May 13, 2024

MALNAD TV

HEART OF COFFEE CITY

ನಡುರಸ್ತೆಯಲ್ಲೇ ಯುವಕನ ಬರ್ಬರ ಕೊಲೆ..!, ದೀಪಾವಳಿ ಹಬ್ಬದ ದೀನವೇ ಯುವಕ ಕೊಲೆ

1 min read

ಚಿಕ್ಕಮಗಳೂರು : ದೀಪಾವಳಿ ಹಬ್ಬದ ದಿನವೇ ನಡುರಸ್ತೆಯಲ್ಲೇ ಯುವಕನನ್ನ ಹಂತಕರು ಬರ್ಬರವಾಗಿ ಕೊಲೆ ಮಾಡಿರೋ ಘಟನೆ ಚಿಕ್ಕಮಗಳೂರು ತಾಲೂಕಿನ ಮತ್ತಾವರ ಗ್ರಾಮದಲ್ಲಿ ನಡೆದಿದೆ.ತಾಲೂಕಿನ ಮತ್ತಾವರ ಗ್ರಾಮದ 30 ವರ್ಷದ ಪ್ರಕೃತ್ ಎಂಬ ಯುವಕ ಬರ್ಬರ ಕೊಲೆಯಾಗಿರೋ ವ್ಯಕ್ತಿ. ಪ್ರಕೃತ್ ಗೆ ಮಾರಕಾಸ್ತ್ರಗಳಿಂದ ತಲೆ-ಮುಖದ ಭಾಗವನ್ನ ಮನಸೋ ಇಚ್ಛೆ ಕೊಚ್ಚಿ ಪ್ರಕೃತ್ನನ್ನ ಕೊಲೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ದೀಪಾವಳಿ ಪ್ರಯುಕ್ತ ಗದ್ದೆ ತೋಟಗಳಿಗೆ ಲಕ್ಕೆ ಸೊಪ್ಪು ಇಟ್ಟು ಪೂಜೆ ಮಾಡಿ ಪ್ರಕೃತ್ ಮನೆ ಕಡೆ ಹೊರಟು ಬರ್ತಿದ್ದ. ಈ ವೇಳೆ ಹೊಸ ಮನೆ ಸಮೀಪ ಇಟ್ಟಿದ್ದ ಕಾಫಿ ಮೂಟೆಗಳನ್ನ ತನ್ನ ಬೈಕ್ನಲ್ಲಿ ಇಟ್ಕೊಂಡು ಹಳೆ ಮನೆಗೆ ಕಡೆಗೆ ಬೈಕ್ ಹೊರಟಿತ್ತು. ಆದ್ರೆ ಕಿರಾತಕರು ಪ್ರಕೃತ್ನನ್ನ ಮನೆ ಸೇರಲು ಬಿಡದೇ ನಡುರಸ್ತೆಯಲ್ಲೇ ತುಂಬಾ ಬರ್ಬರವಾಗಿ ಕೊಲೆ ಮಾಡಿರೋದು ಗ್ರಾಮದ ಜನರನ್ನ ಬೆಚ್ಚಿ ಬೀಳಿಸಿತು. ವಿಚಾರ ತಿಳಿಯುತ್ತಲೇ ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ರು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು.
ತುಂಬಾ ಸಾಧು ಸ್ವಭಾವದ ವ್ಯಕ್ತಿಯಾಗಿದ್ದ ಪ್ರಕೃತ್ ಸ್ವಾಭಿಮಾನಿ ವ್ಯಕ್ತಿ ಕೂಡ. ತನ್ನ ನಾಲ್ಕು ಮಂದಿ ಅಕ್ಕಂದಿರನ್ನ ಮದ್ವೆ ಮಾಡಿ ಈಗಷ್ಟೇ ತನ್ನ ಬದುಕನ್ನ ಕಟ್ಟಿಕೊಳ್ಳಲು ಸುಂದರ ಕನಸು ಕಾಣುತ್ತಿದ್ದ ಯುವಕ. 15 ಎಕರೆಗೂ ಹೆಚ್ಚು ಕಾಫಿತೋಟವಿದ್ರೂ ಕುಳಿತು ತಿನ್ನುವ ಜಾಯಮಾನ ಪ್ರಕೃತ್ನದ್ದು ಆಗಿರಲಿಲ್ಲ, ಹಾಗಾಗಿಯೇ ಹಗಲು ರಾತ್ರಿ ಎನ್ನದೇ ಕಾಫಿತೋಟದಲ್ಲಿ ಪ್ರಕೃತ್ ದುಡಿಯುತ್ತಿದ್ದ. ಈ ಮಧ್ಯೆ ಒಂದು ವರ್ಷದ ಹಿಂದೆಯೇ ಪ್ರಕೃತ್ ಕುಟುಂಬಕ್ಕೂ ಹಾಗೂ ಗ್ರಾಮದ ವ್ಯಕ್ತಿಯೊಬ್ಬನಿಗೂ ಜಮೀನಿನ ವಿಚಾರವಾಗಿ ವ್ಯಾಜ್ಯ ನಡೆದು, ಠಾಣೆ ಮೆಟ್ಟೆಲೇರಿತು. ಕಂಡಕಂಡವರ ಜೊತೆ ಕಾಲ್ ಕೆರ್ಕೊಂಡು ಜಗಳೋಕೆ ಹೋಗ್ತಿದ್ದ, ಉಂಡಾಡಿ ಗುಂಡನಂತಿದ್ದ ಆ ವ್ಯಕ್ತಿಯೇ ಈ ಕೊಲೆಯನ್ನ ಮಾಡಿರಬಹುದು ಅಂತಾ ಪ್ರಕೃತ್ ಸಂಬಂಧಿಕರು ಆ ನೀಚನ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.

