May 12, 2024

MALNAD TV

HEART OF COFFEE CITY

ವಯಸ್ಸಾದಂತೆ ಮುತ್ಸದ್ದಿಯಾಗಬೇಕು ಪುಡಾರಿ ಆಗಬಾರದು: ಸಿ.ಟಿ ಆರ್ ವಿರುದ್ಧ ತಮ್ಮಯ್ಯ ಕಿಡಿನುಡಿ

1 min read

ಚಿಕ್ಕಮಗಳೂರು: ವಯಸ್ಸು, ಅನುಭವ ಆಗುತ್ತಿದ್ದಂತೆ ಮುತ್ಸದ್ದಿಯಾಗಬೇಕೆ ಹೊರತು ಪುಡಾರಿಯಾಗಬಾರದು ಎಂದು ಮಾಜಿ ಶಾಸಕ ಸಿ.ಟಿ ರವಿ ವಿರುದ್ಧ ಹಾಲಿ ಶಾಸಕ ಎಚ್.ಡಿ ತಮ್ಮಯ್ಯ ಪರೋಕ್ಷವಾಗಿ ಕುಟುಕಿದ್ದಾರೆ.

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ-ಮಾಜಿ ಶಾಸಕರ ನಡುವೆ ಆರೋಪ ಪ್ರತ್ಯಾರೋಪಕ್ಕೆ ಇದೀಗ ಪಿಚ್ ರೆಡಿಯಾಗಿದೆ. ಸರ್ಕಾರ ಬಂದು 8 ತಿಂಗಳ ನಂತರ ಮಾತಿನ ಸಮರಕ್ಕೆ ಇಬ್ಬರೂ ಇಳಿದಿದ್ದಾರೆ. ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಕೆಸರೆರಚಾಟ ಆಂಭಿಸಿ ಮಾತಿನ ಚಾಟಿ ಬೀಸತೊಡಗಿದ್ದಾರೆ. ಕ್ಷೇತ್ರದಲ್ಲಿ ನಡೆಯುತ್ತಿರುವ ನೂರಾರು ಕಾಮಗಾರಿಗಳ ಶಂಕುಸ್ಥಾಪನೆ, ಗುದ್ದಲಿ ಪೂಜೆ, ಉದ್ಘಾಟನೆ ಹಾಲಿ ಶಾಸಕ ಎಚ್.ಡಿ ತಮ್ಮಯ್ಯ ಮಾಡುತ್ತಿದ್ದರೆ, ಇದೆಲ್ಲಾ ನಾವು ತಂದಿದ್ದು ಎನ್ನುತ್ತಿರುವ ಸಿ.ಟಿ ರವಿಗೆ ಸಖತ್ ಟಾಂಗ್ ಕೊಟ್ಟ ತಮ್ಮಯ್ಯ ವಯಸ್ಸು ಅನುಭವ ಆದಂತೆ ಮತ್ಸದ್ದಿಯಂತೆ ವರ್ತಿಸಬೇಕು ಪುಡಾರಿಯಂತೆ ಆಡಬಾರದು ಎಂದು ಕಿಚಾಯಿಸಿದ್ದಾರೆ. ಅಷ್ಟೇ ಅಲ್ಲದೇ ನಿಮ್ಮ ಜೇಬಿನಿಂದ ಹಣ ಕೊಟ್ಟಿದ್ದೀರಾ ಮಾಹಿತಿ ಕೊರತೆ ನಿಮಗೆ ಇದೆ ನಿಮ್ಮ ಅವಧಿಯಲ್ಲಿ ಕೇವಲ ಮಂಜೂರಾತಿ ಆಗಿದೆ ಆದರೆ ನಮ್ಮ ಸರ್ಕಾರ ಬಂದ ಮೇಲೆ ಹಣ ಬಿಡುಗಡೆ ಆಗಿದೆ ಎಂದು ವಿವಿಧ ಕಾಮಗಾರಿಗಳಿಗೆ ಸಿದ್ದರಾಮಯ್ಯ ಸರ್ಕಾರ ಕೊಟ್ಟಿರುವ ಹಣದ ಸಂಪೂರ್ಣ ಮಾಹಿತಿ ನೀಡಿದ ಎಚ್.ಡಿ ತಮ್ಮಯ್ಯ ನಿಮ್ಮ ದುಡ್ಡು ನಮ್ಮದು ಎನ್ನುವ ದರ್ದು ನಮಗಿಲ್ಲ ಎಂದಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿವೃದ್ಧಿ ಆರಂಭಿಸಿದ ಎಲ್ಲರೂ ಮುಗಿಸಲು ಸಾಧ್ಯವಿಲ್ಲ ದಾಖಲೆ ತೆಗೆದು ನೋಡಲಿ ಎಂದು ಸವಾಲು ಹಾಕಿದರು. ಇದೇ ವೇಳೆ ಮಾತನಾಡಿದ ಎಚ್.ಡಿ ತಮ್ಮಯ್ಯ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಕಮಿಷನ್ ವಿಚಾರ ಪ್ರಸ್ತಾಪಿಸಿ ಕಂಟ್ರಾಕ್ಟರ್ ಗಳ ಮುಖವನ್ನೇ ನಾನು ನೋಡಿಲ್ಲ, ಸಿ.ಟಿ ರವಿ 2000 ಇಸವಿಯಲ್ಲಿ ಹೇಗಿದ್ರು ಇವಾಗ ಹೇಗಿದ್ದಾರೆ ಒಮ್ಮೆ ಬೆನ್ನು ತಿರುಗಿ ನೋಡಿಕೊಳ್ಳಿ ಚಿಕ್ಕಮಗಳೂರಲ್ಲಿ ಫೇಮಸ್ ಗುತ್ತಿಗೆದಾರ ಯಾರು ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು. ಡಿ.ವಿ ಜಿ ಯವರ ಕಗ್ಗದ ಮೂಲಕವೂ ವಾಗ್ದಾಳಿ ನಡೆಸಿದ ತಮ್ಮಯ್ಯ ಬಾಯಿ ಬಡಾಯಿ ಮಾಡುವವರು ನಿಮ್ಮ ತುಟಿ ಮೇಲೆ ಹಿಡಿತವಿರಲಿ ಎಂದಿದ್ದಾರೆ. ಶರಣರ ಸಂಸ್ಕೃತಿ ಯಿಂದ ಬಂದಿರುವ ನನಗೆ ದಿವಂಗತ ಮಾಜಿ ಸಂಸದ ಶ್ರೀಕಂಠಪ್ಪ ಮಾದರಿ ಎಂದರು. ಎಲ್ಲದಕ್ಕೂ ಅಭಿವೃದ್ಧಿ ಮೂಲಕ ಉತ್ತರ ಕೊಡುತ್ತೇನೆ ಎಂದು ಸಹಾ ತಿಳಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!