May 3, 2024

MALNAD TV

HEART OF COFFEE CITY

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ : ರಣದೀಪ್ ಸುರ್ಜೆವಾಲಾ

1 min read

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ, ಹುಬ್ಬಳ್ಳಿ ಪ್ರಕರಣದಲ್ಲಿ ಕೇವಲ ಮೂರು ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಕರ್ನಾಟಕ ಯಾವೊಬ್ಬ ಮಗಳಿಗೂ ಈ ರೀತಿ ಮುಂದೆ ಆಗುವುದಿಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿದ್ದಾರೆ.

ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದ ಖಾಸಗಿ ಹೋಟೆಲ್ ನಲ್ಲಿ ಜಿಲ್ಲಾ ಮಟ್ಟದ ಕಾಂಗ್ರೆಸ್ ಮುಖಂಡರ ಸಭೆ ನಡೆಸಲು ಆಗಮಿಸಿದ ವೇಳೆ ಪತ್ರಕರ್ತರ ಜೊತೆ ಮಾತನಾಡಿದ ಸುರ್ಜೆವಾಲಾ ಬಿಜೆಪಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲೂ ಭ್ರಷ್ಟಾಚಾರ ನಡೆಸಿದ್ದು ದೇಶದಲ್ಲಿ 400 ಕ್ಷೇತ್ರ ಅಲ್ಲ 150 ಸ್ಥಾನಗಳಲ್ಲಿಯೂ ಗೆಲ್ಲುವುದಿಲ್ಲ ಎಂದಿದ್ದಾರೆ. ಬಿಜೆಪಿ ರಾಜ್ಯ ಮುಖಂಡರು ಒಬ್ಬರ ಮೇಲೊಬ್ಬರು ಕೆಸರೆರಚಾಟ ಮಾಡಿಕೊಳ್ಳುತ್ತಿದ್ದಾರೆ, ಸಿ.ಟಿ.ರವಿಯನ್ನು ಮೂಲೆಗುಂಪು ಮಾಡಿ ಕೋಲ್ಡ್ ಸ್ಟೋರೇಜ್ ನಲ್ಲಿ ಇಟ್ಟಿದ್ದಾರೆ ಎಂದು ಅವರು ಲೇವಡಿ ಮಾಡಿದರು. ಇದೇ ವೇಳೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಚುನಾವಣೆಯಲ್ಲಿ ಸಕ್ರಿಯರಾಗಿಲ್ಲ ನೀವೇ ಬರಬೇಕಾಯಿತಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸುರ್ಜೆವಾಲಾ ಪಕ್ಷ ಕಟ್ಟಲು ನಾನಲ್ಲದೇ ಬೇರೆ ಯಾರು ಬರಬೇಕು ಎಂದಿದ್ದು ಕಳೆದ ವಿಧಾನಸಭಾ ಚುನಾವಣೆ ವೇಳೆಯಲ್ಲೂ ನಾನು ಆಗಮಿಸಿದ್ದೆ ಐದೂ ಸ್ಥಾನಗಳನ್ನು ಚಿಕ್ಕಮಗಳೂರು ಜಿಲ್ಲೆಯಲ್ಲಿ ಗೆದ್ದು ಪ್ರತಿ ಮನೆಯ ಮೇಲೂ ಕಾಂಗ್ರೆಸ್ ಬಾವುಟ ಹಾರಿಸಿದ್ದೇವೆ ಎಂದರು. ರಾಜ್ಯದಲ್ಲಿ ಬಿಜೆಪಿ ಒಂದು ಪಕ್ಷವಾಗಿ ಉಳಿದಿಲ್ಲ ಅಪ್ಪಮಕ್ಕಳ ಪಾರ್ಟಿ ಆಗಿದ್ದು ಯಡಿಯೂರಪ್ಪ ವಿಜಯೇಂದ್ರ ಬಹುತೇಕರು ತೀವ್ರ ಅಸಮಾಧಾನ ಹೊಂದಿದ್ದಾರೆ ಎಂದಿರುವ ಸುರ್ಜೆವಾಲಾ ಕೇವಲ ಧರ್ಮದ ವಿಚಾರ ಮುಂದಿಟ್ಟು ರಾಜಕೀಯ ಮಾಡುವ ಬಿಜೆಪಿ ಹುನ್ನಾರ ಫಲಿಸುವುದಿಲ್ಲ ಹುಬ್ಬಳ್ಳಿ ಪ್ರಕರಣದ ಕುರಿತು ಗೃಹ ಸಚಿವರಿಂದ ಮಾಹಿತಿ ಪಡೆದಿದ್ದೇನೆ ಎಂದು ಹೇಳಿದರು. ಇದೇ ವೇಳೆ ಮಾತನಾಡಿದ ಅವರು ಬಿಜೆಪಿಗರು ತೀವ್ರ ಹತಾಶೆಗೆ ಒಳಗಾಗಿದ್ದು ನಮ್ಮನ್ನ ಕಂಡು ಕೇಸರಿ ಪಕ್ಷ ಭಯ ಪಟ್ಟಿದೆ ಅಷ್ಟೇ ಸಾಕು ಎಂದಿದ್ದಾರೆ. ಅವರಲ್ಲಿ ಸದ್ಯ ಯಾರೂ ಉಳಿದಿಲ್ಲ ಇಷ್ಟು ದಿನ ಅಭಿವೃದ್ಧಿ ಮಾಡದೇ ಇದೀಗ 2047 ಎನ್ನುತ್ತಿದ್ದಾರೆ ಮುಂದೆ 3047 ಎನ್ನುತ್ತಾರೆನೋ ಎಂದು ತಮಾಷೆ ಮಾಡಿದರು.

