May 10, 2024

MALNAD TV

HEART OF COFFEE CITY

ಆಸ್ಪತ್ರೆ ಇಲ್ಲದ ಊರು, ನಿಧಾನವಾಗಿ ಚಲಿಸಿ ಮುಖ್ಯಮಂತ್ರಿಗಳೇ : ಸಿಎಂಗೆ ಸೂಚನೆ

1 min read

 

ಚಿಕ್ಕಮಗಳೂರು.: ಇದು ಆಸ್ಪತ್ರೆ ಇಲ್ಲದ ಊರು, ನಿಧಾನವಾಗಿ ಚಲಿಸಿ ಮುಖ್ಯಮಂತ್ರಿಗಳೇ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಬ್ಯಾನರ್ ಮೂಲಕ ಸ್ವಾಗತ ಕೋರಿರುವ ಘಟನೆ ಜಿಲ್ಲೆಯ ಶೃಂಗೇರಿಯಲ್ಲಿ ನಡೆದಿದೆ. ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಶೃಂಗೇರಿ ಹಾಗೂ ಹರಿಹರಪುರ ಮಠಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರು ಶೃಂಗೇರಿಯ ಮೆಣಸೆ ಹೆಲಿಪ್ಯಾಡ್ ನಲ್ಲಿ ಹೆಲಿಕಾಪ್ಟರ್ ಇಳಿದು ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ “ಇದು ಆಸ್ಪತ್ರೆ ಇಲ್ಲದ ಊರು, ಮುಖ್ಯಮಂತ್ರಿಗಳೇ ನಿಧಾನವಾಗಿ ಚಲಿಸಿ ಎಂದು” ಬ್ಯಾನರ್ ಕಟ್ಟಿ ಅಣಕಿಸುವ ರೀತಿ ಸ್ವಾಗತ ಕೋರಿದ್ದಾರೆ.

15 ವರ್ಷಗಳಿಂದ ಆಸ್ಪತ್ರೆಗಾಗಿ ಹೋರಾಡುತ್ತಿದ್ದೇವೆ. ಬರಿ ಭರವಸೆ ನೀಡಿದವರೇ ಹೆಚ್ಚು. ಸರ್ಕಾರ ಮಾತು ತಪ್ಪುತ್ತಿದೆ ಎಂದು ಅಸಮಾಧಾನ ಹೊರಹಾಕಿದರು. ಈ ಬಗ್ಗೆ ಹೆಲಿಪ್ಯಾಡ್ ನಲ್ಲಿ ಸ್ಥಳಿಯರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಬಳಿಕ‌ ಶೃಂಗೇರಿಯಲ್ಲಿ ೧೦೦ ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಹಾಗೂ ಇಲಾಖೆಯಿಂದ ಮಂಜೂರಾತಿ ಮಾಡಿಸುವುದು ನಮ್ಮ ಕೆಲಸ, ಜಾಗ ಸಿಕ್ಕ ಕೂಡಲೇ ಕಾಮಗಾರಿಯನ್ನ ಆರಂಭಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನರಿಗೆ ಭರವಸೆ ನೀಡಿದರು.ಜಾಗದ ಸಮಸ್ಯೆ ಬಗೆರಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇವೆ.

ಆದಷ್ಟು ಬೇಗ ಅದಕ್ಕೆ ಜಾಗ ಮಂಜೂರಾತಿ ಕೊಡುತ್ತೇವೆ ಎಂದರು.ಈ ವೇಳೆ ಸ್ಥಳೀಯರು ಅಕ್ಕೊಂದು ಸಮಯ ನಿಗಧಿಪಡಿಸಿ ಯಾವಾಗ ಕಾಮಗಾರಿ ಆರಂಭಿಸುತ್ತಿರಿ ಎನ್ನುವುದನ್ನು ತಿಳಿಸಿ ಎಂದು ಒತ್ತಾಯಿಸಿ, ನಮಗೆ ಪ್ರಾಮಿಸ್ ಮಾಡಿ ಎಂದರು. ಆಗ ಪ್ರಾಮಿಸ್ ಮಾಡಲು ಆಗಲ್ಲ. ನಾನು ಕೆಲಸ ಮಾಡುತ್ತೇನೆ ಎಂದರು.ಮುಖ್ಯಮಂತ್ರಿಯಾಗಿ ಆಶ್ವಾಸನೆ ಕೊಡುತ್ತಿದ್ದೇವೆ. ಸಮಯ ಹೇಳಲು ಆಗವುದಿಲ್ಲ. ಜಾಗ ಸಿಗುವ ಮುನ್ನವೇ ಅನುದಾನ ಮಂಜೂರು ಮಾಡಲು ನಾವು ಸಿದ್ಧರಿದ್ದೇವೆ. ಆದರೆ, ಜಾಗ ಸಿಕ್ಕ ನಂತರ ಕೆಲಸ ಮಾಡಿಸುತ್ತೇವೆ ಎಂದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!