April 29, 2024

MALNAD TV

HEART OF COFFEE CITY

ಬೆಂಕಿ ಅವಘಡ ತಡೆಯಲು ದೇವರಿಗೆ ಹರಕೆ

1 min read

ಚಿಕ್ಕಮಗಳೂರು: ಅರಣ್ಯಕ್ಕೆ ಬೆಂಕಿ ಬೀಳುವುದನ್ನು ತಡೆಗಟ್ಟಲು ಅರಣ್ಯ ಇಲಾಖೆ ಹಲವು ಯೋಜನೆಗಳನ್ನು ರೂಪಿಸಿದೆ. ಇಲಾಖೆಯ ವ್ಯಾಪ್ತಿಯ ಕಾರ್ಯಗಳ ಜೊತೆಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕೆಲಸವೂ ನಿರಂತರವಾಗಿದೆ. ಆದರೆ ಕಿಡಿಗೇಡಿಗಳ ಕೃತ್ಯಕ್ಕೆ ಹಾಗೂ ಮೂಡನಂಬಿಕೆಯ ಕಾರಣಕ್ಕೆ ಇನ್ನು ಅಲ್ಲಲ್ಲಿ ಬೆಂಕಿ ಅವಘಡಗಳು ಕಾಣಿಸಿಕೊಳ್ಳುತ್ತಿದ್ದು ತಾಲೂಕಿನ ಸಿಂದಿಗೆರೆ ಗ್ರಾಮಸ್ಥರ ಪರಿಸರಾಸಕ್ತರು ಈಗ ದೇವರ ಮೊರೆ ಹೋಗಿದ್ದಾರೆ.

ಇದೇನಪ್ಪಾ ಅರಣ್ಯಕ್ಕೆ ಬೆಂಕಿ ಬೀಳುವುದನ್ನು ತಡೆಗಟ್ಟಲು ದೇವರ ಮೊರೆ ಅಂದ್ಕೊಂಡರೆ ಇದು ನಿಜಕ್ಕೂ ಸತ್ಯ. ಇತ್ತೀಚ್ಚೆಗೆ ಅರಣ್ಯ ಇಲಾಖೆ ಚಿಕ್ಕಮಗಳೂರು ವಲಯ ತಮ್ಮ ವ್ಯಾಪ್ತಿಯಲ್ಲಿ ಬೆಂಕಿ ಅವಘಡಗಳನ್ನು ತಪ್ಪಿಸಲು ಡ್ರೋಣ್ ಮೊರೆಹೋಗಿತ್ತು. ಸೂಕ್ಷ್ಮ ಅರಣ್ಯಗಳ ವ್ಯಾಪ್ತಿಯಲ್ಲಿ ಡ್ರೋಣ್ ಹಾರಾಟ ನಡೆಸಿ ಕಾಡ್ಗಿಚ್ಚಿಗೆ ಕಾರಣವಾಗುವವರ ಮೇಲೆ ಹದ್ದಿನ ಕಣ್ಣೀಡಲಾಗಿತ್ತು. ಇದರ ಜೊತೆಗೆ ಹಲವು ಯೋಜನೆಗಳನ್ನು ರೂಪಿಸಿದ್ರು ಸಹ ಬೆಂಕಿ ಅವಘಡಗಳು ಪತ್ತೆಯಾಗಿದ್ದವು. ಇದಕ್ಕೂ ಒಂದು ಹೆಜ್ಜೆ ಮುಂದೆ ಹೋದ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದು ತನ್ನೂರಿನ ಅರಣ್ಯ ಉಳಿಸಲು ಹೊಸ ತಂತ್ರದೊಂದಿಗೆ ಮುಂದಾಗಿದ್ದಾರೆ.

 

ಸಿಂದಿಗೆರೆ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಪ್ರತಿ ಬಾರಿ ಕಿಡಿಗೇಡಿಗಳ ಕೃತ್ಯಕ್ಕೆ ಕಾಡಿಗೆ ಬೆಂಕಿ ಹಾಕುವ ಪ್ರಕರಣಗಳು ಅಲ್ಲಲ್ಲಿ ಕಂಡು ಬರುತ್ತಿದ್ದರವು. ಇದರಿಂದ ಹೊಸ ತಂತ್ರಕ್ಕೆ ಮುಂದಾದ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಂದಿಗೆರೆ ಮೀಸಲು ಅರಣ್ಯಕ್ಕೆ ಬೆಂಕಿ ಹಾಕುವವರ ಜೀವನ ಸರ್ವನಾಶವಾಗಲೆಂದು ಶ್ರೀ ರೇವಣಸಿದ್ದೇಶ್ವರ ಹಾಗೂ ಪುರದಮ್ಮ ದೇವರಿಗೆ ಹರಕೆ ಹೊರಲಾಗಿದೆ ಎಂದು ಅರಣ್ಯ ವ್ಯಾಪ್ತಿಯ ದೇವಗೊಂಡನಹಳ್ಳಿ, ಕರಡಿಗವಿಮಠ, ಸಿಂದಿಗೆರೆ, ಎಸ್.ಬಿದರೆ, ಭೂಚೇನಹಳ್ಳಿ ಕಾವಲ್ ನ ಹಲವು ಕಡೆಗಳಲ್ಲಿ ಈ ರೀತಿಯ ಬ್ಯಾನರ್ ಅಳವಡಿಸಲಾಗಿದೆ.

ಈ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಇಲಾಖೆ ಅಳವಡಿಸಿದ ಈ ತಂತ್ರದಿಂದ ಈ ಭಾಗದಲ್ಲಿ ಬೆಂಕಿ ಅವಘಡ ಈ ಬಾರಿ ನಿಯಂತ್ರಣಕ್ಕೆ ಬಂದಿದೆ. ಮೇವಿನ ಕಾರಣಕ್ಕೆ ಹಾಗೂ ಇನ್ನೀತರ ಕೃತ್ಯದಿಂದ ಪ್ರತಿವರ್ಷ ಸಾಕಷ್ಟು ಬಾರಿ ಬೆಂಕಿ ಅವಘಡಗಳು ಸಂಭವಿಸುತ್ತಿದ್ದವು. ಆದರೆ ಈ ಬಾರಿ ಇದು ಸಂಪೂರ್ಣಕ್ಕೆ ಹಿಡಿತಕ್ಕೆ ಬಂದಿದ್ದು ಯಾವುದೇ ಪ್ರಕರಣ ಈ ಬಾರಿ ಕಂಡು ಬರದಿರುವುದು ಅರಣ್ಯ ಇಲಾಖೆ ಪ್ಲಾನ್ ಸಕ್ಸಸ್ ಆದಂತಾಗಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!