May 5, 2024

MALNAD TV

HEART OF COFFEE CITY

ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಕಳ್ಳತನ..! ಬ್ಯಾಗ್’ನಲ್ಲಿದ್ದ ಫೈಲ್, ಡಾಕ್ಯುಮೆಂಟ್, 15 ಸಾವಿರ ಹಣ ನಾಪತ್ತೆ..!

1 min read

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಮತ್ತು ಇಂಧನ ಸಚಿವ ಕೆ.ಜೆ.ಜಾರ್ಜ್ ಕಚೇರಿಯಲ್ಲಿ ಆಪ್ತ ಸಹಾಯಕನ ಬ್ಯಾಗ್ ಕಳ್ಳತನವಾಗಿರುವ ಘಟನೆ ಚಿಕ್ಕಮಗಳೂರು ನಗರದ ಪ್ರವಾಸಿ ಮಂದಿರದಲ್ಲಿ ನಡೆದಿದೆ.

ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಕಳ್ಳತನವಾಗಿದ್ದು, ಸಚಿವ ಕೆ.ಜೆ ಜಾರ್ಜ್ ಖಾಸಗಿ ಆಪ್ತ ಸಹಾಯಕನ ಬ್ಯಾಗ್ ಕಳವಾಗಿದೆ. ಆಪ್ತ ಸಹಾಯಕ ಮೋಗಣ್ಣ ಅವರ ಬ್ಯಾಗ್ ನಲ್ಲಿ ಇದ್ದ ಫೈಲ್, ಖಾಸಗಿ ಡಾಕ್ಯುಮೆಂಟ್, 15 ಸಾವಿರ ಹಣ ಕಳ್ಳತನವಾಗಿದೆ. ಕಚೇರಿಯಲ್ಲಿ ಬ್ಯಾಗ್ ಇಟ್ಟು ತೆರಳಿದ್ದಾಗ ಕಳ್ಳರ ಕೈಚಳಕ ತೋರಿಸಿದ್ದಾರೆ. ಚಿಕ್ಕಮಗಳೂರು ನಗರದ ಪ್ರವಾಸಿ ಮಂದಿರದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಇನ್ನೂ ಪ್ರವಾಸಿ ಮಂದಿರದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾಗಳು ಕೆಟ್ಟು ಹೋಗಿದ್ದು, ಈ ಸಂದರ್ಭದಲ್ಲಿ ಕಳ್ಳರು ಕೈಚಳಕ ತೋರಿಸಿದ್ದಾರೆ. ಈ ಸಂಬಂಧ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲು ದಾಖಲಾಗಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!