May 11, 2024

MALNAD TV

HEART OF COFFEE CITY

ಅ. 30 ರಿಂದ ನ. 05 ರ ವರೆಗೆ “ದತ್ತ ಮಾಲಾ ಅಭಿಯಾನ”

1 min read

ಚಿಕ್ಕಮಗಳೂರು: ಶ್ರೀ ರಾಮ ಸೇನೆಯ ವತಿಯಿಂದ ರಾಜ್ಯದ್ಯಂತ ೨೦ನೇ ವರ್ಷದ “ದತ್ತ ಮಾಲಾ ಅಭಿಯಾನ” ವನ್ನು ಅ. 30 ರಿಂದ ನ. 05 ರ ವರೆಗೆ ನಡೆಸಲಿದ್ದು ಎಲ್ಲ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಶ್ರೀ ರಾಮ ಸೇನೆಯ ರಾಜ್ಯ ಅಧ್ಯಕ್ಷ ಗಂಗಾಧರ್ ಕುಲಕರ್ಣಿ ತಿಳಿಸಿದರು.

ನಗರದ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನವೆಂಬರ್ ೫ ರಂದು ಶ್ರೀ ಶಂಕರ ಮಠದಿಂದ ಎಂಜಿ ರಸ್ತೆ ಮಾರ್ಗವಾಗಿ ಆಜಾದ್ ಪಾರ್ಕ್ ವೃತ್ತದ ವರೆಗೆ ಬೃಹತ್ ಶೋಭ ಯಾತ್ರೆ ನಡೆಯಲಿದೆ. ನಂತರ 11:30ಕ್ಕೆ ಶ್ರೀ ಗುರು ದತ್ತಾತ್ರೇಯ ಪೀಠದ ಚಂದ್ರದ್ರೋಣ ಪರ್ವತದಲ್ಲಿ ಶ್ರೀ ಸತ್ಯ ದತ್ತ ವ್ರತ ಮತ್ತು ಶ್ರೀ ದತ್ತ ಹೋಮ ಮತ್ತು ಮಹಾ ಪ್ರಸಾದ ವಿತರಣೆ ಇರಲಿದೆ ಎಂದರು.

ಅ. 30ರಂದು ಬಸವನಹಳ್ಳಿ ರಸ್ತೆಯ ಶಂಕರ ಮಠದಲ್ಲಿ ಬೆಳಗ್ಗೆ 10 ಗಂಟೆಗೆ ಮಾಲಾ ಧಾರಣೆ ಇರುತ್ತದೆ. ನ. 2 ಸಂಜೆ 7.30 ಕ್ಕೆ ಶ್ರೀ ಶಂಕರ ಮಠದ ಶಾರದಾಂಬ ದೇವಸ್ಥಾನದ ಆವರಣದಲ್ಲಿ ದತ್ತ ದೀಪೋತ್ಸವ ವಿದ್ದು, ನ. 4 ಬೆಳಗ್ಗೆ 10 ಇಂದ ನಗರದ ಪ್ರಮುಖ ರಸ್ತೆಗಳಲ್ಲಿ ಬಿಕ್ಷಾಟನೆ ಮಾಡಿ ಪಡಿ ಸಂಗ್ರಹ ಮಾಡಲಾಗುತ್ತದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ , ರಾಷ್ಟ್ರೀಯ ಗೌರವಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಮತ್ತು ಹರಿಯಾಣದ ಯೋಗಿ ಆದಿತ್ಯನಾಥ ವಿವೇಕ್ ಎಂಬ ಅಗೋರಿ ಪರಂಪರೆಯ ಸಂತರು ಕಾರ್ಯಕ್ರಮದ ಸಾನಿಧ್ಯ ವಹಿಸಲಿದ್ದಾರೆ ಎಂದು ತಿಳಿಸಿದರು.

