April 28, 2024

MALNAD TV

HEART OF COFFEE CITY

WHC 2023: ಸಂಘಟನಾ ಸಮಿತಿಯಿಂದ ಬ್ಯಾಂಕಾಕ್ ವರ್ಲ್ಡ್ ಹಿಂದು ಕಾಂಗ್ರೆಸ್ ಕುರಿತು ಸಂವಾದ

1 min read

 

WHC 2023: ಸಂಘಟನಾ ಸಮಿತಿಯಿಂದ ಬ್ಯಾಂಕಾಕ್ ವರ್ಲ್ಡ್ ಹಿಂದು ಕಾಂಗ್ರೆಸ್ ಕುರಿತು ಸಂವಾದ.

ಬ್ಯಾಂಕಾಕ್, ಥೈಲ್ಯಾಂಡ್ – ಅಕ್ಟೋಬರ್ 20, 2023:

ವಿಶ್ವ ಹಿಂದೂ ಕಾಂಗ್ರೆಸ್ 2023 (WHC 2023) ಯ ಸಂಘಟನಾ ಸಮಿತಿಯು ಅಕ್ಟೋಬರ್ 18, 2023 ರಂದು ಥಾಯ್ ಚೇಂಬರ್ ಆಫ್ ಕಾಮರ್ಸ್ ಜೊತೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಮಹತ್ತರ ಮೈಲುಗಲ್ಲು ಸಾಧಿಸಿದೆ.ವಿಶ್ವ ಹಿಂದೂ ಕಾಂಗ್ರೆಸ್ 2023, ನವೆಂಬರ್ 24 ರಿಂದ 26, 2023 ರವರೆಗೆ ಬ್ಯಾಂಕಾಕ್‌ನ ಹೃದಯಭಾಗದಲ್ಲಿ ನಡೆಯಲಿದೆ.

ಈ ವರ್ಲ್ಡ್ ಹಿಂದೂ ಕಾಂಗ್ರೆಸ್ ನಲ್ಲಿ 60 ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಒಂದೆಡೆ ಸೇರಿ ನೆಟ್‌ವರ್ಕ್ ಮಾಡಲು, ಹೊಸ ಹೊಸ ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಳಲು, ಹೊಸ ಬ್ಯುಸಿನೆಸ್ ಅವಕಾಶ, ಒಪ್ಪಂದಗಳನ್ನು ಮಾಡಿಕೊಳ್ಳಲು ದೊಡ್ಡ ವೇದಿಕೆಯನ್ನು ಒದಗಿಸಲಿದೆ.

ಇಂದು ನಡೆದ ಇಂದು ನಡೆದ ಸಂವಾದ ಇಡೀ ಹಿಂದೂ ವರ್ಲ್ಡ್ ಹಿಂದು ಕಾಂಗ್ರೆಸ್ ಅಧಿವೇಶನದ ಗುರಿ ಉದ್ದೇಶ ಹಾಗೂ ಅದರ ಸಾಧ್ಯತೆಗಳ ಬಗ್ಗೆ ಅರಿತುಕೊಳ್ಳಲು ಸಹಾಯ ಮಾಡಿತು.

ಈವೆಂಟ್‌ನ ಕಾರ್ಯಸೂಚಿಯು ಏಳು ಸಮಾನಾಂತರ ವಿಷಯಾಧಾರಿತ ಸಮ್ಮೇಳನಗಳನ್ನು ಒಳಗೊಂಡಿದೆ.
1. ಆರ್ಥಿಕತೆ
2. ಶಿಕ್ಷಣ
3. ಮಾಧ್ಯಮ
4. ರಾಜಕೀಯ
5. ಮಹಿಳೆಯರು
6. ಯುವಕರು
7. ಹಿಂದೂ ಸಂಘಟನೆಗಳು.

