April 27, 2024

MALNAD TV

HEART OF COFFEE CITY

ಸೆಂಟ್ರಲ್ ಅಮೆರಿಕಾದಲ್ಲೂ ‘ಮಳೆ ನೀರು ಕೊಯ್ಲು’ ವಿಧಾನ ಅಳವಡಿಕೆಗೆ ಚಿಂತನೆ

1 min read

ಚಿಕ್ಕಮಗಳೂರು: ಅಂತರ್ಜಲ ಬತ್ತಿ ಹನಿ ನೀರಿಗೂ ಪರದಾಡುತ್ತಿರುವ ಈ ಸಂದರ್ಭದಲ್ಲಿ ಮಳೆ ನೀರು ಕೊಯ್ಲು ಒಂದು ಅಮೂಲ್ಯವಾದ ಕಾರ್ಯಕ್ರಮವಾಗಿದ್ದು ಈ ತಂತ್ರಜ್ಞಾನವನ್ನು ನಮ್ಮ ದೇಶದಲ್ಲಿಯೂ ಅಳವಡಿಕೆ ಮಾಡಿಕೊಳ್ಳಲು ಮುಂದಾಗಿದ್ದು ಎಲ್ಲ ದೇಶಗಳ ಕೂಡ ಇದನ್ನು ಅಳವಡಿಸಿಕೊಂಡು ನೀರಿನ ಸಮಸ್ಯೆ ದೂರ ಮಾಡಲು ಈ ಕಾರ್ಯಕ್ರಮ ಜಗತ್ತಿನಾದ್ಯಂತ ವಿಸ್ತರಣೆಯಾಗಬೇಕು ಎಂದು ಸೆಂಟ್ರಲ್ ಅಮೆರಿಕಾದ ಗ್ವಾಟೆ ಮೂಲಾದ ಲಿಯೋನೆಲ್ ಲೂನ ತಿಳಿಸಿದರು.

ನಗರದ ಹೊರವಲಯದ ಹಾದಿಹಳ್ಳಿಯಲ್ಲಿರುವ ಲೈನ್ ವಾಟರ್ ಹಾರ್ವೆಸ್ಟಿಂಗ್ ಟೆಕ್ನಾಲಜಿನ್‌ನ ರೈನಿ ಸಂಶೋಧನಾ ಸಂಸ್ಥೆಗೆ ಭೇಟಿ ನೀಡಿ ಅಲ್ಲಿನ ತಂತ್ರಜ್ಞಾನ ಹಾಗೂ ಮಳೆ ನೀರು ಕೊಯ್ಲಿನ ವಿಧಾನ ವೀಕ್ಷಿಸಿ ಬಳಿಕ ಮಾತನಾಡಿದ ಅವರು, ಇಲ್ಲಿನ ಮಳೆ ನೀರು ಕೊಯ್ಲು ವಿಧಾನ ತುಂಬಾ ಉಪಯೋಗಕರವಾಗಿದ್ದು ತಮ್ಮ ದೇಶದಲ್ಲಿ ಈ ವಿಧಾನವನ್ನು ಈಗಾಗಲೇ ಸ್ವಲ್ಪ ಮಟ್ಟಿಗೆ ಅಳವಡಿಸಿಕೊಳ್ಳಲಾಗಿದೆ.

