May 13, 2024

MALNAD TV

HEART OF COFFEE CITY

ಅವಕಾಶ ವಂಚಿತ ಮಹಿಳೆಯರಿಗೆ ಹೆಚ್ಚು ಅವಕಾಶ ಸಿಕ್ಕಾಗ ಸಮಾನತೆ ಸಾಧ್ಯ – ಸಿ.ಟಿ.ರವಿ

1 min read

ಚಿಕ್ಕಮಗಳೂರು-ಸಮಾಜದಲ್ಲಿ ಅವಕಾಶ ವಂಚಿತ ಮಹಿಳೆಯರಿದ್ದು ಸರ್ವ ಕ್ಷೇತ್ರದಲ್ಲೂ ಸಮಾನ ಅವಕಾಶ ದೊರೆತಾಗ ಮತ್ತಷ್ಟು ಸಾಧಿಸಲು ಸಾಧ್ಯವಾಗಲಿದೆ ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು.ಅವರು ನಗರದ ಜಯನಗರ ಬಡಾವಣೆಯಲ್ಲಿ ಸ್ನೇಹ ಮಿಲನ ಮಹಿಳಾ ಸಂಘ ಏರ್ಪಡಿಸಿದ್ದ 6 ನೇ ವರ್ಷದ ವಾರ್ಷಿಕೋತ್ಸವಹ ಹಾಗೂ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಮಹಿಳೆಯರನ್ನು ಗುರ್ತಿಸಿ ಗೌರವಿಸುವ ನಿಟ್ಟಿನಲ್ಲಿ ಪ್ರತಿವರ್ಷ ಮಾರ್ಚ್ 08 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮಾಡಲಾಗುತ್ತಿದೆ ಎಂದರು.ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಕುಟುಂಬ ನಿರ್ವಹಣೆ ಜತೆಗೆ ವಿವಿಧ ಕ್ಷೇತ್ರಗಳಲ್ಲಿ ಮಹತ್ತರವಾದ ಸಾಧನೆ ತೋರುತ್ತಿದ್ದಾರೆ. ಕುಟುಂಬದ ಬೆಂಬದೊಂದಿಗೆ ಮಹಿಳೆಯರು ಇಂದು ಯಶಸ್ಸು ಸಾಧಿಸಲು ಸಾಧ್ಯವಾಗುತ್ತಿದೆ. ಆರ್ಥಿಕವಾಗಿ ಸಬಲರಾಗುವ ನಿಟ್ಟಿನಲ್ಲಿ ಸರ್ಕಾರ ವಿವಿಧ ಯೋಜನೆಗಳನ್ನು ರೂಪಿಸಿದ್ದು ಅವುಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.ಬಿಜೆಪಿ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಪಲ್ಲವಿ.ಸಿ.ಟಿ.