May 12, 2024

MALNAD TV

HEART OF COFFEE CITY

‘ಚಂದ್ರೇಗೌಡರ’ ಅಂತಿಮ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್ ಕುಮಾರ್

1 min read

ಚಿಕ್ಕಮಗಳೂರು : ರಾಜಕೀಯ ಮುತ್ಸದ್ದಿ 87 ವರ್ಷದ ಡಿ.ಬಿ. ಚಂದ್ರೇಗೌಡ ವಯೋಸಹಜ ಅನಾರೋಗ್ಯದಿಂದ ಸ್ವಗ್ರಾಮದಲ್ಲಿ ನಿಧನರಾದರು. ರಾಜಕೀಯ ಮುಖಂಡರು ಸೇರಿದಂತೆ ಸಾವಿರಾರು ಅಭಿಮಾನಿಗಳು, ಗ್ರಾಮಸ್ಥರು ಅಂತಿಮ ದರ್ಶನವನ್ನ ಪಡೆದರು. ಇಂದು ಸಂಜೆ ಚಂದ್ರೇಗೌಡರ ಹುಟ್ಟೂರು ದಾರದಹಳ್ಳಿ ಗ್ರಾಮದ ಪೂರ್ಣಚಂದ್ರ ಎಸ್ಟೇಟ್ ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಮಾಜಿ ಸಚಿವ ಡಿ.ಬಿ.ಚಂದ್ರೇಗೌಡ ವಿಧಿವಶ ಹಿನ್ನೆಲೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಚಂದ್ರೇಗೌಡರ ಹುಟ್ಟೂರು ದಾರದಹಳ್ಳಿ ಗ್ರಾಮದ ಪೂರ್ಣಚಂದ್ರ ಎಸ್ಟೇಟ್ ಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಡಿ.ಬಿ.ಚಂದ್ರೇಗೌಡ ಅವರ ಸಂಬಂಧಿಯಾಗಿರೋ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಮಾಜಿ‌ ಸಚಿವ ಡಿ.ಎನ್.ಜೀವಾರಾಜ್ ಕೂಡ ಭೇಟಿ ನೀಡಿ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!