May 10, 2024

MALNAD TV

HEART OF COFFEE CITY

‘ಸಾವಿರ ರೂಪಾಯಿ ಗಿರಾಕಿ’ ಎಂದು ಟಿ ರಾಜಶೇಖರ್ ಹೇಳಿದ್ದು ಯಾರಿಗೆ..?

1 min read

ಚಿಕ್ಕಮಗಳೂರು: ವರಸಿದ್ಧಿ ವೇಣುಗೋಪಾಲ್ ಅವರು ಗಣಪತಿ ಸೇವಾ ಟ್ರಸ್ಟ್ ನ 7 ಲಕ್ಷ ಸಾರ್ವಜನಿಕರ ವಂತಿಕೆ ಹಣವನ್ನು ತೆಗೆದುಕೊಂಡು ಹೋಗಿ ಹಿಂತಿರುಗಿಸಿದೆ ಮನೆಯಲ್ಲೇ ಇಟ್ಟುಕೊಂಡಿದ್ದು, ಇವರ ಮೇಲೆ ಕೇಸ್ ದಾಖಲಿಸಬೇಕು ಎಂದು ಜಿಲ್ಲಾ ಬಿಜೆಪಿ ವಕ್ತಾರ ಟಿ ರಾಜಶೇಖರ್ ತಿಳಿಸಿದರು.

ನಗರದ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಗರದ ಆಜಾದ್ ಪಾರ್ಕ್ ನಲ್ಲಿರುವ ದೊಡ್ಡ ಗಣಪತಿ ಟ್ರಸ್ಟ್ ನ ಅಧ್ಯಕ್ಷರಾದ ಇವರು 7 ಲಕ್ಷ ರೂ. ಸಾರ್ವಜನಿಕರ ವಂತಿಕೆ ಹಣವನ್ನು ಮನೆಯಲ್ಲಿ ಇಟ್ಟುಕೊಂಡು ವಂಚನೆ ಮಾಡಿದ್ದಾರೆ ಇವರ ಮೇಲೆ ಕೇಸನ್ನ ದಾಖಲಿಸಿ ಇವರನ್ನ ಅರೆಸ್ಟ್ ಮಾಡಬೇಕು ಎಂದು ಹೇಳಿದರು.

ಆ 7 ಲಕ್ಷ ರೂ. ದುಡ್ಡಿನಲ್ಲಿ 15 ದಿನಗಳ ಪ್ರವಾಸ ಮಾಡಿದ್ದಾರೆ ಈ ಕುರಿತಾಗಿ ಸಾರ್ವಜನಿಕರು ನಮಗೆ ದೂರನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ ಇಂದು ರವಿ ನಾಯಕ್ ಎಂಬುವರು ಸೂಕ್ತ ದಾಖಲೆಗಳೊಂದಿಗೆ ಟೌನ್ ಪೊಲೀಸ್ ಠಾಣೆಗೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ ಎಂದು ಹೇಳಿದರು.

ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಇವರು ಇಷ್ಟು ದೊಡ್ಡ ವಂಚನೆಯನ್ನ ಮಾಡಿದರು ಸಹ ಅವರನ್ನ ಅಕ್ಕಪಕ್ಕ ಕೂರಿಸಿಕೊಂಡು ನಗರದ ಪ್ರಥಮ ಪ್ರಜೆ ಎಂದು ಹೇಳುವುದನ್ನು ನಿಲ್ಲಿಸಬೇಕು ಎಂದ ಅವರು ಇದರ ಕುರಿತಾಗಿ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಅವರ ಮೇಲೆ “420′ ಕೇಸ್ ನನ್ನ ದಾಖಲಿಸಬೇಕು ಎಂದು ತಿಳಿಸಿದರು.

ಹಿಂದುಗಳು ತಮ್ಮ ಹಬ್ಬ ಎಂದು ವಂತಿಕೆಯನ್ನು ನೀಡಿದ್ದಾರೆ ವಂತಿಕೆಯನ್ನ ಮನೆಯಲ್ಲಿ ಇಟ್ಟುಕೊಂಡು ಕೊಡುವುದಿಲ್ಲ ಎನ್ನುವ ರೀತಿಯಲ್ಲಿ ಮಾತನಾಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು. ಈ ಸಂಬಂಧ ಕಮಿಟಿಯವರು ಪೊಲೀಸ್ ಸ್ಟೇಷನ್ನಲ್ಲಿ ಹೋಗಿ ದೂರನ್ನು ದಾಖಲು ಮಾಡಬೇಕು ಮಾಡದೇ ಇದ್ದರೆ ಅವರು ಕೂಡರಲ್ಲಿ ಈ ವಂಚನೆಯಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಕೊಳ್ಳಬೇಕಾಗುತ್ತದೆ ಎಂದರು.

ವರಸಿದ್ಧಿ ವೇಣುಗೋಪಾಲ್ ಅವರು ಈಗ ನಗರ ಸಭೆ ಅಧ್ಯಕ್ಷ, ಅಧ್ಯಕ್ಷ ಆಗುವ ಮೊದಲು ಇವರು ‘ಸಾವಿರ ರೂಪಾಯಿ ಗಿರಾಕಿ’ ಎಂದು ಚಿಕ್ಕಮಗಳೂರಿನ ಜನರಿಗೆ ಗೊತ್ತಿದೆ ಯಾರೇ ಸಾವಿರ ರೂಪಾಯಿ ಲಂಚವನ್ನ ಕೊಟ್ಟರು ಸಹ ಜೋಬಿನಲ್ಲಿ ಇಟ್ಟುಕೊಳ್ಳುವಂತಹ ವ್ಯಕ್ತಿ ಇವರು ಎಂದು ಕೆಣಕಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಿಟ್ ರಿಪೋರ್ಟ್ ನಲ್ಲಿ ವರಸಿದ್ಧಿ ವೇಣುಗೋಪಾಲ್ ಹತ್ತಿರ 7 ಲಕ್ಷ ರೂಪಾಯಿ ಇದೆ ಎಂದು ತಿಳಿದುಬಂದಿದೆ. ಹಾಗೆ ಈ ಹಣವನ್ನ ತಿಂದಿಲ್ಲ ಎಂದಾದರೆ ಕಮಿಟಿಯಿಂದ ಅವರ ಖಾತೆಗೆ ಚಲಾವಣೆಯಾದ ಹಣದ ವಿವರಗಳೊಂದಿಗೆ ಪಾಸ್ ಬುಕ್ ಪ್ರತಿಯನ್ನ ಪತ್ರಕರ್ತರು ಮತ್ತು ಸಾರ್ವಜನಿಕರ ಮುಂದೆ ಪ್ರದರ್ಶನ ಮಾಡಬೇಕು ಮಾಡದಿದ್ದಲ್ಲಿ ಅವರ ಮೇಲೆ ಕೇಸನ್ನ ದಾಖಲಿಸಿ ಆ ಹಣವನ್ನು ವಸೂಲಿ ಮಾಡಬೇಕು. ಇಲ್ಲದಿದ್ದರೆ ಎಲ್ಲಾ ಸಂಘಟನೆಗಳು ಸೇರಿ ಪ್ರತಿಭಟನೆ ಮಾಡಿ ಆದರೂ ವಸೂಲಿ ಮಾಡುತ್ತೇವೆ ಎಂದರು ಎಚ್ಚರಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!