May 10, 2024

MALNAD TV

HEART OF COFFEE CITY

ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಗಣ್ಯರ ಸಮಾಗಮ-ಸಾಂಸ್ಕೃತಿಕ ಮೆರುಗು ನೀಡಿದ ಮಕ್ಕಳ ಮನರಂಜನಾ ಮೋಡಿ

1 min read

 

 

ಚಿಕ್ಕಮಗಳೂರು:- ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮೂಡಿಗೆರೆ ಇದರ ವಾರ್ಷಿಕೋತ್ಸವ ಕಾರ್ಯಕ್ರಮವು ಇಂದು ವಿಜೃಂಭಣೆಯಿಂದ ನೆರವೇರಿತು.ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎಂ ಟಿ ಕುಮಾರಸ್ವಾಮಿ ಎಲ್ಲರಿಗೂ ಶುಭಾಶಯಗಳನ್ನು ಕೊರಿ ತನ್ನ ಅನಾರೋಗ್ಯದ ಹಿನ್ನೆಲೆ ತುರ್ತಾಗಿ ಹೊರಟರೂ ಈ ಅಲ್ಪ ಸಮಯದಲ್ಲಿ ಶಾಲೆಯ ಸರ್ವೊತೋಮುಕ ಅಭಿವೃದ್ಧಿ ದೃಷ್ಟಿಯಿಂದ ನಾನು ಸದಾ ನಿಮ್ಮೊಂದಿಗೆ ಇರುತ್ತೇನೆ ಅದು ಅಲ್ಲದೆ ಈ ಶಾಲೆಯನ್ನು ಮಾದರಿ ಶಾಲೆಯ ಪಟ್ಟಿಯಲ್ಲಿ ಸೇರಿಸುವುದೇ ನನ್ನ ಕನಸಾಗಿತ್ತು ಅದು ಸಫಲವಾಗುತ್ತಿದ್ದು ಇನ್ನೂ ಸಾಕಷ್ಟು ಅಭಿವೃದ್ಧಿಯಾಗಬೇಕು ಆ ನಿಟ್ಟಿನಲ್ಲಿ ಯೋಚಿಸಲಾಗಿದೆ ಎಂದರು.

ಕ್ಷೇತ್ರದ ಶಿಕ್ಷಣ ಅಧಿಕಾರಿ ಹೇಮಂತ್ ರಾಜ್ ಮಾತನಾಡಿ 135 ವರ್ಷಗಳನ್ನು ದಾಟಿದ ಈ ಶಾಲೆಯನ್ನು ಕೇವಲ ಮಾತಿನಿಂದ ವರ್ಣಿಸಿದರೇ ಸಾಲುವುದಿಲ್ಲ ಇಲ್ಲಿ ಸಾಕಷ್ಟು ಜನರು ಇಲ್ಲಿನ ಗಣ್ಯ ವ್ಯಕ್ತಿಗಳು ಎನಿಸಿಕೊಂಡವರು ಇದ್ದು ಇದು ಈ ಶಾಲೆಯ ಕೊಡುಗೆ ಎಂದರು. ಈ ಒಂದು ಕಾರ್ಯಕ್ರಮದಲ್ಲಿ ಇಲ್ಲಿನ ಹಿರಿಯ ವಿದ್ಯಾರ್ಥಿಗಳ ಸಾಧನೆ ಕಣ್ಣಾರೆ ನೋಡುವ ಭಾಗ್ಯ ನಮಗೆ ನಿಮಗೆ ಸಿಕ್ಕಿದೆ ನಮಗೆ ಈ ಶಾಲೆಯನ್ನು ಇನ್ನಷ್ಟು ಅಭಿವೃದ್ಧಿ ಮಾಡುವ ದಿಶೆಯಲ್ಲಿ ಇನ್ನೂ ಹೆಚ್ಚುವರಿ ಶಾಲಾ ಕಟ್ಟಡಕ್ಕೆ ಅನುದಾನ ಬಂದಿದೆ ಹಾಗೂ ಆಂಗ್ಲ ಶಿಕ್ಷಕರ ಭರ್ತಿ ಮಾಡಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಮಾತನಾಡಿ ಸರ್ಕಾರಿ ಶಾಲೆಗಳ ಸಾಧಕರ ಸಾಲಿನಲ್ಲಿ ಇಲ್ಲಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನಿಲ್ಲುವ ಅದ್ಭುತ ಪ್ರಯತ್ನಕ್ಕೆ ಇಂದಿನ ಕಾರ್ಯಕ್ರಮ ಸಾಕ್ಷಿಯಾಗಿದೆ.

 

 

 

ಇಲ್ಲಿ ಇಂದು ನಡೆಯುತ್ತಿರುವ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಇತರೇ ಖಾಸಗಿ ಶಾಲೆಗೆ ಟಕ್ಕರ್ ಕೊಡುತ್ತಿದೆ ಮುಂದಿನ ದಿನಗಳಲ್ಲಿ ಇಂತಹ ವಿಭಿನ್ನವಾದ ಅನೇಕ ಕಾರ್ಯಕ್ರಮಗಳು ನಡೇಯಬೇಕಂದರೆ ಪೋಷಕರು ಹಾಗೂ ಇಲ್ಲಿನ ಜವಾಬ್ದಾರಿಯುತ ನಾಗರಿಕರು ಪೋಷಕರು ಹಾಗೂ ನಾವುಗಳು ನಿಮ್ಮ ಬೆನ್ನಲ್ಲೇ ಇರುತ್ತೇವೆ ಹಾಗೂ ಸರ್ಕಾರದ ಹಾಗೂ ಶಾಸಕರ ಸ್ಥಳೀಯ ಅನುದಾನವನ್ನು ಹೆಚ್ಚಾಗಿ ಇಂತಹ ಶಾಲೆಗಳಿಗೆ ನೀಡಿದಲ್ಲಿ ಇನ್ನೂ ಸಹಕಾರಿಯಾಗುತ್ತದೆ ಈ ನಿಟ್ಟಿನಲ್ಲಿ ನಮ್ಮ ಸಹಕಾರ ಸದಾ ನಿಮ್ಮೊಂದಿಗೆ ಇರುತ್ತದೆ ಅಂದರು.
ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ವಿವಿಧ ನೃತ್ಯಗಳು ನಡೆದವು ಹಾಗೂ ವಿದ್ಯಾರ್ಥಿಗಳ ವಿವಿಧ ಚಟುವಟಿಕೆಗಳನ್ನು ಗುರುತಿಸಿ ಈ ಸಂದರ್ಭದಲ್ಲಿ ಬಹುಮಾನವನ್ನು ವೇದಿಕೆಯಲ್ಲಿದ್ದ ಗಣ್ಯರ ಮೂಲಕ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಯಿತು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!