May 10, 2024

MALNAD TV

HEART OF COFFEE CITY

ಮಧ್ಯವರ್ತಿಗಳಿಲ್ಲದೆ ನಿವೇಶನರಹಿತ ಅರ್ಹ ಫಲಾನುಭವಿಗಳ ನೇರ ಆಯ್ಕೆ: ಹೆಚ್ ಡಿ ತಮ್ಮಯ್ಯ ಭರವಸೆ

1 min read

ಚಿಕ್ಕಮಗಳೂರು: ನಿವೇಶನರಹಿತ ಅರ್ಹ ಫಲಾನುಭವಿಗಳ ಆಯ್ಕೆಮಾಡಿ ಅವರಿಗೆ ಜಿ ಪ್ಲಸ್ 2 ಮಾದರಿಯ ಮನೆಗಳನ್ನು ನೀಡಲಾಗುವುದು ಎಂದು ಶಾಸಕ ಹೆಚ್ ಡಿ ತಮ್ಮಯ್ಯ ತಿಳಿಸಿದರು.

ನಗರಸಭೆ ವತಿಯಿಂದ ನಗರಸಭಾ ಸಭಾಂಗಣದಲ್ಲಿ  ‘ನಗರ ಆಶ್ರಯ ಸಮಿತಿ ಸಭೆಯನ್ನ’ ಶಾಸಕರ ನೇತೃತ್ವದಲ್ಲಿ ನಡೆಸಲಾಯಿತು. ಆಶ್ರಯ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಹೆಚ್ ಡಿ ತಮ್ಮಯ್ಯ, ಈ ಸಭೆಯಲ್ಲಿ ಜಿ ಪ್ಲಸ್ 2 ಮಾದರಿಯ 1511 ಮನೆಗಳ ಕುರಿತು ಮತ್ತು ಇಂದಿರಾಗಾಂಧಿ 800 ನಿವೇಶನಗಳ ಬಗ್ಗೆ ಚರ್ಚೆ ಮಾಡಲಾಯಿತು ಎಂದು ಹೇಳಿದರು.
ಜಿಲ್ಲಾಧಿಕಾರಿಗಳಿಗೆ ಈ ಮೊದಲೇ ನಗರಸಭಾ ಸುತ್ತಮುತ್ತ ಕಂದಾಯ ಭೂಮಿಯನ್ನು ಹುಡುಕಲು ಹೇಳಿದ್ದೇವು, ಈಗಾಗಲೇ ಗ್ರಾಮಾಂತರ ಭಾಗದಲ್ಲಿ 25 ಎಕರೆ ಕಂದಾಯ ಭೂಮಿ ಸಿಕ್ಕಿದೆ. ನಗರದ ಸುತ್ತಮುತ್ತ ಕೂಡ ಕಂದಾಯ ಭೂಮಿಯನ್ನು ಹುಡುಕುತ್ತಿದ್ದೇವೆ ಸಿಕ್ಕ ಕೂಡಲೇ ಯಾರು ನಿಜವಾದ ವಸತಿ ರಹಿತ ಫಲಾನುಭವಿಗಳಿದ್ದರೋ ಅವರಿಗೆ ತಲುಪಿಸುವಂತಹ ಕೆಲಸವನ್ನು ಮಾಡುತ್ತೇವೆ ಎಂದು ತಿಳಿಸಿದರು.
ಇಂದಿರಾ ಗಾಂಧಿ ಬಡಾವಣೆಯಲ್ಲಿ ಈಗಾಗಲೇ 400 ಜನ ಮನೆಯನ್ನು ಕಟ್ಟಿಕೊಂಡಿದ್ದು, 173 ಜನಕ್ಕೆ ಮಾತ್ರ ಹಕ್ಕು ಪತ್ರ ಸಿಕ್ಕಿದೆ. ಇನ್ನು ಉಳಿದಂತಹ ಫಲಾನುಭವಿಗಳಿಗೂ ಕೂಡ ಹಕ್ಕು ಪತ್ರವನ್ನು ಮತ್ತು ಮೂಲ ದಾಖಲಾತಿಗಳನ್ನು ಕೊಡಿಸುವ ಪ್ರಯತ್ನವನ್ನು ಮಾಡುತ್ತೇವೆ. ಇನ್ನು ಮುಂದೆ ಯಾವುದೇ ರೀತಿಯ ಮಧ್ಯವರ್ತಿಗಳ ಅವಶ್ಯಕತೆ ಇರುವುದಿಲ್ಲ ನಾನೇ ನೇರವಾಗಿ ಚರ್ಚಿಸಿ ಫಲಾನುಭವಿಗಳ ಆಯ್ಕೆ ಮಾಡುವುದರಿಂದ ದಯವಿಟ್ಟು ಯಾರು ವಸತಿರಹಿತರು ಮಧ್ಯವರ್ತಿಗಳಿಗೆ ದುಡ್ಡನ್ನು ಕೊಟ್ಟು ಹೋಗಬೇಡಿ ಎಂದು ಎಚ್ಚರಿಸಿದರು.
ಈಗ ಬಂದಿರುವಂತಹ ಅರ್ಜಿಗಳನ್ನ ಕೂಲಂಕುಶವಾಗಿ ಚರ್ಚಿಸಿ ವಸತಿ ರಹಿತರಿಗೆ ಯಾವುದೇ ರೀತಿ ತೊಂದರೆಯಾಗದ ರೀತಿಯಲ್ಲಿ ನೇರ ಆಯ್ಕೆ ಮಾಡಲಾಗುತ್ತದೆ.ರಾಜ್ಯ ಸರ್ಕಾರ ಈಗಾಗಲೇ 3 ಲಕ್ಷ ಕಟ್ಟಬೇಕಾಗಿದ್ದ ಜಾಗದಲ್ಲಿ ಕೇವಲ 1ಕಟ್ಟಿದರೆ ಸಾಕು ಉಳಿದ ಹಣವನ್ನ ಸರ್ಕಾರವೇ ಭರಿಸುತ್ತದೆ. ಪ್ರಸ್ತುತ ಕಾಮಗಾರಿ ಮಂದಗತಿಯಲ್ಲಿದ್ದು ಗುತ್ತಿಗೆದಾರರು ಎರಡು ಮೂರು ತಿಂಗಳ ಒಳಗಾಗಿ 300 ಮನೆಗಳನ್ನು ಬಿಟ್ಟುಕೊಡುತ್ತಾರೆ ಎಂದರು.
13 ಜನ ಈಗ ನೀಡಿರುವಂತಹ ಹಣವನ್ನು ವಾಪಸ್ ಕೊಡಿ ಎಂದು ಅರ್ಜಿ ಕೊಟ್ಟಿದ್ದಾರೆ ಅವರನ್ನ ಕರೆಯಿಸಿ ಮನವೊಲಿಸುವ ಕೆಲಸವನ್ನು ಮಾಡುತ್ತೇವೆ ಇನ್ನು ಆರರಿಂದ ಹತ್ತು ತಿಂಗಳ ಒಳಗಾಗಿ ಮನೆಯ ಕಾಮಗಾರಿಗಳನ್ನು ಮುಗಿಸಿ ಅವರಿಗೆ ಹಸ್ತಾಂತರ ಮಾಡುತ್ತೇವೆ ಎಂಬ ಭರವಸೆಯನ್ನು ನೀಡಿದರು. ಈ ಸಭೆಯಲ್ಲಿ ನಗರಸಭೆ ಪೌರಾಯುಕ್ತ ಬಿ ಸಿ ಬಸವರಾಜ್, ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!