May 10, 2024

MALNAD TV

HEART OF COFFEE CITY

ಪ್ಲಾಸ್ಟಿಕ್ ಆರಿಸಿಕೊಂಡು ಬದುಕಿದ ಜೋಡಿಗೆ ಕೂಡಿ ಬಂತು ಕಂಕಣ ಭಾಗ್ಯ

1 min read

ಚಿಕ್ಕಮಗಳೂರು :
 ” ನಿರಾಶ್ರಿತರಿಗೆ ಹೊಸ ಬದುಕು ಕಟ್ಟಿಕೊಟ್ಟ ನಿರಾಶ್ರಿತರ ಕೇಂದ್ರ
ಪ್ಲಾಸ್ಟಿಕ್ ಆರಿಸಿಕೊಂಡು ಬದುಕಿದ್ದ ಜೋಡಿಗೆ ಕೂಡಿ ಬಂತು ಕಂಗಣ ಭಾಗ್ಯ
ನಿರಾಶ್ರಿತ ಜೋಡಿಗೆ ಮದುವೆ ಮಾಡಿಸಿ ಮಾನವೀಯತೆ ಮರೆದ ಕಾಫಿನಾಡಿನ ಕ್ರೈಸ್ತ ಸಂಘ .”

ನಿರಾಶ್ರಿತರರಿಬ್ಬರು ಮೂರು ವರ್ಷದಿಂದ ಒಟ್ಟಿಗೆ ಬದುಕುತ್ತಿದ್ದ ಜೋಡಿಗೆ ನಿರಾಶ್ರಿತ ಕೇಂದ್ರದಲ್ಲೇ ನಿರಾಶ್ರಿತ ಹಿರಿಯರ ಸಮ್ಮುಖದಲ್ಲಿ ಮದ್ವೆ ಮಾಡಿಸಿ ಹೊಸ ಜೀವನಕ್ಕೆ ದಾರಿ ಮಾಡಿಕೊಟ್ಟಿರೋ ಘಟನೆ ಚಿಕ್ಕಮಗಳೂರಿನ ನಿರಾಶ್ರಿತ ಕೇಂದ್ರದಲ್ಲಿ ನಡೆದಿದೆ.

ವರ ಕುಮಾರ್, ವಧು ರೇಣುಕಾ ಇಬ್ಬರ ಮೂಲತಃ ಚಿತ್ರದುರ್ಗ ಜಿಲ್ಲೆಯವರು. ಕಳೆದ ಮೂರು ವರ್ಷಗಳ ಹಿಂದೆ ಗಾರೆ ಕೆಲಸ ಮಾಡುವಾಗ ಇವರಿಬ್ಬರಿಗೆ ಚನ್ನಗಿರಿಯಲ್ಲಿ ಪ್ರೇಮಾಂಕುರವಾಗಿತ್ತು. ಅಲ್ಲಿಂದ ಚಿಕ್ಕಮಗಳೂರಿನ ಸಖರಾಪಟ್ಟಣದಲ್ಲಿ ನೆಲೆಸಿದ್ರು. ಕೊರೋನಾ ಎರಡನೇ ಅಲೆಯ ಅಬ್ಬರದಲ್ಲಿ ಕೆಲಸ ಸಿಗದಿದ್ದಾಗ ಚಿಕ್ಕಮಗಳೂರಲ್ಲಿ ಪ್ಲಾಸ್ಟಿಕ್ ಆರಿಸಿಕೊಂಡು ಬದುಕ್ತಿದ್ರು. ನಿರಾಶ್ರಿತರಿಗೆಂದೇ ನಿರಾಶ್ರಿತ ಕೇಂದ್ರ ತೆರೆದಿದ್ದ ಮಲೆನಾಡು ಕ್ರೈಸ್ತ ಸಂಘ 130 ಜನ ನಿರಾಶ್ರಿತರಿಗೆ ಸೂರು ಕಲ್ಪಿಸಿದ್ದರು. ಇವರಿಗೆ ಕೂಡ ಆಶ್ರಯ ನೀಡಿದ್ರು, ಇವರ ಪ್ರೇಮಾಂಕುರಕ್ಕೆ ಮನಸೋತ ಕ್ರೈಸ್ತ ಸಂಘದವರು ಮದ್ವೆ ಮಾಡಿಸಿ ಹೊಸ ಜೀವನಕ್ಕೆ ದಾರಿ ಮಾಡಿಕೊಟ್ಟಿದ್ದಾರೆ. ಆ ಖುಷಿಯಲ್ಲಿ ನಿರಾಶ್ರಿತ ಕೇಂದ್ರದ 130 ಜನರೂ ಕುಣಿದು-ಕುಪ್ಪಳಿಸಿ ನವದಂಪತಿಗೆ ಶುಭಹಾರೈಸಿದ್ದಾರೆ. ಈ ಹಳೇ ಲವರ್ಗಳಿಗೆ ಹೊಸ ಮದುವೆ ಮಾಡಿಸಿರೋ ಮಲೆನಾಡು ಕ್ರೈಸ್ತ ಸಂಘ ಇಬ್ಬರಿಗೂ ಹೊಸ ಜೀವನಕ್ಕೆ ದಾರಿ ಮಾಡಿಕೊಟ್ಟಿದೆ. ಬೀದಿಯಲ್ಲಿ ಸಿಕ್ಕಿದವರು ಮತ್ತೆ ಬೀದಿಗೆ ಬರೋದು ಬೇಡ ಅಂತ ಇಬ್ಬರಿಗೂ ನಗರದ ಹೋಂ ಸ್ಟೇವೊಂದರಲ್ಲಿ ಕೆಲಸ ನೋಡಿದ್ದಾರೆ. ಊಟ-ವಸತಿ ಎಲ್ಲಾ ಅಲ್ಲೆ. ಅವರು ಇವರ ಕೈಗೆ ಪೂರ್ಣ ಸಂಬಳವನ್ನೂ ನೀಡೋದಿಲ್ಲ. ಮನೆಗೆ ಬೇಕಾದ ಎಲ್ಲಾ ಸೌಲಭ್ಯ ಕಲ್ಪಿಸಿ, ವಾರಕ್ಕಿಷ್ಟು ಅಂತ ಖರ್ಚಿಗೆ ಮಾತ್ರ ಹಣ ಕೊಡಲು ಹೇಳಿದ್ದಾರೆ. ರಾಜ್ಯ ಅನ್ಲಾಕ್ ಆದ ಹಿನ್ನೆಲೆ ಕಳೆದ 65 ದಿನಗಳಿಂದ ನಿರಾಶ್ರಿತ ಕೇಂದ್ರ ತೆರದಿದ್ದ ಮಲೆನಾಡು ಕ್ರೈಸ್ತ ಸಂಘ ನಿರಾಶ್ರಿತ ಕೇಂದ್ರವನ್ನ ಕ್ಲೋಸ್ ಮಾಡುವ ಮುನ್ನ ಈ ಒಳ್ಳೆ ಕೆಲಸ ಮಾಡೋಕೆ ಮುಂದಾಗಿರೋದು ನಿಜಕ್ಕೂ ಶ್ಲಾಘನೀಯ…

ಶೃಂಗೇರಿ ಸಬ್ ರಿಜಿಸ್ಟ್ರಾರ್ ಬಹಳ ಪ್ರಾಮಾಣಿಕ, ನಿಷ್ಠೆ ಯಿಂದ ಕೆಲಸ ಮಾಡ್ತಾ ಇದ್ದಾರೆ ಅವರ ಬಳಿ ಹಣ ಕೇಳಿದ್ದು ತಪ್ಪು-ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ

 

 

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!