April 27, 2024

MALNAD TV

HEART OF COFFEE CITY

ಈ ಸ್ಟೋರಿ ಓದಿದ್ರೆ ನೀವು ನಾಲಗೆಗೆ ಕೆಲ್ಸ ಕೊಡೊದ್ರಲ್ಲಿ ನೋ ಡೌಟ್..!

1 min read

 

 

ಚಿಕ್ಕಮಗಳೂರು: ಜೀವನದಲ್ಲಿ ಏನಾದ್ರೂ ಸಾಧಿಸಬೇಕು ಅನ್ನೋ ಹಂಬಲ ಆ ವ್ಯಕ್ತಿಗಿತ್ತು. ಹಾಗೆ ಯೋಚಿಸುತ್ತಾ ಕುಳಿತ ವ್ಯಕ್ತಿಗೆ ಹೊಳೆದದ್ದು ಅದೊಂದು ಐಡಿಯಾ. ಇಡೀ ಭಾರತದಲ್ಲಿ ಅಂತಹ ಸಾಧನೆಯನ್ನ ಈವರೆಗೂ ಯಾರೂ ಮಾಡಿಲ್ಲ. ಅಂತಹ ಕೆಲ್ಸವನ್ನ ನಾನು ಮಾಡ್ಬೇಕು ಅಂದುಕೊಂಡು ಕಾಫಿನಾಡಿನ ವ್ಯಕ್ತಿಯೊಬ್ಬರು 40ರ ಹರೆಯದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿ ಸಾಧನೆ ಮಾಡಿದ್ದಾರೆ. ಈ ಸ್ಟೋರಿ ಓದಿದ್ರೆ ನೀವೂ ನಾಲಗೆಯನ್ನು ಗಂಟೊಲೊಳಗೆ ಕದ್ದಿಟ್ಟುಕೊಳ್ಳುವ ಪ್ರಯತ್ನ ಮಾಡೋದ್ರಲ್ಲಿ ನೋ ಡೌಟ್ ….!

ಹೌದು, ಸಾಧನೆ ಮಾಡ್ಬೇಕು ಅಂತಾ ಮನಸ್ಸು ಮಾಡಿದ್ರೆ ಒಂದಲ್ಲೊಂದು ಅವಕಾಶಗಳು ನಮಗಾಗಿ ಕಾಯುತ್ತಿರುತ್ತದೆ. ಆದರೆ ಸಾಧಿಸುವ ಮನಸ್ಸು, ಛಲ ನಮಗಿರಬೇಕು ಅಷ್ಟೇ. ಇದಕ್ಕೆ ತಾಜಾ ಉದಾಹರಣೆ ಕಾಫಿನಾಡಿನ ಈ ವ್ಯಕ್ತಿ. ಹೆಸ್ರು ಮಹೇಶ್, ವಯಸ್ಸು 40 ದಾಟಿದ್ರೂ ಹೊಸದೇನಾದ್ರೂ ಸಾಧಿಸಬೇಕೆನ್ನುವ ಇವರ ಛಲ ಮಾತ್ರ ಇಂದಿಗೂ ಕುಗ್ಗಿಲ್ಲ. ಸಾಧನೆಯ ಕನಸು ಕಂಡ ಮಹೇಶ್, ಆರಿಸಿಕೊಂಡಿದ್ದು ಅವರ ನಾಲಗೆಯನ್ನೇ.. ನಾಲಗೆಯನ್ನ ತನ್ನ ಗಂಟಲಿನ ಹಿಂದಕ್ಕೆ ಇಟ್ಕೊಂಡು ಕಿರುನಾಲಗೆಯನ್ನ ಮುಂದೆ ಚಾಚಿ ದಾಖಲೆ ಸೃಷ್ಠಿ ಮಾಡಿದ್ದಾರೆ. ಅಯ್ಯೋ ಅದೇನ್ ಮಹಾ ಅಂತಾ ನೀವು ಮೂಗು ಮುರೆಯಬಹುದು. ಆದ್ರೆ ಗಂಟಲಿನ ಒಳಗೆ ನಾಲಗೆಯನ್ನ ಅದುಮಿಟ್ಟುಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ. ಈ ಸಾಧನೆಯಲ್ಲೇ ಇವರು ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ತಮ್ಮ ಹೆಸರನ್ನ ದಾಖಲು ಮಾಡಿದ್ದಾರೆ. ನಾಲಗೆಯನ್ನ ಹೀಗೆ ಗಂಟಲಿನ ಹಿಂದೆ 2 ನಿಮಿಷ 15 ಸೆಕೆಂಡ್ ಇಟ್ಟುಕೊಳ್ತಾರೆ. 130 ಕೋಟಿ ಜನಸಂಖ್ಯೆಯ ಭಾರತದಲ್ಲಿ ಈವರೆಗೂ ಯಾರೂ ಈ ಸಾಧನೆ ಮಾಡಿಲ್ಲ. ಚಿತ್ರದುರ್ಗದ ಬಾಲಕ ಒಂದು ನಿಮಿಷ ಇಟ್ಟುಕೊಂಡ್ರೆ, ಇವರು 2 ನಿಮಿಷ ಹದಿನೈದು ಸೆಕೆಂಡ್ ಗೂ ಹೆಚ್ಚು ಹೊತ್ತು ಇಟ್ಟುಕೊಳ್ತಾರೆ. ನೋಡೋದಕ್ಕೆ ಇದು ಸುಲಭದಂತೆ ಕಾಣಬಹುದು. ಆದ್ರೆ, ಕಷ್ಟ ಸಾಧ್ಯ. ಹೀಗೆ ನಾಲಗೆಯನ್ನ ಗಂಟಲಲ್ಲಿ ಇಡುವಾಗ ಉಸಿರಾಡೋದಕ್ಕೆ ಆಗಲ್ಲ. ಆದರೆ, ಚಿಕ್ಕಮಗಳೂರು ತಾಲೂಕಿನ ಕೆರೆಮಕ್ಕಿ ಗ್ರಾಮದ ಮಹೇಶ್ ತನ್ನ ನಾಲಗೆಯನ್ನ ಗಂಟಳೊಳಗೆ ಅಡಗಿಸಿ ಇಟ್ಟುಕೊಳ್ತಾರೆ.

