May 12, 2024

MALNAD TV

HEART OF COFFEE CITY

ಜಿಲ್ಲಾ ಪಂಚಾಯಿತಿ ವತಿಯಿಂದ ಜಿಲ್ಲಾಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ

1 min read

ಚಿಕ್ಕಮಗಳೂರು: ಜಿಲ್ಲಾ ಪಂಚಾಯಿತಿಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಡಿಯಲ್ಲಿ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ-2023 ಕಾರ್ಯಕ್ರಮವನ್ನು ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಜಿಲ್ಲೆಯ 9 ತಾಲೂಕುಗಳಿಂದ ವಿವಿಧ ಇಲಾಖೆ ಅಧಿಕಾರಿಗಳು ಹಾಗು ಸಿಬ್ಬಂದಿಗಳು ಭಾಗಿಯಾಗಿದ್ದರು. ಕ್ರಿಕೆಟ್, ಕಬ್ಬಡಿ,ಮಹಿಳೆಯರಿಗೆ ಚೆಸ್ ಸೇರಿದಂತೆ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.
ಜಿಲ್ಲಾಮಟ್ಟದ ಕ್ರೀಡಾಕೂಟವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಕಾಧಿಕಾರಿ ಹೆಚ್ ಆರ್ ಗೋಪಾಲಕೃಷ್ಣ ಅವರು, ಇದು ಮಾತನಾಡುವ ಸಮಯವಲ್ಲ ಆಟ ಆಡುವ ಸಮಯ ದೇಶದಲ್ಲಿ ಕ್ರಿಕೆಟ್ ಎಷ್ಟು ಮಾನ್ಯತೆಯನ್ನು ಪಡೆದಿದೆ ಎಂದು ನಿಮಗೆ ಗೊತ್ತಿದೆ. ಹೆಸರಾಂತ ಕ್ರಿಕೆಟ್ ಆಟಗಾರರ ರೀತಿಯಲ್ಲಿ ಉತ್ತಮ ಆಟ ನಮ್ಮ ಈ ಜಿಲ್ಲಾ ಮೈದಾನದಲ್ಲೂ ಮೂಡಿ ಬಂದರೆ ಅದು ಎಲ್ಲಾ ಇಲಾಖೆಗೂ ಸ್ಪೂರ್ತಿದಾಯಕ ಎಂದು ತಿಳಿಸಿದರು.


ಏನೇ ಕೆಲಸದ ಒತ್ತಡವಿದ್ದರು, ಯಾವುದೇ ಕೆಲಸದ ಕಾರ್ಯ ವೈಖರಿ ಇರಬಹುದು ಅದನ್ನೆಲ್ಲ ಬದಿಗಿಟ್ಟು, ಮರೆತು ಎರಡು ದಿನಗಳ ಕಾಲ ಈ ಕ್ರೀಡಾಕೂಟವನ್ನು ಸಂಭ್ರಮಿಸಿ ಎಂದ ಅವರು ಎಲ್ಲಾ ಅಧಿಕಾರಿಗಳ ಬಾಲ್ಯವನ್ನ ಒಮ್ಮೆ ಈ ಕ್ರೀಡಾಕೂಟ ನೆನಪಿಸುತ್ತದೆ. ಕ್ರೀಡಾ ಸ್ಪೂರ್ತಿ, ಕ್ರೀಡಾ ಮನೋಭಾವ ಎಲ್ಲರಲ್ಲೂ ಇರಲಿ. ಉತ್ತಮ ಪ್ರದರ್ಶನ ನೀಡಿದರೆ ಗೆಲುವು ನಿಮ್ಮದೇ ಎಂದು ಹೇಳಿದರು.
ಈ ಬಾರಿ ಜಿಲ್ಲೆಯ 9 ತಾಲೂಕುಗಳಿಂದ ಆಗಮಿಸಿದ ತಂಡಗಳು ನಡೆದ ಪಥಸಂಚಲನದಲ್ಲಿ ಎನ್.ಆರ್.ಪುರ ತಾಲೂಕಿನ ತಂಡ ಉತ್ತಮವಾಗಿ ಪ್ರದರ್ಶನ ನೀಡಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!