May 17, 2024

MALNAD TV

HEART OF COFFEE CITY

ಯುವಕರಿಗೆ ಜೀವನದ ಕಿರು ಉದ್ಯೋಗದ ಮೂಲಕ ಸದೃಢವಾಗಿ ಸಮಾಜವನ್ನು ಎದರಿಸವ ಶಕ್ತಿಯನ್ನು ತುಂಬುವ ಉದ್ದೇಶವಾಗಿದೆ – ಜಿ.ಪ್ರಭು

1 min read

ಚಿಕ್ಕಮಗಳೂರು-ಜಿಲ್ಲೆಯ ಯುವಕರಿಗೆ ಜೀವನದ ಕಿರು ಉದ್ಯೋಗದ ಮೂಲಕ ಸದೃಢವಾಗಿ ಸಮಾಜವನ್ನು ಎದರಿಸವ ಶಕ್ತಿಯನ್ನು ತುಂಬುವ ಉದ್ದೇಶವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಪ್ರಭು ತಿಳಿಸಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಲೀಡ್ ಬ್ಯಾಂಕ್, ವಿಷನ್ ಕರ್ನಾಟಕ ಫೌಂಡೇಷನ್, ಯುವ ಸ್ಪಂದನ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಸ್ವಾಮಿ ವಿವೇಕಾನಂದ ಯುವಕರ ಜಂಟಿ ಭಾದ್ಯತ ಗುಂಪುಗಳಿಗೆ ವ್ಯಕ್ತಿತ್ವ ವಿಕಾಸನ ಸ್ವೀಪ್ ಮತ್ತು ಡಿಪಿಆರ್ ತಯಾರಿಕೆ ಬಗೆಗೆ ತರಬೇತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿಮಾ. 23 ರಂದು ರಾಜ್ಯ ಮಟ್ಟದಲ್ಲಿ ಸ್ವಾಮಿ ವಿವೇಕಾನಂದ ಯುವಕರ ಜಂಟಿ ಬಾಧ್ಯತಾ ಗುಂಪುಗಳ ಉದ್ಘಾಟನೆಯನ್ನು ಮುಖ್ಯ ಮಂತ್ರಿಗಳು ನೆರೆವೇರಿಸಲಿದ್ದು, ಇದರ ಅಂಗವಾಗಿ ಪ್ರತಿ ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ, ಕನಿಷ್ಟ 10 ಜನ ಸದಸ್ಯರನ್ನು ಒಳಗೊಂಡ ಎರಡು ಸ್ವಾಮಿ ವಿವೇಕಾನಂದ ಯುವಕರ ಜಂಟಿ ಬಾಧ್ಯತಾ ಗುಂಪುಗಳನ್ನು ರಚನೆ ಮಾಡಿ, ಆರ್ಥಿಕ ಚಟುವಟಿಕೆ (ಸಣ್ಣ ಪ್ರಮಾಣದ ಉದ್ದಿಮೆ)ಯ ಅವಕಾಶವನ್ನು ಕಲ್ಪಸಿ ಕೊಡುವ ಸಲುವಾಗಿ ಅದಕ್ಕೆ ಬೇಕಾದ ತರಬೇತಿ ಮತ್ತು ಸಂಪನ್ಮೂಲವನ್ನು ಒದಗಿಸಿಕೊಟ್ಟು ಅದಕ್ಕಾಗಿ ಬೇಕಾದ ಮಾರುಕಟ್ಟೆಯನ್ನು ಒದಗಿಸಿ ಜೀವನದ ಕಿರು ಉದ್ಯೋಗದ ಮೂಲಕ ಸದೃಢವಾಗಿ ಸಮಾಜವನ್ನು ಎದರಿಸವ ಶಕ್ತಿಯನ್ನು ತುಂಬುವ ಉದ್ದೇಶ ಇದಾಗಿದೆ ಎಂದರು.

