May 12, 2024

MALNAD TV

HEART OF COFFEE CITY

ಗಾದೆ ಮೂಲಕ ಡಿಕೆಶಿ ವಿರುದ್ಧ ಮಾತಿನ ಚಾಟಿ ಬೀಸಿದ ಸಿ ಟಿ ರವಿ..!

1 min read

ಚಿಕ್ಕಮಗಳೂರು : ಡಿಕೆಶಿ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟ ಹಿನ್ನೆಲೆ ಹಾಲಿಂದು ಹಾಲಿಗೆ, ನೀರಿಂದು ನೀರಿಗೆ, ಉಪ್ಪು ತಿಂದೋನು ನೀರು ಕುಡೀಬೇಕು ಎಂದು ಹೆಸರೇಳದೆ ಗಾದೆ ಮೂಲಕ ಮಾಜಿ ಸಚಿವ ಸಿ.ಟಿ.ರವಿ ಡಿಕೆಶಿ ಕಾಲೆಳೆದಿದ್ದಾರೆ.

ಚಿಕ್ಕಮಗಳೂರಿನ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇವೆಲ್ಲಾ ಹಳೇ ಕಾಲದ ಗಾದೆ ಮಾತುಗಳು. ತಪ್ಪು ಮಾಡಿದವನಿಗೆ ಶಿಕ್ಷೆ ಆಗಬೇಕು, ಪ್ರಾಮಾಣಿಕರಿಗೆ ತೊಂದರೆ ಆಗಬಾರದು ಎಂದು ಡಿಕೆಶಿ ಹೆಸರೇಳದೆ ಗಾದೆ ಮೂಲಕ ಮಾತಿನ ಚಾಟಿಬೀಸಿದ್ದಾರೆ. ಯಾರಾದ್ರು ಅಕ್ರಮ ಮಾಡಿದ್ರೆ ಅದು ಇಂದಲ್ಲ ನಾಳೆ ಬಯಲಿಗೆ ಬರಲೆಬೇಕು ಎಂದರು.
ಊರಿಗೆ ಬಂದೋಳು ನೀರಿಗೆ ಬರಲ್ವಾ… ಕಳ್ಳನ ಹೆಂಡ್ತಿ ಯಾವತ್ತಿದ್ರು ಡ್ಯಾಶ್….ಡ್ಯಾಶ್…ಸುಮ್ನೆ…ಸುಮ್ನೆ ಗಾದೆ ಹುಟ್ಟುತ್ತಾ…. ತಲೆತಲಾಂತರದ ಸತ್ಯ ಇರುತ್ತೆ ಎಂದ ಅವರು ಸತ್ಯವನ್ನ ಹೂತಾಕಲು ಆಗಲ್ಲ, ಕೆಲ ಕಾಲ ಮುಚ್ಚಿಡಬಹುದು ಆದರೆ ಸತ್ಯ ಎಂದಾದರೂ ಹೊರಬರಲೆಬೇಕು. ಯಾರಾದ್ರು ತಪ್ಪುಮಾಡಿರೋರು ಇದ್ರೆ ಶಿಕ್ಷೆ ಆಗಬೇಕು.
ಕಾನೂನಿಗಿಂತ ಅತಿಥರಾದವರು ಯಾರಾದರೂ ಇದ್ದೀವಾ..? ನಾನು, ಸಿಎಂ, ಡಿಸಿಎಂ, ಪ್ರಧಾನಿ ಯಾರೂ ಕಾನೂನಿಗೆ ಅತಿಥರಲ್ಲ. ಯಾರಾದರು ನಾವು above the law ಅನ್ಕೊಂಡಿದ್ರೆ ಅದಕ್ಕೆ ಸಂವಿಧಾನ ಅವಕಾಶ ಕೂಡ ನೀಡಿಲ್ಲ ಎಂದು ತಿಳಿಸಿದರು.
ಅಂಬೇಡ್ಕರ್ ಕಾನೂನಿನ ದೃಷ್ಟಿಯಿಂದ ಎಲ್ಲರೂ ಸಮಾನರು ಎಂದಿದ್ದಾರೆ. ಇವರಿಗೆ ಕಾನೂನು ಅನ್ವಯ ಆಗಲ್ಲ, ಏನ್ ಮಾಡುದ್ರೆ ನಡೆಯುತ್ತೆ ಅನ್ನೋದು ನಮ್ಮ ದೇಶದಲ್ಲಿ ಇಲ್ಲ. ಯಾರು ತಪ್ಪು ಮಾಡಿದರೂ ಕಾನೂನಿನ ಪರದಿಯಲ್ಲಿ ಅವರಿಗೆ ಶಿಕ್ಷೆ ಆಗಲೇಬೇಕು. ಯಾರು ತಪ್ಪು ಮಾಡಿದ್ದಾರೆಂದು ಹೇಳುವ ಅಧಿಕಾರ ನನಗೆ ಇಲ್ಲ, ನ್ಯಾಯಾಲಯಕ್ಕೆ ಇದೆ. ನಾವು ಮಾಡಿರಬಹುದು ಅಂತ ಹೇಳಬಹುದು ಅಷ್ಟೇ, ಮಾಡಿದ್ದಾರೆ ಅಂತ ಹೇಳೋಕೆ ಆಗಲ್ಲ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!