ರಾಜ್ಯಾದ್ಯಂತ ಅ. 30 ರಂದು ದತ್ತ ಮಾಲಾಧಾರಣೆಯಾಗಲಿದ್ದು 5 ರಿಂದ 6 ಸಾವಿರ ದತ್ತ ಮಾಲಾಧಾರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು. ಸರ್ಕಾರಕ್ಕೆ ಕೆಲವೊಂದು ಆಗ್ರಹಗಳಿದ್ದು, ಇದನ್ನ ತಕ್ಷಣವಾಗಿ ಹಿಂದೂಪೀಠ ಎಂದು ಒಪ್ಪಿಸಬೇಕು. ಅಲ್ಲಿ ನಡೆಯುತ್ತಿರುವಂತಹ ಉರುಸ್ ನನ್ನ ತಕ್ಷಣವಾಗಿ ಬಂದ್ ಮಾಡಬೇಕು. ಮುಜರಾಯಿ ಸಂಬಂಧಿತ ಜಾಗದಲ್ಲಿ ಯಾಕೆ ಉರುಸ್ ನಡೆಸುತ್ತಿದ್ದೀರಾ..? ಕೋರ್ಟ್ ನಲ್ಲೂ ಕೂಡ ಇದು ಹಿಂದುಗಳ ಪೀಠ ಎಂದು ಸಾಬೀತಾಗಿದೆ ಆ ಜಾಗದಲ್ಲಿ ಊರುಸ್ ನಡೆಸಿದರೆ ಶ್ರೀರಾಮ ಸೇನೆ ಸುಮ್ಮನಿರುವುದಿಲ್ಲ ಎಂದು ಹೇಳಿದರು.

ಅಲ್ಲಿಗೆ ಬರುವಂತಹ ದತ್ತಭಕ್ತರಿಗೆ ಪ್ರಸಾದ ವಿತರಣೆಯ ವ್ಯವಸ್ಥೆ ಮಾಡಬೇಕು. ಉರುಸ್ ಆಚರಣೆಯ ಸಂದರ್ಭದಲ್ಲಿ ಮೂರು ದಿನಗಳ ಕಾಲ ಪ್ರಸಾದ ನೀಡುತ್ತೀರಿ ಆದರೆ ದತ್ತ ಮಾಲೆ ಹಾಕಿ ಏಳು ದಿನಗಳ ಕಠಿಣ ವ್ರತ ಮಾಡಿ ಬಂದಂತಹ ದತ್ತ ಭಕ್ತರಿಗೆ ಪ್ರಸಾದ ಕೊಡಬೇಕು ಎಂದು ಅನಿಸುವುದಿಲ್ಲವೇ ಪ್ರಶ್ನೆ ಮಾಡಿದರು. ನಾವು ಇಟ್ಟಿರುವಂತಹ ಬೇಡಿಕೆಗಳನ್ನ ಈಡೇರಿಸದೆ ಇದ್ದಲ್ಲಿ ಅದೇ ಪೀಠದಲ್ಲಿ ಸೂಕ್ತ ನಿರ್ಣಯವನ್ನು ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ದತ್ತಪೀಠದಲ್ಲಿ ಅನಧಿಕೃತ ಜೀಪ್ ಗಳು ಹೆಚ್ಚು ಹಣ ಪಡೆದು ಭಕ್ತರನ್ನು ಲೂಟಿ ಮಾಡುತ್ತಿವೆ. ಆ ಜೀಪ್ ಗಳಿಗೆ ಜಿಲ್ಲಾಡಳಿತ ಕಡಿವಾಣ ಹಾಕಬೇಕು ಇಲ್ಲದಿದ್ದರೆ ಶ್ರೀರಾಮ ಸೇನೆಯೇ ಹಾಕುತ್ತದೆ ಎಂದ ಅವರು ಜಿಲ್ಲಾಡಳಿತವು ಇದನ್ನ ಗಂಭೀರವಾಗಿ ತೆಗೆದುಕೊಂಡು ತಕ್ಷಣವಾಗಿ ಪರಿಹಾರ ನೀಡಬೇಕು ಎಂದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!