May 11, 2024

MALNAD TV

HEART OF COFFEE CITY

ಕೋಟಿಗೊಬ್ಬ – 3 ಚಿತ್ರಕ್ಕೆ ಕಾಫಿನಾಡಲ್ಲಿ ಭರ್ಜರಿ ಸ್ವಾಗತ

1 min read

ಪೈಲ್ವಾನ್ ಚಿತ್ರದ ಬಳಿಕ ತೆರೆ ಕಾಣ್ತಿರೋ ನಟ ಸುದೀಪ್ ಅಭಿನಯದ ಕೋಟಿಗೊಬ್ಬ-3 ಚಿತ್ರಕ್ಕೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ. ನಿನ್ನೆಯೇ ತೆರೆ ಕಾಣಬೇಕಿದ್ದ ಚಿತ್ರ ತಾಂತ್ರಿಕ ಕಾರಣಗಳಿಂದ ಇಂದು ತೆರೆಕಂಡಿದೆ. ಆದರೆ, ಒಂದು ದಿನ ತಡವಾದರೂ ಅಭಿಮಾನಿಗಳ ಉತ್ಸಾಹ ಮಾತ್ರ ಕುಂದಿಲ್ಲ. ಚಿಕ್ಕಮಗಳೂರಿನ ಮಿಲನ್ ಥಿಯೇಟರ್ನಲ್ಲಿ ಚಿತ್ರ ಬಿಡುಗೊಳ್ಳುತ್ತಿದ್ದು, ಅಭಿಮಾನಿಗಳು ಬೆಳಗ್ಗೆಯಿಂದಲೂ ಸಿನಿಮಾ ಥಿಯೇಟರ್ನ ನವವಧುವಿನಂತೆ ಸಿಂಗರಿಸಿದ್ದಾರೆ. ಚಿತ್ರಮಂದಿರದ ತುಂಬಾ ಸುದೀಪ್ ಕಟೌಂಟ್ ರಾರಾಜಿಸುತ್ತಿದ್ದು ಸುದೀಪ್ ಭಾವಚಿತ್ರಕ್ಕೆ ಹಾಳಿನ ಅಭಿಷೇಕ ಮಾಡಿ ಚಿತ್ರ ನೂರು ದಿನಗಳ ಕಾಲ ಓಡಲಿ ಎಂದು ಶುಭ ಹಾರೈಸಿದ್ದಾರೆ.  ಸುದೀಪ್ ಕಟೌಂಟ್ ಕುಂಬಳಕಾಯಿ ಹೊಡೆದು ದೃಷ್ಠಿ ತೆಗೆದಿದ್ದಾರೆ. ಬೆಳಗ್ಗೆಯಿಂದಲೂ ಥಿಯೇಟರ್ ಮುಂದೆ ಜಮಾಯಿಸಿರೋ ಅಭಿಮಾನಿಗಳು ಡ್ರಮ್ ಸೆಟ್ ಶಬ್ಧಕ್ಕೆ ಮನಸ್ಸೋ ಇಚ್ಛೆ ಕುಣಿಯುತ್ತಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!