May 12, 2024

MALNAD TV

HEART OF COFFEE CITY

ಮುಳ್ಳಯ್ಯನಗಿರಿ ಉಳಿಸಿ; ಪರಿಸರವಾದಿಗಳ ಆಗ್ರಹ

1 min read

ಚಿಕ್ಕಮಗಳೂರು:  ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗರಿಯ  ಸೌಂದರ್ಯವನ್ನ ಕಣ್ತುಂಬಿಕೊಳ್ಳದ ಕನ್ನಡಿಗರೇ ಇಲ್ಲ ಅನ್ಸತ್ತೆ. ಕಣ್ಣಿನ ದೃಷ್ಟಿ ಮುಗಿದರೂ ಮುಗಿಯದ ಈ ಸೌಂದರ್ಯಕ್ಕೆ ಆಯಸ್ಸು ಹೆಚ್ಚಿಲ್ಲ ಎಂಬ ಅನುಮಾನ ಈಗ ಮೂಡಿದೆ. ಏಕಂದ್ರೆ, 2019ರಲ್ಲಿ ಅರಣ್ಯ ಮತ್ತು ಪರಿಸರ ಇಲಾಖೆ ಸರ್ಕಾರಕ್ಕೆ ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿರುವ ಮುಳ್ಳಯ್ಯನಗಿರಿ ತಪ್ಪಲಿನ ಸುಮಾರು ಸುಮಾರು 14 ಸಾವಿರ ಎಕರೆಯನ್ನ ಮುಳ್ಳಯ್ಯನಗಿರಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಬಳಿಕ ಅದು 18284 ಎಕರೆಯಾಗಿತ್ತು. ತದನಂತರ ಸಾರ್ವಜನಿಕ ಉದ್ದೇಶಗಳಿಗೆ 1448 ಎಕರೆಯನ್ನ ಕೈಬಿಟ್ಟು 16836 ಎಕರೆ ಪ್ರದೇಶವನ್ನ ಸಂರಕ್ಷಿತ ಪ್ರದೇಶ ಮಾಡಲು ವರದಿ ಸಲ್ಲಿಸಿತ್ತು. ಆದರೆ, ಈಗ ಪುನಃ ಆ ವರದಿ ಪರಿಷ್ಕರಣೆಗೊಂಡು ಮೊದಲ ಹಂತವಾಗಿ ಕೇವಲ 4636 ಎಕರೆ ಪ್ರದೇಶವನ್ನಷ್ಟೆ ಸಂರಕ್ಷಿತ ಪ್ರದೇಶವನ್ನಾಗಿಸಲು ಸರ್ಕಾರ ಮುಂದಾಗಿದೆ. ಇದು ಕೆಲ ಪರಿಸರ ಪ್ರಿಯರು ಹಾಗೂ ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಮೊದಲ ಹಂತದ ಬಳಿಕ ಎರಡನೇ ಹಂತ ನಿಜಕ್ಕೂ ಆಗುತ್ತಾ ಅನ್ನೋದು ಪರಿಸರವಾದಿಗಳ ಆತಂಕ. 18284 ಸಾವಿರ ಎರಕೆಯಿಂದ 16836 ಎರಕೆಗೆ ಬಂದು ಬಳಿಕ 4 ಸಾವಿರ ಎಕರೆಗೆ ಬರಲು ಕಾರಣ ಒತ್ತುವರಿದಾರರೇ ಕಾರಣ ಎಂಬ ಮಾತು ಕೇಳಿ ಬಂದಿದೆ. ಈಗಾಗಲೇ ಮುಳ್ಳಯ್ಯನಗಿರಿಯಲ್ಲಿ ಬಹುತೇಕ ಭೂಮಿ ಒತ್ತುವರಿಯಾಗಿ, ಕಾಫಿತೋಟವಾಗಿದೆ. ಫಾರಂ 53, 54, 57ರ ಅಡಿ ಸಾವಿರಾರು ಜನ ಭೂಮಿಗಾಗಿ ಅರ್ಜಿ ಹಾಕಿದ್ದಾರೆ.

ರಾಜಕಾರಣದ ಒತ್ತಡದಿಂದಲೇ ಸರ್ಕಾರ ಇಂದು 18 ಸಾವಿರದಿಂದ 4 ಸಾವಿರಕ್ಕೆ ಬಂದಿದೆ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ. ಮುಳ್ಳಯ್ಯನಗಿರಿ ದಟ್ಟ ಅರಣ್ಯದಲ್ಲಿ ಸಾವಿರಾರು ಪ್ರಾಣಿಗಳಿವೆ. ಹಲವು ನದಿಗಳ ಉಗಮ ಸ್ಥಾನವಾಗಿದೆ. ಹತ್ತಾರು ಕೆರೆಗಳಿಗೆ ನೀರಿನ ಮೂಲವಾಗಿದೆ. ಮುಳ್ಳಯ್ಯನಗಿರಿಯಲ್ಲಿ ಈಗಾಗಲೇ ಅರಣ್ಯವೇ ಒತ್ತುವರಿಯಾಗಿದೆ. ಈಗಲೇ ಮುಳ್ಳಯ್ಯನಗಿರಿಯನ್ನ ಉಳಿಸದಿದ್ದರೆ ಮುಂದಿನ ದಿನಗಳಲ್ಲಿ ಒತ್ತುವರಿದಾರರಿಂದ ಮುಳ್ಳಯ್ಯನಗಿರಿ ಪ್ರದೇಶಕ್ಕೆ ಉಳಿಗಾಲವಿರೋಲ್ಲ ಅನ್ನೋದ ಆತಂಕ ಸ್ಥಳಿಯರು ಹಾಗೂ ಪರಿಸರವಾದಿಗಳು. ಹಾಗಾಗಿ, ಈಗಲೇ ಮುಳ್ಳಯ್ಯಗಿರಿಗೊಂದು ಭದ್ರತೆ ಮಾಡದಿದ್ದರೆ ಮುಂದಿನ ಎಂಟತ್ತು ವರ್ಷಗಳಲ್ಲಿ ಮುಳ್ಳಯ್ಯನಗಿರಿ ತಪ್ಪಲಿನ ಪ್ರದೇಶ ಒತ್ತುವರಿ ಹಾಗೂ ತೋಟಗಳಾಗೋದ್ರಲ್ಲಿ ಯಾವುದೇ ಅನುಮಾನವಿಲ್ಲ ಆತಂಕ ಪರಿಸರವಾದಿಗಳದ್ದು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!