May 12, 2024

MALNAD TV

HEART OF COFFEE CITY

ಕೋವಿಡ್ ಹೆಚ್ಚಳ ಹಿನ್ನೆಲೆಯಲ್ಲಿ ಮಾರುಕಟ್ಟೆಯನ್ನು ಐ.ಡಿ.ಎಸ್.ಜಿ ಕಾಲೇಜ್ ಹಿಂಭಾಗಕ್ಕೆ ವರ್ಗಾಯಿಸಿದ ಜಿಲ್ಲಾಡಳಿತ

1 min read

ಚಿಕ್ಕಮಗಳೂರು : ಕೊರೋನಾ ಹೆಚ್ಚಳ ಹಿನ್ನೆಲೆಯಲ್ಲಿ ದಿನನಿತ್ಯದ ಮಾರುಕಟ್ಟೆಯನ್ನು ಹಾಗೂ ವಾರದ ಮಾರುಕಟ್ಟೆಯನ್ನು ಐ.ಡಿ.ಎಸ್.ಜಿ  ಕಾಲೇಜು ಹಿಂಭಾಗದ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ.

ಬೆಳ್ಳಂಬೆಳಗೆಯೆ ಮಾರುಕಟ್ಟೆ ನಡೆಯುವ ಸ್ಥಳಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿಗಳು ಮಾರುಕಟ್ಟೆ ಪರಿಶೀಲನೆ ನಡೆಸಿದ್ರು. ಈ ವೇಳೆ ಕೋವಿಡ್ ನಿಯಮ ಪಾಲಿಸದೆ ವರ್ತಕರು, ಗ್ರಾಹಕರು ಹಾಗು ಕಿಕ್ಕಿರಿದ ಕಿರಿದಾದ ಸ್ಥಳವನ್ನು ಗಮನಿಸಿದ ಮೇಲಾಧಿಕಾರಿಗಳು ಮಾರುಕಟ್ಟೆಯನ್ನು ಅಧಿಕಾರಿಗಳಿಗೆ ತೆರದ ಸ್ಥಳಕ್ಕೆ ಬದಲಾಯಿಸುವಂತೆ ತಿಳಿಸಿದ್ದರು. ಅದರಂತೆ ಇಂದು ನಗರಸಭೆ ಅಧಿಕಾರಿಗಳು ಐ.ಡಿ.ಎಸ್.ಜಿ ಕಾಲೇಜು ಹಿಂಭಾಗದಲ್ಲಿರುವ ವಿಶಾಲವಾದ ತೆರೆದ ಮೈದಾನದಲ್ಲಿ ವರ್ತಕರು ಮಾರುಕಟ್ಟೆ ನಡೆಸಲು ಸ್ಥಳ ನಿಗದಿ ಮಾಡಿ ಗುರುತು ಹಾಕಿದರು. ಕೊರೋನಾ ಹೆಚ್ಚಳ ಹಿನ್ನೆಲೆಯಲ್ಲಿ ದಿನನಿತ್ಯದ ಎ.ಪಿ.ಎಂ.ಸಿ ಮಾರುಕಟ್ಟೆಯನ್ನು ಹಾಗೂ ವಾರದ ಮಾರುಕಟ್ಟೆಯನ್ನು ಐ.ಡಿ.ಎಸ್.ಜಿ  ಕಾಲೇಜು ಹಿಂಭಾಗದ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ. ಮಾರುಕಟೆಯು ಬೆಳಗ್ಗೆ ೬-೦೦ ರಿಂದ ಬೆಳಗ್ಗೆ ೧೦-೦೦ ಗಂಟೆಯವರೆಗೆ ನಡೆಯಲಿದೆ. ವರ್ತಕರು ಹಾಗೂ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಸ್ಯಾನಿಟೈಸರ್ ಬಳಕೆ ಸೇರಿದಂತೆ ಕೋವಿಡ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದ್ದಾರೆ

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!