April 29, 2024

MALNAD TV

HEART OF COFFEE CITY

ಶಾಸಕ ತಮ್ಮಯ್ಯ ಸಹಿಯ ನಕಲಿ ಸೀಲ್ ಬಳಸಿ ಅಕ್ರಮ ಆರೋಪ

1 min read

ಚಿಕ್ಕಮಗಳೂರು: ಶಾಸಕ ಎಚ್.ಡಿ ತಮ್ಮಯ್ಯ ಸಹಿಯ ನಕಲಿ ಸೀಲ್ ಬಳಸಿ ಸಮಾಜ ಕಲ್ಯಾಣ ಇಲಾಖೆ ಎಫ್.ಡಿ.ಎ ರವಿ ಎಂಬಾತ ಸರ್ಕಾರದ ಅನುದಾನ ಪಡೆದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಲ್ಲದೇ ಕಚೇರಿ ಉಪಕರಣಗಳನ್ನು ಮನೆಗೆ ಕೊಂಡೊಯ್ದ ಬಗ್ಗೆ ಸಹಾ ತನಿಖೆಗೆ ಒತ್ತಾಯ ಕೇಳಿ ಬಂದಿದೆ.

ಚಿಕ್ಕಮಗಳೂರು ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಕೆಲಸ ನಿರ್ವಹಿಸುವ ಪ್ರಥಮ ದರ್ಜೆ ಸಹಾಯಕ ರವಿ ಎಂಬಾತ ಶಾಸಕ ಎಚ್.ಡಿ ತಮ್ಮಯ್ಯರ ಸಹಿಯ ನಕಲಿ ಸೀಲ್ ಬಳಸಿ ಅಕ್ರಮಗಳನ್ನು ಎಸಗಿದ್ದಾರೆ ಎಂದು ಬೊಗಸೆ ಗ್ರಾ.ಪ ಸದಸ್ಯ ವಿನೋದ್ ಆರೋಪಿಸಿದ್ದಾರೆ.
ಶಾಸಕ ತಮ್ಮಯ್ಯ ಸಹಿ ಇರುವ ನಕಲಿ ಸೀಲ್ ಬಳಸಿ ಬೆಂಗಳೂರಿನ ಎಂ.ಎಸ್ ಬಿಲ್ಡಿಂಗ್ ಗೆ ಕಳುಹಿಸಿ ಸಮಾಜ ಕಲ್ಯಾಣ ಇಲಾಖೆ ಅನುದಾನ ಪಡೆಯಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಅಲ್ಲದೇ ಸಮಾಜ ಕಲ್ಯಾಣ ಇಲಾಖೆ ಯಿಂದ ರೈಲು ನಿಲ್ದಾಣ ಸೇರಿದಂತೆ ನಗರದ ವಿವಿಧ ಸ್ಥಳಗಳಲ್ಲಿ ಅಳವಡಿಸಬೇಕಿದ್ದ ಟಿ.ವಿ ಗಳನ್ನು ಮನೆಗೆ ತೆಗೆದುಕೊಂಡು ಹೋದ ಆರೋಪ ಕೂಡಾ ರವಿ ವಿರುದ್ಧ ಹೊರಿಸಲಾಗಿದೆ. ಅಲ್ಲದೇ ಹಾಸ್ಟೆಲ್ ಒಂದರ ಕಟ್ಟಡ ಕೆಡವಿ ಅದರ ಅವಶೇಷಗಳನ್ನು ಮಾರಿಕೊಳ್ಳಲಾಗಿದೆ ಎಂದು ಸಹಾ ಆರೋಪ ಮಾಡಲಾಗಿದೆ. ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಯೋಗೀಶ್ ಎಫ್.ಡಿ ಎ ರವಿ ಯವರ ಅಮಾನತ್ತಿಗೆ ಶಿಫಾರಸು ಮಾಡಿದ್ದಾರೆ. 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!