May 11, 2024

MALNAD TV

HEART OF COFFEE CITY

ಪಶ್ಚಿಮಘಟ್ಟ ರಕ್ಷಣೆಗೆ ಕೈಜೋಡಿಸಿ: ಕುಶಾಲಪ್ಪ

1 min read

ಚಿಕ್ಕಮಗಳೂರು: ಅರಣ್ಯ ಇಲಾಖೆ, ಕಂದಾಯ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಿ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯದಲ್ಲಿ ಕೈ ಜೋಡಿಸಬೇಕೆಂದು ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಪಡೆಯ ಅಧ್ಯಕ್ಷ ರವಿ ಕುಶಾಲಪ್ಪ ಹೇಳಿದರು.ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಪಶ್ಚಿಮ ಘಟ್ಟ ಕಾರ್ಯಪಡೆ ಹಾಗೂ ವಿವಿಧ ಅಧಿಕಾರಿಗಳೊಂದಿಗೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪರಿಸರ ಅರಣ್ಯದ ಬಗ್ಗೆ ಅರಿವು ಮೂಡಿಸದೇ ಹೋದರೆ ಮುಂದಿನ ದಿನಗಳಲ್ಲಿ ಕಷ್ಟಸಾಧ್ಯವಾಗುತ್ತದೆ ಎಂದು ಎಚ್ಚರಿಸಿದರು.

ವಾತಾವರಣ, ಪರಿಸರ, ಅರಣ್ಯ ಸಂರಕ್ಷಣೆ ಕುರಿತಂತೆ ಸರ್ಕಾರವು ಹೆಚ್ಚಿನ ಆರ್ಥಿಕ ಸಹಾಯ ನೀಡಬೇಕು. ಮಾನವ-ವನ್ಯಜೀವಿ ಸಂಘರ್ಷ ಕುರಿತಂತೆಯೂ ಹೆಚ್ಚಿನ ಗಮನ ಹರಿಸಬೇಕು. ಆನೆ ಹಾವಳಿಯನ್ನು ತಪ್ಪಿಸಲು ಬ್ಯಾರಿಕೇಡ್‍ಗಳ ನಿರ್ಮಾಣ ಮಾಡಬೇಕು, ಕಾಡಿನೊಳಗೆ ಅವುಗಳಿಗೆ ಆಹಾರ, ನೀರು ಮುಂತಾದ ಸೌಲಭ್ಯ ಒದಗಿಸುವ ಕಾರ್ಯವನ್ನು ಸರ್ಕಾರ ಕೈಗೊಳ್ಳಬೇಕೆಂದರು.
ಅರಣ್ಯ ಮೂಲನಿವಾಸಿಗಳಿಗೆ ನಿಯಮಾನುಸಾರ ಸೌಲಭ್ಯಗಳನ್ನು ಒದಗಿಸಬೇಕು. ಕೆಳಹಂತದ ಅರಣ್ಯ ಸಿಬ್ಬಂದಿಗಳಿಗೆ ಸಮರ್ಪಕ ವಸತಿ ವ್ಯವಸ್ಥೆ ಕಲ್ಪಿಸಬೇಕು. ಸಕಾಲದಲ್ಲಿ ಅವರಿಗೆ ವೇತನ ಪಾವತಿಯಾಗಲು ಕ್ರಮ ವಹಿಸುವಂತೆ ಅಧ್ಯಕ್ಷರು ತಿಳಿಸಿದರು.