ರವಿ ಮಾತನಾಡಿ ನಗರದ ಜಯನಗರ ಬಡಾವಣೆಯು ಪ್ರೀತಿ ವಿಶ್ವಾಸದ ಜತೆಗೆ ನಗರಕ್ಕೆ ಹೊಂದಿಕೊಂಡಿರುವ ಜಾಗವಿದು, ಪ್ರತಿ ವರ್ಷದ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ತಪ್ಪದೆ ಭಾಗವಯಿಸಿದ್ದೇನೆ, ಮಹಿಳೆಯನ್ನು ಸ್ತ್ರೀ ಶಕ್ತಿ ಎಂದು ಗುರುತಿಸಲಾಗುವುದು, ಸಂಸ್ಕಾರ ಮತ್ತು ಸಂಸ್ಕೃತಿಯ ಮೂಲಕ ಸ್ತ್ರೀ ತನ್ನ ತನವನ್ನು ಎತ್ತಿ ಹಿಡಿದಾಗ ಸ್ತ್ರೀ ಶಕ್ತಿಗೆ ಅರ್ಥಪೂರ್ಣ ಸಿಗುವುದು, ಎಲ್ಲಾ ಕ್ಷೇತ್ರದಲ್ಲಿಯೂ ಹೆಣ್ಣು ಮಕ್ಕಳು ಅಭಿವೃದ್ಧಿ ಹೊಂದುತ್ತಿದ್ದಾರೆ, ಅದೇ ರೀತಿಯಲ್ಲಿ ದೈವ ಭಕ್ತಿಯೊಂದಿಗೆ ಮುಂದಿನ ಪೀಳಿಗೆಗೂ ಸಂಸ್ಕಾರ, ಸಂಸ್ಕೃತಿಯನ್ನು ಮನೆಯಿಂದಲೇ ನೀಡಿ ಮಾದರಿ ತಾಯಂದಿರಾಗೋಣ ಎಂದರು.ಆಧುನಿಕ ಯುಗದಲ್ಲಿ ಮಹಿಳೆಯರು ಸರ್ವಕ್ಷೇತ್ರಗಳಲ್ಲೂ ಸಾಧನೆ ತೋರುತ್ತಿದ್ದಾರೆ. ರಾಜಕೀಯ, ಕ್ರೀಡೆ, ವಿಜ್ಞಾನ, ತಂತ್ರಜ್ಞಾನದಲ್ಲು ಮುಂದಿದ್ದಾರೆ, ಮಹಿಳೆಯರು ಸ್ವಾವಲಂಬಿಗಳಾಗಲು ತಮ್ಮಲ್ಲಿರುವ ನಕರಾತ್ಮಕ ಚಿಂತನೆಗಳನ್ನು ಬಿಡಬೇಕು. ಉತ್ತಮ ಆಲೋಚನೆಗಳ ಮೂಲಕ ಸಾಧಿಸಬೇಕು ಎಂದರು.ಡಾ. ರಶ್ಮಿರಮೇಶ್ ಮಾತನಾಡಿ ಅಂತರಾಷ್ಟ್ರೀಯ ಮಹಿಳಾ ದಿನಾಚಾರಣೆಯ ಶುಭಾಶಯವನ್ನು ತಿಳಿಸಿ ಮಾತನಾಡಿದ ಅವರು, ಪ್ರತಿ ದಿನವೂ ಮಹಿಳೆಯರ ದಿನ, ಮಹಿಳೆಯರ ದಿನಾಚಾರಣೆಯನ್ನು ವಿದೇಶದಲ್ಲಿ ಜಾರಿಗೆ ತಂದರು, ಸನಾತನ ಕಾಲದಿಂದಲೂ ಸ್ತ್ರೀಯರು ಎಷ್ಟು ಮುಖ್ಯ ಎಂದು ಭಾರತ ದೇಶದಲ್ಲಿ ಗುರುತಿಸಿ ಹೆಣ್ಣನ್ನು ಪೂಜ್ಯ ಸ್ಥಾನದಲ್ಲಿ ಇಟ್ಟಿದ್ದಾರೆ, ಮಹಿಳೆಯು ತನ್ನ ಜವಾಬ್ದಾರಿಯುತ ನಡೆ, ಬುದ್ಧಿವಂತಿಕೆ, ಸರಿತಪ್ಪುಗಳ ವಿವೇಚನೆ, ಸಮಯೋಚಿತ ವರ್ತನೆ, ಮಾತೃತ್ವ ಶಕ್ತಿ, ಸಹನೆ, ತಾಳ್ಮೆ ಮತ್ತು ಕಲಾನೈಪುಣ್ಯ ಎಲ್ಲಾ ಗುಣಗಳ ಗಣಿ ಮಹಿಳೆ ಎಂದರು.