ಹೀಗೆ ಏಳು ವಿವಿಧ ವಿಭಾಗಗಳಲ್ಲಿ ಸುದೀರ್ಘವಾದಂತ ಚರ್ಚೆ ಮತ್ತು ಹೊಸ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಯಲಿದೆ. ಈ 7 ಸಮ್ಮೇಳನಗಳು ಹಿಂದೂ ವ್ಯಾಪಾರ, ಸಂಸ್ಕೃತಿ, ಪರಂಪರೆ ಮತ್ತು ಪ್ರಪಂಚದ ಮೇಲೆ ಅದರ ಪ್ರಭಾವದ ಬಹುಮುಖಿ ಆಯಾಮಗಳ ಚರ್ಚೆಗೆ ಅವಕಾಶ ನೀಡಲಿವೆ.

ಸ್ವಾಮಿ ವಿಗ್ಯಾನಾನಂದಜಿ ಈ ಸಂದರ್ಭದಲ್ಲಿ ಎಲ್ಲರನ್ನೂ ಉದ್ದೇಶಿಸಿ ಮಾತನಾಡಿದರು. ಆರ್ಥಿಕತೆ, ಶಿಕ್ಷಣ ಮತ್ತು ಅಕಾಡೆಮಿ, ಮಾಧ್ಯಮ ಮತ್ತು ರಾಜಕೀಯ ಸೇರಿದಂತೆ ಶಕ್ತಿ ಮತ್ತು ಪ್ರಭಾವ ಇರುವ ಪ್ರಮುಖ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಹಿಂದೂಗಳನ್ನು ಒಗ್ಗೂಡಿಸುವ ಜಾಗತಿಕ ವೇದಿಕೆಯ ಅಗತ್ಯವನ್ನು ಅವರು ಒತ್ತಿ ಹೇಳಿದರು.
‘ವರ್ಲ್ಡ್ ಹಿಂದು ಕಾಂಗ್ರೆಸ್ ಇದು ಕೇವಲ ಒಂದು ಸಮಾವೇಶ ಮಾತ್ರ ಅಲ್ಲ ಬದಲಿಗೆ ಬದಲಿಗೆ ಇಡೀ ಜಗತ್ತಿನಲ್ಲಿರುವ ಎಲ್ಲಾ ಹಿಂದೂಗಳ ಪುನರುತ್ಥಾನಕ್ಕೆ ಒಂದು ಅತಿ ದೊಡ್ಡ ಅವಕಾಶ ಮತ್ತು ವೇದಿಕೆಯಾಗಿದೆ.
ಇಲ್ಲಿ ಹಿಂದೂ ವೃತ್ತಿಪರರು, ಉದ್ಯಮಿಗಳು, ಚಿಂತಕರು ಮತ್ತು ವಿವಿಧ ಕ್ಷೇತ್ರಗಳ ನಾಯಕರುಅರ್ಥಪೂರ್ಣ ಚರ್ಚೆಗಳಲ್ಲಿ ತೊಡಗಿಸಿಕೊಳ್ಳಲು, ಒಳನೋಟಗಳನ್ನು ಹಂಚಿಕೊಳ್ಳಲು ಮತ್ತು ಸಂಪರ್ಕಗಳನ್ನು ಬೆಳೆಸಲು ಸಹಾಯವಾಗಲಿದೆ. ಹಿಂದುಗಳು ಜಗತ್ತಿನಲ್ಲಿ ಮತ್ತೆ ತಮ್ಮ ಗೌರವವನ್ನು ಪಡೆಯಬೇಕು ಎನ್ನುವುದಾದರೆ ಪ್ರಭಾವ ಇರುವ ಪ್ರಮುಖ ಕ್ಷೇತ್ರಗಳಲ್ಲಿ ತುಂಬಾ ವ್ಯವಸ್ಥಿತವಾಗಿ ಕೆಲಸ ಮಾಡಲೇಬೇಕು ಎಂದು ಹೇಳಿದರು.