ಚಂಬು ಜಾಹೀರಾತು ಪ್ರದರ್ಶಿಸಿ ಮಾತನಾಡಿದ ರಣದೀಪ್ ಸಿಂಗ್ ಸುರ್ಜೆವಾಲಾ ಮೋದಿ ಸರ್ಕಾರ ಕರ್ನಾಟಕ ರಾಜ್ಯಕ್ಕೆ ದೊಡ್ಡ ಚಂಬು ಕೊಟ್ಟಿದೆ, ಬರ ಪರಿಹಾರದಲ್ಲಿ ಚಂಬು ಭದ್ರಾ ಮೇಲ್ದಂಡೆ ಕಾಮಗಾರಿಗೆ ಚಂಬು ತೆರಿಗೆಯಲ್ಲಿ ಚಂಬು 15 ನೇ ಫೈನಾನ್ಸ್ ಕಮಿಷನ್ ನಲ್ಲಿ ಚಂಬು 15 ಲಕ್ಷ ಜನರ ಖಾತೆಗೆ ಚಂಬು 2 ಕೋಟಿ ಉದ್ಯೋಗ ಸೃಷ್ಟಿಯಲ್ಲಿ ಚಂಬು ರೈತರ ಆದಾಯ ದ್ವಿಗುಣದಲ್ಲಿ ಚಂಬು ರಾಜ್ಯದ ಬಿಜೆಪಿ ಎಂ.ಪಿ.ಗಳು ಚಂಬು ಕೊಟ್ಟಿದ್ದು, ಈ ಎಲ್ಲಾ ಚಂಬುಗಳಿಗೆ ಉತ್ತರದ ರೂಪದಲ್ಲಿ ಉಡುಗೊರೆಯಾಗಿ ಈ ಲೋಕಸಭಾ ಚುನಾವಣೆಯಲ್ಲಿ ದೇಶದ ಜನರು ಬಿಜೆಪಿಗೆ ಚಂಬು ಕೊಡುತ್ತಾರೆ ಎಂದು ಅವರು ಹೇಳಿದರು

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!