May 13, 2024

MALNAD TV

HEART OF COFFEE CITY

ಗುಜರಾತಿನಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ : ಸಿ.ಟಿ.ರವಿ ಭವಿಷ್ಯ

1 min read

ಗುಜರಾತ್‍ನಲ್ಲಿ ಮತ್ತೆ ಬಿಜೆಪಿ ಅಧಿಕಾರ ಬರಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಗುಜರಾತ್ ಚುನಾವಣೆ ಹಿನ್ನೆಲೆ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ವರ್ಚುವಲ್ ಮೀಟಿಂಗ್ ಮಾಡಿ ನನ್ನ ಕಾರ್ಯಕ್ಷೇತ್ರದ ಎಲ್ಲಾ ಕಾರ್ಯಕರ್ತರಿಗೆ ಅಂತಿಮವಾಗಿ ಗಮನಿಸಬೇಕಾದ ಎಲ್ಲಾ ವಿಚಾರಗಳನ್ನು ಹೇಳಿದ್ದೇನೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಹಿಂದಿನ ಸ್ಥಾನಗಳಿಗಿಂತ ಹೆಚ್ಚಿನ ಸ್ಥಾನ ಪಡೆದುಕೊಳ್ಳಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಬಿಜೆಪಿ ಸರ್ಕಾರ ಗುಜರಾತ್‍ನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದೆ. ಅಲ್ಲದೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಲೆ ಅಲ್ಲಿ ವ್ಯಾಪಕವಾಗಿದೆ. ಬಿಜೆಪಿ ಸರಕಾರದ ನಾಮ್ ಮತ್ತು ಕಾಮ್ ಇವೆರಡರ ಆಧಾರದಲ್ಲಿ ಜನರು ಬಿಜೆಪಿಗೆ ಮತ ನೀಡುತ್ತಾರೆ ಎಂದರು. ಒಡೆದು ಆಳುವ ರಾಜಕಾರಣ ಮಾಡುವವರನ್ನು ಜನ ಸಹಿಸುವುದಿಲ್ಲ. ರಾವಣ ಯಾರು, ರಾಮ ಯಾರು ಎಂಬುದು ಗುಜರಾತ್ ಫಲಿತಾಂಶ ನಿರ್ಣಯಿಸುತ್ತದೆ. ರಾಮ ಮತ್ತೆ ಗೆದ್ದು ಬರುತ್ತಾನೆ. ರಾವಣ ಶಕ್ತಿಗಳು ನಾಶವಾಗುತ್ತವೆ ಎಂದರು. ರೌಡಿ ಶೀಟರ್‍ಗಳು ಪಕ್ಷ ಸೇರ್ಪಡೆ ಸಂಬಂಧ ಪ್ರತಿಕ್ರಿಯಿಸಿದ ಅವರು, ಎಲ್ಲಾ ರೌಡಿ ಶೀಟರ್‍ಗಳು ರೌಡಿಗಳು ಅಲ್ಲ ಅಂತ ಹೇಳಿದ್ದೆ. ಆದರೆ, ಎಲ್ಲಾ ಎಂದು ಹೇಳಿದ್ದನ್ನ ಮರೆತು ಬಿಟ್ಟಿದ್ದಾರೆ. ರೌಡಿ ಶೀಟರ್‍ನಲ್ಲಿರುವ ಎಲ್ಲರಿಗೂ ಕ್ಲೀನ್‍ಚಿಟ್ ಅನ್ನ ನಾನು ಕೊಟ್ಟಿಲ್ಲ. ಕಾಂಗ್ರೆಸ್ ಪಕ್ಷದ ಆರ್.ವಿ.ದೇವರಾಜ್, ಬಿ.ಕೆ.ಹರಿಪ್ರಸಾದ್ ಅವರ ಬಗ್ಗೆ ಕಾಂಗ್ರೆಸ್‍ನವರು ಅವಲೋಕನ ಮಾಡಬೇಕು ಎಂದರು. ಕೆಲವರನ್ನು ರಾಜಕೀಯ ಕಾರಣಕ್ಕೆ ರೌಡಿಶೀಟರ್ ಲಿಸ್ಟ್‍ಗೆ ಸೇರಿಸುತ್ತಾರೆ. ಆದರೆ, ಅವರ್ಯಾರು ರೌಡಿಗಳು ಆಗಿರಲ್ಲ. ಅಂತವರ ಬಗ್ಗೆ ಮಾತ್ರ ಹೇಳಿದ್ದೇನೆ. ನಾನು ನಿಜವಾದ ರೌಡಿಗಳ ಬಗ್ಗೆ ಕ್ಲೀನ್‍ಚಿಟ್ ಕೊಟ್ಟಿಲ್ಲ.

