May 2, 2024

MALNAD TV

HEART OF COFFEE CITY

ಗಾಜಾ ಪ್ರದೇಶದ ವಿಂಗಡಣೆ ಹೇಗಿದೆ ಗೊತ್ತಾ..?

1 min read

ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದ ಕೇಂದ್ರ ಬಿಂದು ಗಾಜಾವನ್ನು ಹಲವಾರು ಆಡಳಿತಾತ್ಮಕ ಮತ್ತು ರಾಜಕೀಯ ಭಾಗಗಳಾಗಿ ವಿಂಗಡಿಸಲಾಗಿದೆ: ಗಾಜಾ ಪಟ್ಟಿಯ ಸಧ್ಯದ ಭೌಗೋಳಿಕ ವಿಂಗಡಣೆ ರೀತಿ ಇದೆ.

 

ಗಾಜಾ ನಗರ:

ಇದು ಗಾಜಾ ಪಟ್ಟಿಯ ಅತಿದೊಡ್ಡ ನಗರ. ಗಾಜಾದ ಆಡಳಿತ ಮತ್ತು ಆರ್ಥಿಕ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಇಡೀ ಗಾಜಾವನ್ನು 5 ಪ್ರಮುಖ ಗವರ್ನರೇಟ್‌ಗಳಾಗಿ ಅಥವಾ ಭಾಗಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದೂ ತನ್ನದೇ ವಿಭಿನ್ನ ಸಮಸ್ಯೆ, ಜನಸಂಖ್ಯೆ ಹಾಗೂ ಪ್ರಾಮುಖ್ಯತೆ ಹೊಂದಿವೆ.

1. ಗಾಜಾ ಗವರ್ನರೇಟ್: ಗಾಜಾ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಒಳಗೊಂಡಿದೆ.

2. ಉತ್ತರ ಗಾಜಾ ಗವರ್ನರೇಟ್: ಗಾಜಾ ಪಟ್ಟಿಯ ಉತ್ತರ ಭಾಗದಲ್ಲಿರುವ ಪಟ್ಟಣಗಳು ಮತ್ತು ನಗರಗಳನ್ನು ಒಳಗೊಂಡಿದೆ.

3. ಡೀರ್ ಅಲ್-ಬಲಾಹ್ ಗವರ್ನರೇಟ್: ಗಾಜಾ ಪಟ್ಟಿಯ ಮಧ್ಯ ಭಾಗದಲ್ಲಿದೆ.

4. ಖಾನ್ ಯೂನಿಸ್ ಗವರ್ನರೇಟ್: ಗಾಜಾ ಪಟ್ಟಿಯ ದಕ್ಷಿಣ ಭಾಗದಲ್ಲಿರುವ ಪ್ರದೇಶ

5. ರಫಾ ಗವರ್ನರೇಟ್: ದಕ್ಷಿಣ ಭಾಗದಲ್ಲಿ, ಈಜಿಪ್ಟ್‌ನ ಗಡಿಯ ಸಮೀಪದಲ್ಲಿದೆ.

 

ನಿರಾಶ್ರಿತರ ಶಿಬಿರಗಳು:

ಗಾಜಾ ಪಟ್ಟಿಯು ಹಲವಾರು ಪ್ಯಾಲೇಸ್ಟಿನಿಯನ್ ನಿರಾಶ್ರಿತರ ಶಿಬಿರಗಳನ್ನು ಹೊಂದಿದೆ. ಅರಬ್-ಇಸ್ರೇಲಿ ಘರ್ಷಣೆಗಳ ಸಮಯದಲ್ಲಿ ಮತ್ತು ನಂತರ ಸ್ಥಳಾಂತರಗೊಂಡ ಪ್ಯಾಲೆಸ್ಟೀನಿಯನ್ನರಿಗೆ ಇಲ್ಲಿ ಆಶ್ರಯ ನೀಡಲಾಗಿದೆ. ಈ ಶಿಬಿರಗಳ ಹೆಸರುಗಳು ಹೀಗಿವೆ.

1. ಜಬಾಲಿಯಾ

2. ನುಸೆರಾತ್

3. ಬೀಚ್ ಕ್ಯಾಂಪ್

4. ಖಾನ್ ಯುನಿಸ್ ಕ್ಯಾಂಪ್

5. ರಫಾ ಕ್ಯಾಂಪ್

 

ಹಮಾಸ್-ನಿಯಂತ್ರಿತ ಪ್ರದೇಶಗಳು:

ಹಮಾಸ್ ಗಾಜಾ ಪಟ್ಟಿಯ ಭಾಗಗಳ ಮೇಲೆ ಸಾಕಷ್ಟು ನಿಯಂತ್ರಣ ಹೊಂದಿದೆ. ಅನೇಕ ಭೂ ಭಾಗಗಳನ್ನು ತನ್ನ ಹಿಡಿತದಲ್ಲಿ ಇತಟ್ಟುಕೊಂಡು ಆಡಳಿತ ನಡೆಸುತ್ತಿದೆ.

 

ಫತಾಹ್-ನಿಯಂತ್ರಿತ ಪ್ರದೇಶಗಳು:

ಫತಾಹ್ ಗಾಜಾದಲ್ಲಿ ಮತ್ತೊಂದು ರಾಜಕೀಯ ಪಕ್ಷ. ಇದು ಹಮಾಸ್‌ನಷ್ಟು ನಿಯಂತ್ರಣ ಹೊಂದಿಲ್ಲ. ಇದು ಪ್ಯಾಲೇಸ್ಟಿನಿಯನ್ ಪ್ರಾಧಿಕಾರಕ್ಕೆ (PA) ಸಂಬಂಧಿಸಿದ ಪ್ರದೇಶಗಳಲ್ಲಿ ತನ್ನ ಹಿಡಿತ ಹೊಂದಿದೆ.

 

ನಿರ್ಬಂಧಿತ ವಲಯಗಳು:

ಇಸ್ರೇಲ್ ಮತ್ತು ಈಜಿಪ್ಟ್‌ನ ಗಡಿಯ ಸಮೀಪವಿರುವ ಕೆಲವು ಪ್ರದೇಶಗಳು ಭದ್ರತೆಯ ಕಾರಣದಿಂದ ಹೆಚ್ಚು ನಿರ್ಬಂಧಿತವಾಗಿವೆ. ಇಸ್ರೇಲ್ ಮತ್ತು ಈಜಿಪ್ಟ್ ಎರಡೂ ವಿಧಿಸಿರುವ ಭದ್ರತಾ ಕ್ರಮಗಳಿಂದಾಗಿ ಈ ಪ್ರದೇಶಗಳು ಸಾಮಾನ್ಯವಾಗಿ ನಾಗರಿಕರಿಗೆ ಪ್ರವೇಶ ನೀಡುವುದಿಲ್ಲ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!