ಕಳೆದ ಏಳೆಂಟು ವರ್ಷಗಳಿಂದ ಆಗಾಗ್ಗೆ ಪ್ರಾಕ್ಟೀಸ್ ಮಾಡಿಕೊಂಡು ಬರ್ತಿದ್ದ ಮಹೇಶ್ ಇದೀಗ ಈ ಸಾಧನೆಯಲ್ಲಿ ದೇಶಕ್ಕೆ ಮೊದಲಿಗನೆಂಬ ಕೀರ್ತಿಗೂ ಪಾತ್ರರಾಗಿದ್ದಾರೆ. ಚಿಕ್ಕಂದಿನಿಂದಲೂ ಏನಾದ್ರು ಸಾಧನೆ ಮಾಡಬೇಕೆಂಬ ಆಸೆ ಇತ್ತು. ಇದು ಇಷ್ಟು ದೊಡ್ಡದ್ದಾಗುತ್ತೆಂದು ಗೊತ್ತಿರಲಿಲ್ಲ ಎಂದು ಹೇಳುವ ಮಹೇಶ್ ತನ್ನ ಸಾಧನೆಯನ್ನ ನೆನೆದು ಖುಷಿಪಡ್ತಾರೆ. ಚಿಕ್ಕಂದಿನಿಂದಲೂ ಆಗಾಗ್ಗೆ ಹೀಗೆ ನಾಲಗೆಯನ್ನ ಗಂಟಲಿನ ಒಳಗೆ ಅಡಗಿಸಿಡ್ತಿದ್ದ ಮಹೇಶ್ ಕಳೆದ ಏಳೆಂಟು ವರ್ಷದಿಂದ ಪ್ರಾಕ್ಟೀಸ್ ಮಾಡ್ತಿದ್ದರು. ಇದನ್ನ ಕಂಡ ಸ್ಥಳೀಯರು ಆಶ್ಚರ್ಯ ಕೂಡ ವ್ಯಕ್ತಪಡಿಸ್ತಿದ್ರು. ತಾವು ಈ ರೀತಿ ಮಾಡಲು ಹೋಗಿ ಆಗಲ್ಲಪ್ಪಾ… ಸುಸ್ತಾಗುತ್ತೆ…. ಉಸಿರುಗಟ್ಟುತ್ತೆ ಅಂತ ಕೈಬಿಡ್ತಿದ್ರು. ಆದ್ರೆ, ಮಹೇಶ್ ಇದನ್ನ ಸುಲಲಿತವಾಗಿ ಮಾಡ್ತಿದ್ರು. ಮಹೇಶ್‍ಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್‍ಗೆ ಸೇರಿಸಬಹುದು ಅನ್ನೋದು ಗೊತ್ತಿರಲಿಲ್ಲ. ಅದರ ಮಾರ್ಗವೂ ಗೊತ್ತಿರಲಿಲ್ಲ. ಇದನ್ನ ಕಂಡ ಮಹೇಶ್ ರವರ ಸ್ನೇಹಿತ ಶ್ರೀಧರ್, ಬುಕ್ ಆಫ್ ರೆಕಾರ್ಡ್‍ಗೆ ವಿಡಿಯೋ, ಬಯೋಡೇಟಾವನ್ನ ಕಳಿಸಿದ್ದಾರೆ. ಈಗ ಮಹೇಶ್ ಹೆಸರು ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲಾಗಿದೆ.