ಜಿಲ್ಲೆಯ 226 ಗ್ರಾಮ ಪಂಚಾಯಿತಿಗಳ ಪ್ರತಿ ಪಂಚಾಯಿತಿಗಳಲ್ಲಿ ಎರಡು ಸಂಘಗಳನ್ನು ಮಾಡುವ ಉದ್ದೇಶದಿಂದ, ಈಗಾಗಲೇ 400ಕ್ಕೂ ಹೆಚ್ಚು ಸಂಘಗಳು ಸ್ಥಾಪನೆಗೊಂಡು 85 ಸಂಘಗಳ ಮುಕ್ತಾಯವಾಗಿದೆ, ಉಳಿದ ಸಂಘಗಳನ್ನು ಶೀಘ್ರವಾಗಿ ಮುಕ್ತಾಯ ಗೊಳಿಸಲಾಗುವುದು, ವಿವಿಧ ಕೈಗಾರಿಕೆಗಳಿಗೆ ಬೇಟಿ ನೀಡಲು, ತರಬೇತಿಗಳಿಗೆ ಹಾಜರಾಗಲು ಮತ್ತು ಡಿಪಿಆರ್ ತಯಾರಿಕೆಗಾಗಿ 10 ಸಾವಿರ ರೂ ಸುತ್ತು ನಿಧಿಯನ್ನು ನೀಡಲಾಗಿದೆ ಎಂದರು.
ದೇಶದ ಶಕ್ತಿಯಾಗಿರುವ ಯುವಕರಿಗೆ ಶಕ್ತಿ ತುಂಬುವಂತಹ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಜಿಲ್ಲೆಯ ಎಲ್ಲಾ ಯುವ ಸಂಘಗಳಿಗೆ ಕುವೆಂಪು ಕಲಾಮಂದಿರದಲ್ಲಿ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಈ ಕಾರ್ಯಕ್ರಮವು 100 ಉದ್ಯಮಗಳನ್ನು ಒಳಗೊಂಡ ಕಾರ್ಯಗಾರ ಆಗಿರುತ್ತದೆ ಮತ್ತು ಸಮಗ್ರ ಮಾಹಿತಿಯನ್ನು ನೀಡಲಾಗುವುದು ಎಂದರು.
ಕ್ರೀಡಾ ಇಲಾಖೆಯ ಉಪ ನಿರ್ದೇಶಕರಾದ ಮಂಜುಳ ಹುಲ್ಲಳ್ಳಿ ಮಾತನಾಡಿ ಸ್ವಾಮಿ ವಿವೇಕಾನಂದ ಯುವಕರ ಜಂಟಿ ಬಾಧ್ಯತಾ ಗುಂಪುಗಳನ್ನು ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ಎರಡು ಸಂಘಟನೆಗಳನ್ನಾಗಿ ಮಾಡಿ ಡಿಪಿಆರ್ ತಯಾರಿಸಿ ಸಲ್ಲಿಸುವುದರಿಂದ 5 ಲಕ್ಷದ ವರೆಗೂ ಸ್ವಯಂ ಉದ್ಯೋಗ ನಡೆಸಲು ಬ್ಯಾಂಕ್‍ನಿಂದ ಸಾಲ ನೀಡುವುದರ ಜತೆಗೆ 20% ಸಬ್ಸಿಡಿ ನೀಡಲಾಗುತ್ತಿದೆ, ಇದಕ್ಕಾಗಿ ಅವರಿಗೆ ಬೇಕಾದ ಪೂರಕ ಮಾಹಿತಿ ಮತ್ತು ಆತ್ಮಸ್ಥೈರ್ಯ ತುಂಬಲು ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲೆಯ ವಿವಿಧ ಭಾಗಗಳಿಂದ ಬಂದಂತಹ ಯುವಕರು ಅವರ ಸಮಸ್ಯೆಗಳಿಗೆ ಪರಿಹಾರವನ್ನು ಪಡೆದುಕೊಳ್ಳುತ್ತಿದ್ದಾರೆ, ಇದೇ ತಿಂಗಳ 23 ರಂದು ಮುಖ್ಯ ಮಂತ್ರಿಗಳ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಗುವುದು ಎಂದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!