May 11, 2024

MALNAD TV

HEART OF COFFEE CITY

ಜಿಂಕೆ-ಚಿರತೆ ಚರ್ಮ ಪತ್ತೆ ಪ್ರಕರಣ; ಶಾಖಾದ್ರಿ ವಿಚಾರಣೆಗೆ ಗೈರು

1 min read

ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕಿನ ದತ್ತಪೀಠದ ಶಾಖಾದ್ರಿ ಗೌಸ್ ಮೊಹಿನುದ್ಧೀನ್ ಶಾಖಾದ್ರಿ ಅವರ ವಂಶಸ್ಥರು ಹುಲಿ ಚರ್ಮದ ಮೇಲೆ ಕೂತಿರೋ ಫೋಟೋ ವೈರಲ್ ಆಗ್ತಿದ್ದಂತೆ ಚಿಕ್ಕಮಗಳೂರು ಅರಣ್ಯ ಅಧಿಕಾರಿಗಳು ಶಾಖಾದ್ರಿ ಅವರ ಮನೆ ಮೇಲೆ ದಾಳಿ ಮಾಡಿ, ಚಿರತೆ-ಚಿಂಕೆ ಚರ್ಮವನ್ನ ವಶಪಡಿಸಿಕೊಂಡಿದ್ದರು.
ಅರಣ್ಯ ಅಧಿಕಾರಿಗಳು ಅವರ ಮೇಲೆ ಪ್ರಕರಣ ದಾಖಲಿಸಿ ಜಿಂಕೆ-ಚಿರತೆ ಚರ್ಮದ ಬಗ್ಗೆ ದಾಖಲೆ ಸಹಿತ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಅವರು ಮನೆಯಲ್ಲಿ ಇರದ ಕಾರಣ ಅವರ ಮನೆ ಬಾಗಿಲಿಗೆ ನೋಟೀಸ್ ಅಂಟಿಸಿ ನವೆಂಬರ್ 2ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.
ಆದರೆ, ಶಾಖಾದ್ರಿಯವರು ವಿಚಾರಣೆಗೆ ಹಾಜರಾಗಿರಲಿಲ್ಲ. ಅವರ ಮನೆ ತಪಾಸಣೆ ಮಾಡುವ ವೇಳೆಯೂ ಮನೆ ಕೀಯನ್ನ ಬೇರೆಯವರ ಕೈನಲ್ಲಿ ಕಳಿಸಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು 10 ಗಂಟೆ ಕಾದು ಮನೆ ತಪಾಸಣೆ ನಡೆಸಿದ್ದರು. ಇದೀಗ, ವಿಚಾರಣೆಗೂ ಹಾಜರಾಗದ ಶಾಖಾದ್ರಿ ಆರೋಗ್ಯ ಸರಿ ಇಲ್ಲ ಅಂತ ವೈದ್ಯರ ಸೂಚನೆ ಮೇರೆಗೆ ಮೂರು ವಾರಗಳ ಬೆಡ್ ರೆಸ್ಟ್ ಬೇಕು ಅಂತ ವಿಚಾರಣೆಗೆ ಗೈರಾಗಿದ್ದಾರೆ.
ಶಾಖಾದ್ರಿ ಕಡೆಯವರು ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದಾರೆ. ಆದ್ರೆ, ಎಸ್.ಡಿ.ಪಿ.ಐ. ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದು, ಅರ್ಚಕರ ಬಂಧನ, ಶಾಖಾದ್ರಿ ಮೇಲೆ ಕೇಸ್ ಹಾಕಿದ್ದು ಎಷ್ಟು ಸರಿ. ಬಡವರಿಗೆ ಮಾತ್ರ ಕಾನೂನು ಇರೋದಾ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಹುಲಿ ಉಗುರು-ಚರ್ಮದ ಸುದ್ದಿ ಜೋರಾಗ್ತಿದ್ದಂತೆ ಅರಣ್ಯ ಇಲಾಖೆಯವರು ಇಬ್ಬರು ಅರ್ಚಕರನ್ನ ಬಂಧಿಸಿದ್ದರು. ಅರಣ್ಯ ಇಲಾಖೆ ಅಧಿಕಾರಿಯನ್ನೇ ವಿಚಾರಣೆಗೆ ಒಳಪಡಿಸಿದ್ದರು. ಅವಧೂತ ವಿನಯ್ ಗುರೂಜಿಯನ್ನೂ ಬಿಡಲಿಲ್ಲ. ಈ ಮಧ್ಯೆ ಶಾಖಾದ್ರಿ ಹುಲಿ ಚರ್ಮದ ಮೇಲೆ ಕೂತ ಫೋಟೋ ವೈರಲ್ ಆಗುತ್ತಿದ್ದಂತೆ ಶಾಖಾದ್ರಿ ಮನೆ ಮೇಲೂ ದಾಳಿ ಮಾಡಿದ್ದರು. ಅಲ್ಲಿ ಹುಲಿ ಚರ್ಮ ಸಿಕ್ಕಿರಲಿಲ್ಲ. ಆದರೆ, ಈಗ ಶಾಖಾದ್ರಿ ಕಡೆಯವರು ಆ ಹುಲಿ ಚರ್ಮ ಅರಣ್ಯ ಇಲಾಖೆಯ ಬಳಿಯೇ ಇದೆ ಎಂದಿದ್ದಾರೆ.
ಶಾಖಾದ್ರಿ ಮನೆ ಕಳ್ಳತನವಾಗಿತ್ತು. ಆಗ ಪೊಲೀಸರು ಕಳ್ಳರನ್ನ ಹಿಡಿದಾಗ ಆ ಹುಲಿ ಚರ್ಮವನ್ನ ಪೊಲೀಸರು ಅರಣ್ಯ ಇಲಾಖೆಯ ಸುಪರ್ದಿಗೆ ನೀಡಿದ್ದರು ಎಂದಿದ್ದಾರೆ. ಆದರೆ, ಈಗ ಜಿಂಕೆ-ಹುಲಿ ಚರ್ಮದ ಬಗ್ಗೆ ನೋಟೀಸ್ ನೀಡಿರುವ ಅರಣ್ಯ ಇಲಾಖೆಯವ್ರು ಶಾಖಾದ್ರಿ ಹೆಸರನ್ನೇ ಹಾಕದೆ ನಿಮ್ಮ ಮನೆ ಎಂದು ಹಾಕಿರೋದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಆದರೆ, ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿರೋ ಎಸ್.ಡಿ.ಪಿ.ಐ. ಕೆಲವರಿಗೆ ಕಾನೂನಿನ ಅರಿವು ಕಡಿಮೆ ಇದ್ದು ಮನೆಯಲ್ಲೇ ಇಟ್ಟುಕೊಂಡಿದ್ದಾರೆ. ಅರಣ್ಯ ಇಲಾಖೆ ವಸ್ತುಗಳನ್ನ ಸೀಜ್ ಮಾಡಬಹುದಿತ್ತು. ಬಂಧನ ಸರಿಯಲ್ಲ. ಇಲ್ಲವಾದರೆ, ಅರಣ್ಯ ಇಲಾಖೆಗೆ ಒಪ್ಪಿಸಲು ಸಮಯ ನೀಡಬೇಕಿತ್ತು ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!