May 9, 2024

MALNAD TV

HEART OF COFFEE CITY

ಸಿ.ಟಿ.ರವಿ ವಿರುದ್ದ ಹೆಚ್.ಡಿ. ತಮ್ಮಯ್ಯ ಬಂಡಾಯ

1 min read

ಚಿಕ್ಕಮಗಳೂರು : ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿ,ಜೆ.ಪಿ. ಅಭ್ಯರ್ಥಿಯಾಗಿ ಸ್ಪರ್ಧಿಸಲು 20 ವರ್ಷಗಳ ಬಳಿಕ ಸಿ.ಟಿ.ರವಿ ವಿರುದ್ಧ ಬಂಡಾಯದ ಕಹಳೆಯನ್ನು ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಡಿ. ತಮ್ಮಯ್ಯ ಮೊಳಗಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ‌ ವಿರುದ್ಧ ತೊಡೆ ತಟ್ಟಿರುವ ಹೆಚ್.ಡಿ. ತಮ್ಮಯ್ಯ, ನೂರಾರು ಕಾರ್ಯಕರ್ತರು ಮತ್ತು ಬೆಂಬಲಿಗರೊಂದಿಗೆ ಬಿ.ಜೆ.ಪಿ. ಕಛೇರಿ ಪಾಂಚಜನ್ಯಕ್ಕೆ ಬಂದು ನನಗೇ ಟಿಕೆಟ್ ನೀಡಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ ಬಳಿ ಮನವಿ ಮಾಡಿದ್ದಾರೆ. 15 ವರ್ಷಗಳಿಂದ ಬಿಜೆಪಿ ಕಾರ್ಯಕರ್ತರನಾಗಿರುವ ನಾನು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಕ್ಕೆ ನಾನು ಒಬ್ಬ ಆಕಾಂಕ್ಷಿಯೆಂದು ಮನವಿ ಪತ್ರ ನೀಡಿದರು. ಭಾರತೀಯ ಜನತಾ ಪಕ್ಷ ಕಳೆದ ವರ್ಷಗಳ ಹಿಂದೆ ಪಕ್ಷದ ಸಿದ್ಧಾಂತವನ್ನು ಒಪ್ಪಿ ಸೇರ್ಪಡೆಗೊಂಡ ಅವರು ನಂತರ ನಡೆದ 2007ರ ನಗರ ಸಭಾ ಚುನಾವಣೆಯಲ್ಲಿ ಮತ್ತು 2013 ರ ನಗರ ಸಭಾ ಚುನಾವಣೆಯಲ್ಲಿ ವಾರ್ಡ್‌ ನಂ 2ರಲ್ಲಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಚುನಾಯಿತನಾಗಿ 1 ವರ್ಷದ ಅವಧಿಗೆ ಅಧ್ಯಕ್ಷರಾಗಿ ನಗರದ ಜನರ ಸೇವೆ ಮಾಡಿದರು. 2007 ರಲ್ಲಿ ಪಕ್ಷದ ಮಹಾಶಕ್ತಿಕೇಂದ್ರದ (ಹಿಂದಿನ ಶಕ್ತಿ ಕೇಂದ್ರ)ಆಧ್ಯಕ್ಷನಾಗಿ 6 ವರ್ಷ, ಜಿಲ್ಲಾ ವಕ್ತಾರನಾಗಿ 3 ವರ್ಷ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ 1 ವರ್ಷ ಮತ್ತು ಈಗ ಕಳೆದ 3 ವರ್ಷಗಳಿಂದ ಜಿಲ್ಲಾ ಪ್ರಕೋಪಗಳ: ಸಂಯೋಜಕರಾಗಿ ಕೆಲಸ ಮಾಡಿರುತ್ತಾರೆ. ಪಕ್ಷದ ಸೇರ್ಪಡೆ ಮೊದಲು ಅನ್ಯ ಪಕ್ಷಗಳಿಂದ ನಗರ ಸಭೆಗೆ 2 ಬಾರಿ ನಗರಸಭಾ ಸದಸ್ಯನಾಗಿ, ಉಪಾಧ್ಯಕ್ಷರಾಗಿ ಪ್ರಭಾರಿ ಅಧ್ಯಕ್ಷನಾಗಿ ನಗರದ ಸೇವೆ ಮಾಡಿದರು.

ರಾಜಕಾರಣಕ್ಕೆ ಸೇರುವ ಮೊದಲು ಸಾಮಾಜಿಕ ಸೇವೆಯಲ್ಲಿ ಸಮಾಜ ಸೇವಕನಾಗಿ ಕನ್ನಡ ಪರ ಹೋರಾಟಗಾರನಾಗಿ ಸೇವೆ ಮಾಡಿರುತಾರೆ. 1988-89 ರಲ್ಲಿ ನಗರದ ಹಿರೇಮಗಳೂರು ಶ್ರೀ ದೇವಿ ಯುವಕ ಸಂಘದ ಅಧ್ಯಕ್ಷನಾಗಿ, 1992-93 ರಲ್ಲಿ ನಗರದ ಹನುಮಂತಪ್ಪ ಸರ್ಕಲ್‌ ಯುವಕ ಸಂಘದ ಅಧ್ಯಕ್ಷನಾಗಿ, ಡಾ|| ರಾಜಕುಮಾರ ಅಭಿಮಾನಿ ಸಂಘದ ಕಾರ್ಯದರ್ಶಿಯಾಗಿ ಮತ್ತು ಪ್ರಧಾನ ಕಾರ್ಯದಶಿಯಾಗಿ,  ನಗರದ ಆಜಾದ್‌ ಮೈದಾನದ ಸಾರ್ವಜನಿಕ ಗಣಪತಿ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಅಧ್ಯಕ್ಷರಾಗಿ ಹಲವು ವರ್ಷ ಸೇವೆ ಸಲ್ಲಿಸಿರುತ್ತೇನೆ.  ಹಿರೇಮಗಳೂರು: ಸುಪ್ರಸಿದ್ಧ ಶ್ರೀ ಕೋದಂಡರಾಮಚಂದ್ರಸ್ವಾಮಿ ದೇವಾಲಯಕ್ಕೆ 1998 ರಿಂದ 2013 ರವರೆಗೆ ದೇವಾಲಯ ಸಂಚಾಲಕರಾಗಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತೇನೆ, ನಗರ ಸಭಾ ಚುನಾಯಿತ ಸದಸ್ಯರ ಪರವಾಗಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯನಾಗಿ 5 ವರ್ಷಗಳ ಸೇವೆ ,  ಐ.ಡಿ.ಎಸ್.ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ S.D.M.C.ಅಧ್ಯಕ್ಷರಾಗಿ ಸದಸ್ಯರಾಗಿ ಸೇವೆ ಸಲ್ಲಿಸಿರುತ್ತೇನೆ. ದಿ|| ವಕೀಲ ದೃವನಾರಾಯಣ್‌ ನೇತೃತ್ವದ ನಾಗರೀಕ ಹೋರಾಟ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿರುತ್ತಾರೆ. ಲಿಂಗಾಯತ ಸಮುದಾಯದ ತಮ್ಮಯ್ಯ ನನಗೆ ಟಿಕೆಟ್ ನೀಡಬೇಕೆಂದು ಮನವಿ ಮಾಡಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!