ನಾಲಗೆಯನ್ನ ಗಂಟಳೊಳಗೆ ಅದುಮಿಟ್ಟುಕೊಂಡು ಕಿರುನಾಲಗೆಯನ್ನ ಹೊರಚಾಚೋದು ತುಂಬಾನೇ ಕಷ್ಟ. ಸಾಮಾನ್ಯವಾಗಿ ಬಾಯಿ ಅಗಲ ಮಾಡಿ ನಾಲಗೆಯನ್ನ ಹೊರಚಾಚಿ, ಕಿರುನಾಲಗೆಯನ್ನ ನೋಡುವ ಪ್ರಯತ್ನ ಮಾಡಬಹುದು. ಆದ್ರೆ ನಾಲಗೆಯನ್ನ ಗಂಟಲಲ್ಲಿ ಅಡಗಿಸಿಟ್ಟುಕೊಳ್ಳೊದು ಕಷ್ಟಸಾಧ್ಯ. ಸಾಲದಕ್ಕೆ ಜೀವಕ್ಕೆ ಸಂಚಕಾರ ತರುವಂತಹ ಇಂತಹ ಪ್ರಯತ್ನವನ್ನ 2 ನಿಮಿಷ 15 ಸೆಕೆಂಡ್ ಇಟ್ಟುಕೊಳ್ಳುವ ದಾಖಲೆಯನ್ನ ಭಾರತದಲ್ಲೇ ಯಾರೂ ಮಾಡಿಲ್ಲ ಅನ್ನೋದು ಮತ್ತೊಂದು ಹೆಗ್ಗಳಿಕೆ. ಒಟ್ಟಿನಲ್ಲಿ ಪ್ರತಿಯೊಬ್ಬ ಮನುಷ್ಯನಲ್ಲೂ ಒಂದೊಂದು ಕಲೆ ಇರುತ್ತೆ. ಅದನ್ನ ಗುರುತಿಸಿಕೊಂಡು ಬೆಳೆಯಬೇಕಷ್ಟೆ. ಅದು ವೈಯಕ್ತಿಕ ಬದುಕಿಗೂ ಸಹಕಾರಿಯಾಗೋದ್ರ ಜೊತೆ ಸಾಧನೆಗೂ ದಾರಿಯಾಗಿರುತ್ತೆ. ಕಾಫಿನಾಡಿನ ಕಾಡಂಚಿನ ಕುಗ್ರಾಮದ ಯುವಕ ದೇಶದಲ್ಲೇ ಯಾರೂ ಮಾಡದ ಸಾಧನೆ ಮಾಡಿದ್ದಾನೆಂದರೆ ಅದು ಜಿಲ್ಲೆಗೂ, ರಾಜ್ಯಕ್ಕೂ ಹೆಮ್ಮೆ ಪಡುವ ವಿಚಾರ ಅನ್ನೋದು ಖುಷಿಯ ವಿಚಾರ. ಈ ಸ್ಟೋರಿ ಓದುತ್ತಾ ನೀವೇನಾದ್ರೂ ನಾಲಗೆಯನ್ನ ಗಂಟಳೊಳಗೆ ಹಾಕಿಕೊಂಡಿದ್ರೆ ಹುಷಾರ್..!

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!