ಭಾರತದಿಂದ ಬಂದ ದೀಪಾ ಸಿಂಗ್ WHC 2023 ವರ್ಲ್ಡ್ ಹಿಂದು ಕಾಂಗ್ರೆಸ್ ಹಿಂದುಗಳಿಗೆ ಉತ್ತಮ ವೇದಿಕೆಯನ್ನು ಒದಗಿಸುವುದಲ್ಲದೆ ಧರ್ಮ ರಕ್ಷಣೆಗಾಗಿ ನಾವೆಲ್ಲರೂ ಕೂಡ ಒಂದಾಗಿ ಸೇರುವ ಮಹತ್ವದ ಬಗ್ಗೆ ಒತ್ತಿ ಹೇಳಿದರು.

ಸಂಘಟನಾ ಸಮಿತಿಯ ಕಾರ್ಯದರ್ಶಿ ರಾಜು ಮನ್ವಾನಿ ಅವರು WHC 2023 ರ ಸಮಗ್ರ ಚಿತ್ರಣ ನೀಡಿದರು. ಏಳು ಸಮಾನಾಂತರ ಸಮ್ಮೇಳನಗಳನ್ನು ಒಳಗೊಂಡಿರುವ ಈ ಚತುರ್ವಾರ್ಷಿಕ ಸಮ್ಮೇಳನವು ವಿವಿಧ ಕ್ಷೇತ್ರಗಳಲ್ಲಿ ಜಾಗತಿಕ ಹಿಂದೂ ಸಮುದಾಯದ ಮೌಲ್ಯಗಳು, ಸೃಜನಶೀಲತೆ ಮತ್ತು ಉದ್ಯಮಶೀಲತೆಯ ಹೊಸ ಸಾಧ್ಯತೆಗಳಿಗೆ ವೇದಿಕೆ ನೀಡಲಿದೆ ಎಂದರು.

WHC 2023 ರ ಸಂಘಟನಾ ಸಮಿತಿಯ ಅಧ್ಯಕ್ಷರಾದ ಸುಶೀಲ್ ಕುಮಾರ್ ಸರಾಫ್ ಅವರು ವಿಶ್ವಾದ್ಯಂತ ಸಹ ಹಿಂದೂಗಳಿಗೆ ಆತ್ಮೀಯ ಆಹ್ವಾನವನ್ನು ನೀಡಿದರು.
ಎಲ್ಲಾ ಹಿಂದೂಗಳು ಈ ಅಧಿವೇಶನದಲ್ಲಿ ಭಾಗವಹಿಸುವ ಮೂಲಕ ಇಲ್ಲಿ ಸಿಗುವ ಹೊಸ ವ್ಯಾಪಾರಿ ಸಾಧ್ಯತೆಗಳನ್ನು ಹಾಗೂ ಹೊಸ ವ್ಯಾಪಾರದ ಹೊಳವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು

WHC 2023 ರ ಸಂಘಟನಾ ಸಮಿತಿಯ ಖಜಾಂಚಿ ಪ್ರದೀಪ್ ಸಿಂಘಾಲ್ ಅವರು ಧನ್ಯವಾದ ಅರ್ಪಿಸಿದರು.

ವಿಶ್ವ ಹಿಂದೂ ಕಾಂಗ್ರೆಸ್ 2023 ರ ಕುರಿತು ಹೆಚ್ಚಿನ ಮಾಹಿತಿಗಾಗಿ www.worldhinducongress.org ನಲ್ಲಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

WHC 2023 ಗಾಗಿ ನೋಂದಣಿ ಈಗ ಅಂತಿಮ ಹಂತಕ್ಕೆ ಬಂದಿದ್ದು, ನಿಮ್ಮ ಹೆಸರು ನೋಂದಾಯಿಸಲು ಈ ಕೆಳಗಿನ ಲಿಂಕ್ ಬಳಸಬಹುದು.
https://bit.ly/WHC2023Reg

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!