May 12, 2024

MALNAD TV

HEART OF COFFEE CITY

ಗಾಂಧೀಜಿ ಕಾಫಿನಾಡಿಗೆ ಬಂದು 94 ವರ್ಷ, ಜಿಲ್ಲಾಡಳಿತದಿಂದ “ನೆನಪಿನ ನಮನ”

1 min read

ಮಹಾತ್ಮ ಗಾಂಧೀಜಿಯವರು ಜಿಲ್ಲೆಗೆ ಭೇಟಿ ನೀಡಿ ೯೪ ವರ್ಷ ಪೂರೈಸಿದೆ: ಜಿಲ್ಲಾಧಿಕಾರಿ
ಚಿಕ್ಕಮಗಳೂರು.ಆ.೧೯: ಮಹಾತ್ಮ ಗಾಂಧೀಜಿ ಅವರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ  ೧೯೨೭ರ  ಆಗಸ್ಟ್ ೧೯ ರಂದು ಜಿಲ್ಲೆಗೆ ಭೇಟಿ ನೀಡಿ ಇಂದಿಗೆ ೯೪ ವರ್ಷ ಪೂರೈಸಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ಹೇಳಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಛೇರಿಯ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಆಯೋಜಿಸಲಾಗಿದ್ದ ನೆನಪಿನ ನಮನ ಎಂಬ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಗೆ ಪುಷ್ಪಾರ್ಪಣೆ ಮಾಡಿ ಮಾತನಾಡಿದರು.
ಚಿಕ್ಕಮಗಳೂರು ಜಿಲ್ಲೆಗೆ ಈ ದಿನ ಐತಿಹಾಸಿಕ ದಿನವಾಗಿದ್ದು, ೧೯೨೭ ಆಗಸ್ಟ್ ೧೯ ರಂದು ಗಾಂಧೀಜಿ ಅವರು ಆಗೀನಾ ಅಮುಲ್ದಾರ್ ಕಛೇರಿಗೆ ಭೇಟಿ ನೀಡಿ ಸ್ವಾತಂತ್ರ್ಯದ ಸಂದೇಶವನ್ನು ನೀಡಿದಂತಹ ದಿನವಾಗಿದ್ದು, ಇಂದಿಗೆ ಮಹಾತ್ಮರು ಜಿಲ್ಲೆಗೆ ಆಗಮಿಸಿ ೯೪ನೇ ವರ್ಷವಾಗಿರುತ್ತದೆ ಎಂದು ತಿಳಿಸಿದರು.
ಮಹಾತ್ಮ ಗಾಂಧೀಜಿಯವರು ಗಂಗಾಧರ್ ರಾವ್ ದೇಶ್‌ಪಾಂಡೆ ಅವರ ಜೊತೆಯಲ್ಲಿ ಆಗಸ್ಟ್-೧೭ ರಂದು ಶಿವಮೊಗ್ಗ ಜಿಲ್ಲೆಯ ತಿರ್ಥಹಳ್ಳಿ, ಮಂದಗದ್ದೆ, ಗಾಜನೂರಿಗೆ ಪ್ರವಾಸ ಮಾಡಿ ಆಗಸ್ಟ್ ೧೮ ರಂದು ಭದ್ರಾವತಿ ಮಾರ್ಗವಾಗಿ ಕಡೂರಿಗೆ ಆಗಮಿಸಿ ಅಲ್ಲಿನ ಸ್ವಾತಂತ್ರ್ಯ ಹೋರಾಟಗಾರರಾದ ಕೆಂಪೇಗೌಡರು, ಕೃಷ್ಣ ಶೆಟ್ರು, ಲಕ್ಷ್ಮಿನಾರಾಯಣ್ ಮೊದಲಾದವರು ಗಾಂಧೀಜಿ ಅವರನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ನೆರವೇರಿಸುತ್ತಾರೆ ಕಾರ್ಯಕ್ರಮದಲ್ಲಿ ಗಾಂಧೀಜಿ ಅವರು ಜನತೆಗೆ ಸ್ವರಾಜ್ ಸಂದೇಶವನ್ನು ನೀಡುತ್ತಾರೆ, ಸ್ವರಾಜ್ ನಿಧಿಗಾಗಿ ಜಿಲ್ಲೆಯ ಸಾರ್ವಜನಿಕರಿಂದ ೪೦೧ ರೂ ಬೆಳ್ಳಿ ನಾಣ್ಯವನ್ನು ಸಮರ್ಪಿಸಿರುವುದು ಇತಿಹಾಸ ಪುಟಗಳಲ್ಲಿದೆ ಎಂದು ಹೇಳಿದರು.
ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವ ನಿಟ್ಟಿನಲ್ಲಿ ಚಿಕ್ಕಮಗಳೂರು ಜಿಲ್ಲೆಯ ಪಾತ್ರ ಅಪಾರವಾಗಿದೆ, ಗಾಂಧೀಜಿಯವರು ಯುವಕರಿಗೆ ನೀಡಿದಂತಹ ಸಂದೇಶದ ಮಾರ್ಗದಲ್ಲಿ ನಡೆದು ಹೋರಾಟದಲ್ಲಿ ಭಾಗಿಯಾಗಿ ಖಾದಿ ಉತ್ಪಾದನೆ ಮತ್ತು ಮಾರಾಟದಲ್ಲಿ ವ್ಯಾಪಕ ಬೆಂಬಲವನ್ನು ನೀಡುವುದರ ಜೊತೆಗೆ ಸಾರಾಯಿ ಅಂಗಡಿಗಳನ್ನು ಮುಚ್ಚಿಸಿ ಮತ್ತು ವಿದೇಶಿ ಬಟ್ಟೆಗಳನ್ನು ಸುಡುವಂತಹ ಅದೋಲವನ್ನು ನಡೆಸಿದರು ಎಂದು ತಿಳಿಸಿದರು.

 


ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಹೆಚ್,  ಅಪರ ಜಿಲ್ಲಾಧಿಕಾರಿ ಬಿ.ಆರ್ ರೂಪ, ಚಿಕ್ಕಮಗಳೂರು ಉಪವಿಭಾಗದ ಉಪ ವಿಭಾಗಾಧಿಕಾರಿ ಡಾ.ಹೆಚ್.ಎಲ್ ನಾಗರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!