಿಡಿಎಸ್ ಒಂದೇ ಪರ್ಯಾಯ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ ಹೇಳಿದರು.ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ಜನತಾ ಜಲಧಾರೆ ರಥಾಯಾತ್ರೆ ಮಂಗಳವಾರ ಕೊಪ್ಪಕ್ಕೆ ಆಗಮಿಸಿದ ಸಂದರ್ಭದಲ್ಲಿ ಬಸ್‍ನಿಲ್ದಾಣದ ಆವರಣದಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಬಿಜೆಪಿ ಯುವ ಸಮುದಾಯದಲ್ಲಿ ಕೋಮು ವಿಷ ಬೀಜ ಬಿತ್ತಿ ಸಮಾಜವನ್ನು ಒಡೆಯುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ಕಾಂಗ್ರೆಸ್‍ನ ಸ್ವಾರ್ಥ ರಾಜಕಾರಣ ಆ ಪಕ್ಷವನ್ನೇ ಬಲಿತೆಗೆದುಕೊಂಡಿದೆ. ಮಲೆನಾಡಿನ ಒತ್ತುವರಿ ಸಮಸ್ಯೆ, ಕಸ್ತೂರಿ ರಂಗನ್ ವರದಿ, ಅಡಿಕೆ ಬೆಳೆಗಾರರ ಸಮಸ್ಯೆ, ವಸತಿ ರಹಿತರ ಸಮಸ್ಯೆ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಕೇಂದ್ರದಲ್ಲಿ ಬಿಜೆಪಿಯ 25 ಸಂಸದರಿದ್ದರೂ ಅಡಿಕೆ ಸಮಸ್ಯೆ ಬಗ್ಗೆ ಚಕಾರವೆತ್ತುತ್ತಿಲ್ಲ. ಲೋಕಸಭೆಯಲ್ಲಿ ಅಡಿಕೆ ಕೊನೆ ಪ್ರದರ್ಶಿಸಿ ಗಮನಸೆಳೆದದ್ದು ಎಚ್.ಡಿ. ದೇವೇಗೌಡರು.

ಬಿಜೆಪಿ, ಕಾಂಗ್ರೆಸ್‍ನ ಜನಪ್ರತಿನಿಧಿಗಳು ಹೈಕಮಾಂಡ್‍ನ ಕೈಗೊಂಬೆಗಳಾಗಿದ್ದಾರೆ. ಅವರಿಂದ ಜನರ ಸಮಸ್ಯೆಗೆ ಪರಿಹಾರ ಸಿಗಲ್ಲ. ರಾಜ್ಯದ ಅಭಿವೃದ್ದಿಯೂ ಆಗಲ್ಲ ಎಂಬುದ ಸ್ಪಷ್ಟವಾಗಿದೆ. ರಾಜ್ಯ ಜನ ಬದಲಾವಣೆ ಬಯಸುತ್ತಿದ್ದಾರೆ. ಈ ಹಿಂದೆ ಎಚ್.ಡಿ. ಕುಮಾರಸ್ವಾಮಿ ನೇತ್ರತ್ವದ ಸರ್ಕಾರ ಇದ್ದಾಗ ರೈತರು, ಬಡವರು, ಹಿಂದುಳಿದವರು, ಅಲ್ಪಸಂಕ್ಯಾತರು, ಮಹಿಳೆಯರ ಪರವಾದ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರು. ಈಗಲೂ ಜೆಡಿಎಸ್ ಸರ್ಕಾರ ಬರಬೇಕು. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಬೇಕೆಂದು ಜನ ಬಯಸುತ್ತಿದ್ದಾರೆ. ಪರಿವರ್ತನೆ ಜಗದ ನಿಯಮ. ಈ ಹಿಂದೆ ಜೆಡಿಎಸ್‍ನಲ್ಲಿ ಅನೇಕ ಮುಖಂಡರು ಬೇರೆ ಪಕ್ಷಗಳಿಗೆ ಹೋಗಿದ್ದಾರೆ. ಈಗ ಮತ್ತು ಜೆಡಿಎಸ್ ಕಡೆ ಮುಖ ಮಾಡುತ್ತಿದ್ದಾರೆ. ಮತ್ತೊಮ್ಮೆ ಜೆಡಿಎಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕಾದರೆ ಶೃಂಗೇರಿ ಕ್ಷೇತ್ರದಲ್ಲೂ ಜೆಡಿಎಸ್ ಅಭ್ಯರ್ಥಿ ಗೆಲ್ಲಬೇಕು. ಮುಂದಿನ ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತದೆ. ಕ್ಷೇತ್ರದ ಜನತೆ ಜೆಡಿಎಸ್‍ಗೆ ಆಶೀರ್ವಾದ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದಕ್ಕೂ ಮೊದಲು ನರಸಿಂಹರಾಜಪುರದಿಂದ ಹೊರಟ ಜನತಾ ಜಲಧಾರೆ ರಥಾಯಾತ್ರೆ ಕುದುರೆಗುಂಡಿ ಮೂಲಕ ಕೊಪ್ಪಕ್ಕೆ ಆಗಮಿಸಿತು. ಇಲ್ಲಿನ ದ್ಯಾವೇಗೌಡ ವೃತ್ತದಿಂದ ಬಸ್‍ನಿಲ್ದಾಣದವರೆಗೆ ಬೃಹತ್ ಮೆರವಣಿಗೆ ಮೂಲಕ ರಥಾಯತ್ರೆ ಸಾಗಿಬಂತು. ಕಾರ್ಯಕ್ರಮದ ನಂತರ ನಾರ್ವೆ ಮೂಲಕ ಜಯಪುರಕ್ಕೆ ಹೋಯಿತು.

ಸಭೆಯಲ್ಲಿ ಜೆಡಿಎಸ್ ಮುಖಂಡರಾದ ಎಚ್.ಜಿ. ವೆಂಕಟೇಶ್, ಕ್ಷೇತ್ರಾಧ್ಯಕ್ಷ ದಿವಾಕರ್ ಭಟ್, ತಾಲ್ಲೂಕು ಅಧ್ಯಕ್ಷ ಕಗ್ಗಾ ರಾಮಸ್ವಾಮಿ, ಜನತಾ ಜಲಧಾರೆ ಸಂಚಾಲಕ ಎಚ್.ಎಸ್. ಕಳಸಪ್ಪ,ಎಸ್.ಎಸ್. ಸಂಜಯ್, ಶಿವಾಕರ ಶೆಟ್ಟಿ, ಎನ್.ಕೆ. ಉದಯ್, ತೇಜ, ಕಣಿವೆ ವಿನಯ್, ಬದ್ರಿಯಾ ಮೊಹ್ಮದ್ ಮತ್ತಿತರ ಗಣ್ಯರು ಪಾಳ್ಗೊಂಡಿದ್ದರು.
19ಕೊಪ್ಪ02: ಜೆಡಿಎಸ್ ಜಲಧಾರೆ ರಥಾಯತ್ರೆ ಮಂಗಳವಾರ ಕೊಪ್ಪಕ್ಕೆ ಆಗಮಿಸಿದ ಸಂದರ್ಭದಲ್ಲಿ ನಡೆದ ಬಹಿರಂಗ ಸಭೆಯನ್ನು ಉದ್ಧೇಶಿಸಿ ಪಕ್ಷದ ರಾಜ್ಯ ಉಪಾಧ್ಯಕ್ಷ ಸುಧಾಕರ ಶೆಟ್ಟಿ ಮಾತನಾಡಿದರು

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!