ಸ್ನೇಹ ಮಿಲನ ಸಂಘದವರ ವೀರಗಾಸೆ ಮತ್ತು ನೃತ್ಯದ ಮೂಲಕ ಸ್ವಾಗತವನ್ನು ಮಾಡಿದ್ದು ವಿಶೇಷವಾಗಿತ್ತು, ಕರ್ನಾಟಕದ ಸ್ವಿಡ್ಜರ್‌ಲ್ಯಾಂಡ್ ಎಂದು ಕರೆಯಲ್ಪಡುವ ಚಿಕ್ಕಮಗಳೂರು ಜಿಲ್ಲೆ ಸ್ವರ್ಗದ ರೀತಿಯಲ್ಲಿದ್ದು, ಚಿಕ್ಕವರಿಂದ ಹಿರಿಯರ ವರೆಗೂ ಎಲ್ಲರೂ ಉತ್ಸಾಹದಿಂದ ಸೇರಿರುವುದು ನೋಡಲು ಸಂತೋಷವಾಗುತ್ತಿದ್ದು, ಸ್ನೇಹ ಮಿಲನ ಎಂಬುದೇ ಒಂದು ವಿಶೇಷವಾಗಿದೆ, ಮಹಿಳೆಯರು ಒಗ್ಗೂಡಿ ಇಂತಹ ಸಂಘಗಳನ್ನು ಮಾಡಿದಾಗ ಸಮಾನ ಮನಸ್ಕರು ಸಿಗುತ್ತಾರೆ ಎಂದರು.
ಮಹಿಳೆಯರು ಮನೆಯ ನಿರ್ವಹಣೆ ಮಾಡುತ್ತಾ ಯಾಂತ್ರಿಕ ಒತ್ತಡದಿಂದ ತನ್ನನ್ನು ತಾನೆ ಕಡೆಗಣಿಸಿಕೊಳ್ಳುವ ದಿನಗಳಲ್ಲಿ ಸಮಾನ ಮನಸ್ಕರ ಸಖಿಯರೊಂದಿಗೆ ಸಂಗೀತ, ನೃತ್ಯ, ಕ್ರೀಡೆಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವ ಅವಕಾಶ ದೋರೆತಾಗ ಖಿನ್ನತೆಯಿಂದ ಹೊರ ಬರಲು ಸಹಾಯವಾಗುತ್ತದೆ, ಎಲ್ಲರು ಒಟ್ಟಿಗೆ ಸೇರಿದಾಗ ಹೊಸ ಹುರುಪು ಮತ್ತು ಚೈತನ್ಯ ಬರುವುದರ ಜತೆಗೆ ತನ್ನನ್ನು ತಾನು ಗುರುತಿಸಿಕೊಳ್ಳಲು ಸಹಾಯವಾಗುತ್ತದೆ ಎಂದರು.ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕರಾದ ನಾಗಶ್ರೀ ತ್ಯಾಗರಾಜ್ ಮಾತನಾಡಿ, ಎಲ್ಲಿ ಮಹಿಳೆ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೋ ಅಲ್ಲಿ ಕಳೆ ಕಟ್ಟುತ್ತದೆ. ಒಂದು ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿ ಮಹಿಳೆಯರಿಂದ ಮಾತ್ರ ಸಾಧ್ಯ. 18 ನೇ ಶತಮಾನದಲ್ಲಿ ಮಹಿಳೆಗೆ ಮತದಾನ ಇರಲಿಲ್ಲ. ಭಾರತದಲ್ಲಿ ನಮ್ಮ ಸಂವಿಧಾನ ಅಸ್ತಿತ್ವಕ್ಕೆ ಬಂದ ದಿನದಿಂದ ಮಹಿಳೆಯರಿಗೆ ಅಷ್ಟೇ ಪ್ರಾಮುಖ್ಯತೆಯನ್ನು ಕೊಡುತ್ತಾ ಬಂದಿದ್ದೇವೆ ಎಂದರು.ಸ್ನೇಹ ಮಿಲನ ಮಹಿಳಾ ಸಂಘದ ಅಧ್ಯಕ್ಷೆ ಪುಷ್ಪಾ ರಾಜೇಂದ್ರ ಮಾತನಾಡಿ, ಜಯನಗರ ಬಡಾವಣೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಒಂದು ರಂಗಮಂದಿರ ಮತ್ತು ಮಕ್ಕಳ ಮನರಂಜನೆಗಾಗಿ ಉದ್ಯಾನವನವೊಂದನ್ನು ನಿರ್ಮಾಣ ಮಾಡಿಕೊಡಬೇಕು ಎಂದು ಶಾಸಕರಲ್ಲಿ ಬೇಡಿಕೆ ಇಟ್ಟರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವೀಣಾಉದಯಸಿಂಹ, ಭಾಗ್ಯಮ್ಮ, ಮಾನಸ, ಚಂದ್ರಕಲಾ ಅವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಡಿ.ಟಿ.ಐ ಕಾಲೇಜ್ ಪ್ರಾಂಶುಪಾಲೆ ಪೂರ್ಣಿಮಾಮಂಜುನಾಥ್, ಬೀರೂರು ಪುರಸಭೆ ಮಾಜಿ ಅಧ್ಯಕ್ಷೆ ಸವಿತಾರಮೇಶ್, ನಗರಸಭೆ ಉಪಾಧ್ಯಕ್ಷೆ ಉಮಾದೇವಿಕೃಷ್ಣಪ್ಪ, ಮಾಜಿ ಉಪಾಧ್ಯಕ್ಷೆ ಶಿಲ್ಪಾರಾಜಶೇಖರ್, ಸದಸ್ಯರಾದ ಶೀಲಾದಿನೇಶ್, ಉಪಾಧ್ಯಕ್ಷರಾದ ರಾಧಮಂಜೇಗೌಡ, ಕಾರ್ಯದರ್ಶಿ ಮೋಹನಮಾದೇಶ್, ಸಹ ಕಾರ್ಯದರ್ಶಿ ಕಾಂತಮಣಿಗಂಗಾಧರ್, ಖಜಾಂಚಿಮುಂಜುಳಾ ಮಾದೇಗೌಡ, ನಿರ್ದೇಶಕರುಗಳಾದ ರೇಣುಕಾ, ಸುಧಾ, ವಿನೋದ, ಪದ್ಮ, ಪೂರ್ಣಿಮ, ವಿಶಾಲಾಕ್ಷಿ, ತುಳಸಿ, ಕಲ್ಪನಾ, ಗೀತಾ, ಚಂದ್ರಿಕಾ, ಅನ್ನಪೂರ್ಣ, ಚಂದ್ರಮ್ಮ, ಲೀಲಾವತಿ, ಮಮತ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!