ಅಮೆರಿಕ ಹಾಗೂ ಸೆಂಟ್ರಲ್ ಅಮೆರಿಕಾದಲ್ಲಿಯೂ ಮಳೆ ಕೊರತೆಯಿಂದ ಅಂತರ್ಜಲದ ಮಟ್ಟ 2 ಸಾವಿರ, ಅಡಿ ದಾಟಿದ್ದು, ಇಲ್ಲಿನ ತಂತ್ರಜ್ಞಾನದ ಕುರಿತು ಅಧ್ಯನ ಮಾಡಿ, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಳೆ ನೀರು ಕೊಯ್ದು ವಿಧಾನವನ್ನು ಅಳವಡಿಕೆ ಮಾಡಿಕೊಳ್ಳುವ ಮೂಲಕ ಸೆಂಟ್ರಲ್ ಅಮೆರಿಕಾದಲ್ಲಿ ನೀರಿನ ಕೊರತೆ ನಿವಾರಿಸುವ ಉದ್ದೇಶದಿಂದ ನಮ್ಮ ದೇಶ ನಮ್ಮನ್ನು ಇಲ್ಲಿಗೆ ಕಳುಹಿಸಿದ್ದು, ಇಲ್ಲಿನ ಪ್ರತಿಯೊಂದು ವಿಧಾನವು ಕೂಡಾ ಅತ್ಯಮೂಲ್ಯವಾಗಿದೆ ಎಂದರು.

ಚಿಕ್ಕಮಗಳೂರಿನಲ್ಲಿ ಮಳೆ ನೀರು ಕೊಯ್ಲು ತಂತ್ರಜ್ಞಾನ ಸಂಶೋಧನೆ ನಡೆಸುತ್ತಿರುವ ಬಗ್ಗೆ ನಾನು ತಿಳಿದುಕೊಂಡಿದ್ದೆ. ಆ ಹಿನ್ನೆಲೆಯಲ್ಲಿ ಈ ಮಳೆ ನೀರು ಕೊಯ್ಲು ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿದ್ದು, ಈ ಕೇಂದ್ರ ಭಾರತ ದೇಶದ ಹೆಮ್ಮೆಯ ಕೇಂದ್ರವಾಗಿದೆ. ಇಲ್ಲಿ ನಡೆದಿರುವ ಸಂಶೋಧನಾ ಕಾರ್ಯಗಳು ನನಗೆ ಅದ್ಭುತ ಎನಿಸಿತು ಎಂದು ಕೇಂದ್ರದ ಸಾಧನೆಗಳನ್ನು ಕೊಂಡಾಡಿದರು.

ರೈನ್ ವಾಟರ್ ಹಾರ್ವೆಸ್ಟಿಂಗ್ ಟೆಕ್ನಾಲಜಿಸ್ ನಿರ್ದೇಶಕ ಮೈಕಲ್ ಸದಾನಂದ ಬ್ಯಾಪ್ಟಿಸ್ಟ್ ಮಳೆ ನೀರು ಕೊಯ್ಲು ಪ್ರಾತ್ಯಕ್ಷತೆಯ ಮೂಲಕ ಮಾಹಿತಿಗಳನ್ನು ನೀಡಿ, ವ್ಯರ್ಥವಾಗಿ ಹರಿದು ಹೋಗುವ ಮಳೆಯ ನೀರು ಕೊಯ್ಲು ಮಾಡುವ ಮೂಲಕ ಮರು ಬಳಕೆ ಮಾಡಬಹುದು. ನಮ್ಮ ಸಂಸ್ಥೆಯ ಮೂಲಕ ಜನ ಜಾಗೃತಿ ಮೂಡಿಸುವ ಕಾರ್ಯ ದೇಶದ ನಾನಾ ಕಡೆಗಳಲ್ಲಿ ನಡೆಯುತ್ತಿದೆ. ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಯುವಜನರಿಗೆ ತಿಳುವಳಿಕೆ ನೀಡಲಾಗುತ್ತಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ರೈನ್ ವಾಟರ್ ಹಾರ್ವೆಸ್ಟಿಂಗ್ ಟೆಕ್ನಾಲಜಿಸ್ ನಿರ್ದೇಶಕರಾದ ಮನೋಜ್ ಸಾಮ್ಯುಯೆಲ್, ವರುಣ್ ರೊನಾಲ್ಡೊ ಬ್ಯಾಪ್ಟಿಸ್ಟ್ ಸೇರಿದಂತೆ ಅನೇಕ ಆಸಕ್ತರು ಭಾಗವಹಿಸಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!