ಕೊಡೋದು ಇಲ್ಲ ಎಂದರು. ಕಾಂಗ್ರೆಸ್‍ನವರ ತಮ್ಮ ಸ್ವಭಾವಕ್ಕೆ ತಕ್ಕಂತೆ ಆರೋಪಿಸಿದ್ದಾರೆ. ನನ್ನ ಮೇಲೆ ವೈಯಕ್ತಿಕವಾಗಿ ಒಂದು ಕೇಸ್ ಕೂಡ ಇಲ್ಲ, ನನ್ನ ಮೇಲಿರುವುದು ಸಾರ್ವಜನಿಕ ಹೋರಾಟಗಳ ಕೇಸ್‍ಗಳು ಅಷ್ಟೆ. ಅದಕ್ಕೆ ರೌಡಿ ಲಿಸ್ಟ್‍ಗೆ ಸೇರಿಸಿದ್ದರು. ಅದಕ್ಕೆ ನನ್ನನ್ನು ನಾನು ಉದಾಹರಣೆ ಕೊಟ್ಟಿದ್ದೆ. ನಾನು ಕೊತ್ವಾಲನ ಶಿಷ್ಯನೂ ಅಲ್ಲ, ಜೈರಾಜ್ ಶಿಷ್ಯನೂ ಅಲ್ಲ. ನಾನು ಎಂದು ಹೇಳಿಕೊಂಡು ಹೆಮ್ಮೆ ಪಡುವ ರಾಜಕೀಯ ನೇತಾರರ ಸಾಲಿಗೆ ಸೇರಿದವನೂ ನಾನಲ್ಲ. ನಾನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕ. ನಾನು ಆರ್.ಎಸ್.ಎಸ್. ಗರಡಿಯಲ್ಲಿ ಬೆಳೆದವನು. ನಾನು ಯಾವ ಗುಂಡಾಗಿರಿನೂ ಮಾಡಿಲ್ಲ ಎಂದರು. ಕಾಂಗ್ರೆಸ್‍ನವರು ನನ್ನನ್ನು ಟೀಕೆ ಮಾಡುವಾಗ ಕುಡುಕ ಎಂದು ಹೇಳಿದ್ದರು. ನಾನು ಸಾರ್ವಜನಿಕವಾಗಿ ಕುಡಿದು ಅಸಭ್ಯವಾಗಿ ವರ್ತಿಸಿದ ಒಂದು ಉದಾಹರಣೆ ಕೊಡಲಿ ಎಂದು ಕಾಂಗ್ರೆಸ್ಸಿಗರಿಗೆ ಸವಾಲ್ ಹಾಕಿದ್ದಾರೆ. ಬೆಳಗ್ಗೆ 5ರಿಂದ ರಾತ್ರಿ 11ರವರೆಗೂ ಸಕ್ರೀಯವಾಗಿ ಕ್ಷೇತ್ರದ ಅಭಿವದೃದ್ಧಿಗೆ ತೊಡಗಿಸಿಕೊಂಡ ನನ್ನ ಮೇಲೆ ಅವರು ಆರೋಪ ಹೊರಿಸಿದ್ದಾರೆ. ಇದು ಕಾಂಗ್ರೆಸ್‍ನವರ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!