ಪಾಕಿಸ್ತಾನ ರಾಜಕಾರಣಿಗಳಂತೆ ಮೋದಿ ಮನಸ್ಥಿತಿ : ರೇಣುಕಾರಾಧ್ಯ
1 min read
ರಾಜ್ಯಕ್ಕೆ ಆಗಮಿಸಿ ಕಾಂಗ್ರೆಸ್ ವಿರುದ್ಧ ತುಕ್ಡೆ ಗ್ಯಾಂಗ್ ಹೇಳಿಕೆ ನೀಡಿ ಹಿಂದಿರುಗಿದ ಪ್ರಧಾನಿ ಮೋದಿ ವಿರುದ್ಧ ಇಂಡಿಯಾ ಒಕ್ಕೂಟ ಪಕ್ಷಗಳು ಮುಗಿಬಿದ್ದಿವೆ. ಕಾಂಗ್ರೆಸ್ ಸಿಪಿಐ ಆಮ್ ಆದ್ಮಿ ಪಕ್ಷ ಜಂಟಿ ಪತ್ರಿಕಾಗೋಷ್ಠಿ ನಡೆಸಿ ನರೇಂದ್ರ ಮೋದಿ ಮೇಲೆ ಟೀಕಾಸ್ತ್ರ ಪ್ರಯೋಗಿಸಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ತುಕ್ಡೆ ಗ್ಯಾಂಗ್ ಎಂದಿರುವ ಪ್ರಧಾನಿ ನರೇಂದ್ರ ಮೋದಿ ನಾಲಿಗೆ ಹೊಲಸು ಮಾಡಿ ಕೆಡಿಸಿಕೊಂಡು ಈ ರೀತಿ ಹೇಳಿಕೆ ನೀಡುತ್ತಿದ್ದು, ಇಂತಹ ಹೀನಸ್ಥಿತಿಗೆ ಮೋದಿ ಬರಬಾರದಿತ್ತು ಎಂದು ಕೆ.ಪಿ.ಸಿ.ಸಿ ವಕ್ತಾರ ರವೀಶ್ ಕ್ಯಾತನಬೀಡು ಹೇಳಿದ್ದಾರೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ನಡೆದ ಇಂಡಿಯಾ ಮೈತ್ರಿಕೂಟದ ಪತ್ರಿಕಾಗೋಷ್ಠಿ ಇಂದು ರವೀಶ್ ಕ್ಯಾತನಬೀಡು ಮಾತನಾಡಿದರು. ಇದೇ ಗೋಷ್ಠಿಯಲ್ಲಿ ಕೆ.ಪಿ.ಸಿ.ಸಿ ವಕ್ತಾರ ಎಚ್ ಎಚ್ ದೇವರಾಜ್ ಮಾತನಾಡಿ ನಿನ್ನೆ ಬಿಜೆಪಿ ಬಿಡುಗಡೆ ಮಾಡಿರುವ ಸಂಕಲ್ಪ ಪತ್ರಕ್ಕೆ ಸ್ಪಷ್ಟತೆ ಇಲ್ಲ ಎಂದು ಟೀಕಿಸಿದರು. ಕಳೆದ 9 ವರ್ಷದಲ್ಲಿ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಸಿದ್ದೆ ಕೇಂದ್ರ ಸರ್ಕಾರದ ಸಾಧನೆ ಎಂದ ಎಚ್ ಎಚ್ ದೇವರಾಜ್ ಹಿಟ್ಲರ್ ಮಾಧರಿಯ ಧಮನಕಾರಿ ನೀತಿಯ ಮೋದಿಯದ್ದು ಕೇವಲ ಮೊಸಳೆ ಕಣ್ಣೀರು ಎಂದಿದ್ದಾರೆ. ದೆಹಲಿಯಲ್ಲಿ ಪ್ರತಿಭಟನೆ ವೇಳೆ ಸಾವಿರಾರು ರೈತರ ಕೊಲೆಗಳನ್ನು ಮಾಡಿದ್ದೆ ಮೋದಿ ಸಾಧನೆ ಎಂದ ದೇವರಾಜ್ ಮಹಿಳೆಯರು ಹಾದಿ ತಪ್ಪುವ ಮಾತನಾಡಿದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಬೇಷರತ್ ಕ್ಷಮೆ ಕೇಳಬೇಕು ಎಂದರು.
ಇದೇ ಪತ್ರಿಕಾಗೋಷ್ಠಿಯಲ್ಲಿ ಮತನಾಡಿದ ಸಿ.ಪಿ.ಐ ಮುಖಂಡ ರೇಣುಕಾರಾಧ್ಯ ತೀಕ್ಷ್ಣವಾಗಿ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು. ಮೋದಿ ವಿರೋಧಿಗಳನ್ನೆಲ್ಲಾ ಜೈಲಿಗೆ ಹಾಕುವ, ಕಂಪನಿಗಳ ಮೇಲೆ ರೇಡ್ ಮಾಡಿಸಿ ಕಪ್ಪ ಕಾಣಿಕೆಯನ್ನು ಪಡೆಯುವಂತ ನಯವಂಚಕತನ ಹೊಂದಿರುವ ನರೇಂದ್ರ ಮೋದಿಯದ್ದು ಪಾಕಿಸ್ತಾನ ರಾಜಕಾರಣಿಗಳ ಮನಸ್ಥಿತಿ ಎಂದು ಗಂಭೀರವಾಗಿ ಆರೋಪಿಸಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g