 

ಪ್ರಕೃತ್ ಕೊಲೆ ಸುದ್ದಿ ತಿಳಿಯುತ್ತಲೇ ಗ್ರಾಮದಲ್ಲಿ ಜನಸಾಗರವೇ ಸೇರಿತ್ತು. ಸೋದರಿಯರ, ಸಂಬಂಧಿಕರ, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಕೊನೆಪಕ್ಷ ಪ್ರಕೃತ್ ಮುಖವನ್ನಾದ್ರೂ ಕೊನೆಯದಾಗಿ ಒಮ್ಮೆ ನೋಡೋಣ ಅಂದ್ರೂ ನೋಡೋದಕ್ಕೆ ಸಾಧ್ಯವಾಗದಷ್ಟು ಕ್ರೂರವಾಗಿ ಪಾಪಿಗಳು ಪಾಪಕೃತ್ಯವೆಸಗಿದ್ರು. ಅಮಾಯಕ ಯುವಕನ ಬರ್ಬರ ಕೊಲೆ 300ಕ್ಕೂ ಹೆಚ್ಚು ಮನೆಗಳಿರುವ ಮತ್ತಾವರ ಗ್ರಾಮದ ಜನರನ್ನ ನಡುಗಿಸಿದೆ. ಸದ್ಯ ಗ್ರಾಮದಲ್ಲಿ ದೀಪಾವಳಿ ಸಂಭ್ರಮ ಮಾಯವಾಗಿ ಸ್ಮಶಾನ ಮೌನ ಆವರಿಸಿದೆ. ಇನ್ನೂ ಬೆಳಗ್ಗೆ 8 ಗಂಟೆ ಸುಮಾರಿನಲ್ಲಿ ಈ ಕೊಲೆ ನಡೆದಿರೋದು ಗ್ರಾಮದ ಜನರ ಜೊತೆ ಇಡೀ ಕಾಫಿನಾಡಿನ ಮಂದಿಯನ್ನ ಕಂಗಲಾಗುವಂತೆ ಮಾಡಿರೋದಂತೂ ಸತ್ಯ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!