April 29, 2024

MALNAD TV

HEART OF COFFEE CITY

14 ತಿಂಗಳ ಪೋರಿಗೆ ಕಲಾಂ ವರ್ಡ್ ರೆಕಾರ್ಡ್ ಪ್ರಶಸ್ತಿ

1 min read

ಚಿಕ್ಕಮಗಳೂರು: ಈ 14 ತಿಂಗಳ ಪೋರಿಯ ಸಾಧನೆ ಕಂಡರೆ ಖಂಡಿತಾ ನೀವು ಮೂಗಿನ ಮೇಲೆ ಬೆರಳಿಟ್ಟು ಯೋಚಿಸುತ್ತೀರ ಏನಿದು ಒಂದು ವರ್ಷ ಎರಡು ತಿಂಗಳ ಮಗು ರೆಕಾರ್ಡ್ ಮಾಡಿದ್ಯಾ ಅಂತ ಕೇಳಿದ್ರೆ ! ನಿಮ್ಮ ಊಹೆ ಅಕ್ಷರಶಃ ಸತ್ಯ, ಮನಸ್ಮಿತಾ ಕಲಾಂ ವರ್ಲ್ಡ್ ರೆಕಾರ್ಡ್ಸ್ ಪ್ರಶಸ್ತಿ ಪಡೆದಿದ್ದು 500 ಪದಗಳು 336 ವಸ್ತುಗಳನ್ನು ಗುರುತಿಸಿದ ವಿಶ್ವದ ಮೊದಲ ಮಗು ಕನ್ನಡ ಮತ್ತು ಇಂಗ್ಲಿಷ್ ಅಕ್ಷರಮಾಲೆ, ಕರ್ನಾಟಕದ 8 ಜ್ಞಾನಪೀಠ ಪ್ರಶಸ್ತಿ ವಿಜೇತರು, ರಾಷ್ಟ್ರೀಯ ಪ್ರಾಣಿ, ಹಣ್ಣು, ಪಕ್ಷಿ, ಧ್ವಜ, ಹೂವು, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಸಂಖ್ಯೆಗಳು, 17 ಹಣ್ಣುಗಳು ಮತ್ತು 26 ತರಕಾರಿಗಳು, 25 ಪಕ್ಷಿಗಳು, 27 ಪ್ರಾಣಿಗಳು, 12 ಕೀಟಗಳು ಮತ್ತು 5 ಸರೀಸೃಪಗಳು, 10 ಸ್ವಾತಂತ್ರ್ಯ ಹೋರಾಟಗಾರರು, 11 ಸಮುದ್ರ ಜೀವಿಗಳು, 7 ದೇಶದ ಧ್ವಜಗಳು, ಭಾರತದಲ್ಲಿನ 7 ಐತಿಹಾಸಿಕ ಸ್ಥಳ, 10 ಹೂವುಗಳು, 7 ಭಾರತೀಯ ಕರೆನ್ಸಿ, 10 ಬಣ್ಣಗಳು ಮತ್ತು 14 ಆಕಾರಗಳು, 7 ಆಟಿಕೆಗಳ ಹೆಸರುಗಳು, 11 ಸಸ್ಯ ಮತ್ತು 5 ಎಲೆಗಳು, 19 ದೇಹದ ಭಾಗಗಳು 7 ವಿಜ್ಞಾನಿಗಳು, 336 ವಿವಿಧ ವಸ್ತುಗಳು ಇದು ಕಂಪ್ಯೂಟರ್ ಚಿಪ್ ನಲ್ಲಿ ದಾಖಲಾಗಿದ್ದಲ್ಲ,, ಬದಲಾಗಿ ಪುಟ್ಟ14 ತಿಂಗಳ ಕೂಸಿನ ಬಾಯಿಂದ ಬಂದಿರುವ ಜ್ಞಾನ ಭಂಡಾರದ ಮಾಹಿತಿ. ದಾಖಲೆ ಸೃಷ್ಟಿಸಿರುವ ಈ ಬಾಲೆಯ ಹೆಸರು ಮನಸ್ಮಿತಾ ಕಂಬಿ ಹಳ್ಳಿಯ ಧನಲಕ್ಷ್ಮಿ ಹುಲಿಯಪ್ಪ ಮಗಳು. ಈ ಅಸಾಧಾರಣ ಗ್ರಹಣ ಶಕ್ತಿಯ ಮಗುವಿಗೆ ಚೆನ್ನೈ ನ ಅಬ್ದುಲ್ ಕಲಾಂ ವರ್ಡ್ ರೆಕಾರ್ಡ್ ಸಂಸ್ಥೆ ವಿಶ್ವ ದಾಖಲೆ ಗೌರವ ಪ್ರಶಸ್ತಿ ನೀಡಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!