ಜಿಲ್ಲೆಯಲ್ಲಿ ಶೇ. 30ಕ್ಕಿಂತಲೂ ಅರಣ್ಯ ಪ್ರದೇಶವಿದೆ. ಅದರಲ್ಲಿ ಬೇರೆ ಬೇರೆ ವಿಭಾಗಗಳಿದ್ದು, ಜಿಲ್ಲೆಯಲ್ಲಿ ಮುಖ್ಯವಾದ ಹಾಗೂ ಇಲ್ಲಿಗೆ ಸೀಮಿತವಾದ ವಿಶೇಷ ಪ್ರಬೇಧದ ಮರಗಿಡಗಳು, ಪ್ರಾಣಿ ಪಕ್ಷಿಗಳಿವೆ. ಸಾಮಾಜಿಕ ಅರಣ್ಯ ವತಿಯಿಂದ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜೀವ ವೈವಿಧ್ಯತೆ ನಿರ್ವಹಣಾ ಸಮಿತಿಗಳನ್ನು ರಚಿಸಲಾಗಿದೆ ಎಂದು ಚಿಕ್ಕಮಗಳೂರು ಉಪವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಇ.ಕಾಂತಿ ಸಭೆಗೆ ಮಾಹಿತಿ ನೀಡಿದರು.ಕಳೆದ 2018-19 ಸಾಲಿನ ಹುಲಿ ಗಣತಿಯ ಪ್ರಕಾರ ಸುಮಾರು 35 ಹುಲಿಗಳು ಅರಣ್ಯಗಳಲ್ಲಿವೆ. ಕಳೆದ ಮೂರು ವರ್ಷಗಳಿಂದ ಕೃಷಿಯನ್ನು ಪ್ರೋತ್ಸಾಹಿಸುವ ಸಲುವಾಗಿ ರೈತರಿಗೆ ಸಬ್ಸಿಡಿ ದರದಲ್ಲಿ ಸಸಿಗಳನ್ನು ವಿತರಣೆ ಮಾಡಿ ಅವುಗಳ ನಿರ್ವಹಣೆಗಾಗಿ ಮೂರು ವರ್ಷಗಳಿಗೆ ಧನ ಸಹಾಯ ನೀಡುತ್ತಾ ಬರಲಾಗಿದೆ. 2018-19 ಸಾಲಿನಲ್ಲಿ ಸುಮಾರು 4,62,662 ಸಾವಿರ ಸಸಿಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಅರಣ್ಯಕ್ಕೆ ಸಂಬಂಧಿಸಿದಂತೆ ಹಲವಾರು ಪ್ರಕರಣಗಳಿದ್ದು, ಅವುಗಳಲ್ಲಿ ಒತ್ತುವರಿ, ಶ್ರೀಗಂಧ ಮರಕಳ್ಳ ಸಾಗಣೆ, ವನ್ಯಮೃಗ ಬೇಟೆ ಸೇರಿದಂತೆ ಒಟ್ಟು 9,227 ಪ್ರಕರಣಗಳು ದಾಖಲಾಗಿದ್ದು, ಹಂತಹಂತವಾಗಿ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತಿದೆ ಎಂದು ಹೇಳಿದರು.ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮಾತನಾಡಿ, ಅರಣ್ಯ ಮತ್ತು ಗೋಮಾಳ ಎಂಬ ಜಮೀನು ವಿಭಾಗಗಳಿದ್ದು, ಅವುಗಳ ಅರ್ಜಿಗಳನ್ನು ವಿಲೇವಾರಿ ಮಾಡುವ ಸಂದರ್ಭಗಳಲ್ಲಿ ತೊಂದರೆಯಾಗಬಹುದು ಎಂಬ ನಿಟ್ಟಿನಲ್ಲಿ ಯಾವ ವಿಭಾಗ ಎಂದು ಗುರುತಿಸಿ, ಸರ್ವೆ ಮಾಡಿ ಪ್ರತ್ಯೇಕಿಕರಣ ಮಾಡಲಾಗುತ್ತದೆ. ಸುಮಾರು ಅರಣ್ಯಗಳು ದಾಖಲೆಯಲ್ಲಿ ಅರಣ್ಯ ಎಂದು ದಾಖಲಾಗಿವೆ. ಅಂತಹ ಜಮೀನಿನಲ್ಲಿ ಜನವಸತಿ, ಶಾಲೆ, ಆಸ್ಪತ್ರೆ, ವಿವಿಧ ಕಟ್ಟಡಗಳಿವೆ ಅದನ್ನು ಏನು ಮಾಡಬೇಕೆಂಬ ಎದುರಾಗುತ್ತದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!