ವೀಕೆಂಡ್ ಕರ್ಫ್ಯೂ: ಕಾಫಿನಾಡಲ್ಲಿ ಮಿಶ್ರ ಪ್ರತಿಕ್ರಿಯೆ
1 min read
ಚಿಕ್ಕಮಗಳೂರು: ವಿಕೇಂಡ್ ಕರ್ಫ್ಯೂ ಗೆ ಕಾಫಿನಾಡಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಿಗ್ಗೆಯಿಂದಲೇ ನಗರದಲ್ಲಿ ಮಾಮೂಲಿಯಾಗಿ ಜನರ ಓಡಾಟ ಕಂಡು ಬಂದಿದೆ. ಇನ್ನು ಆಟೋ, ಬಸ್ ಸಂಚಾರ ಯಥಾಸ್ಥಿತಿ ಇದ್ದು ಬಸ್ ನಿಲ್ದಾಣದಲ್ಲಿ ಜನರಿಲ್ಲದೇ ಬಿಕೋ ಎನ್ನುತ್ತಿತ್ತು. ಉಳಿದಂತೆ ನಗರದಲ್ಲಿ ಜನರು ಪೊಲೀಸರಿಗೆ ಸಬೂಬುಗಳನ್ನು ಹೇಳಿಕೊಂಡು ಓಡಾಡುತ್ತಿದ್ದ ದೃಶ್ಯ ಕಂಡು ಬಂತು.
ನಗರದ ಪ್ರಮುಖ ರಸ್ತೆಯಾದ ಎಂ.ಜಿ ರಸ್ತೆಗೆ ಪೊಲೀಸರು ಬ್ಯಾರಿಕೇಡ್ ಹಾಕಿ ನಿರ್ಬಂಧ ಹಾಕಿದ್ದು ಪ್ರಮುಖ ವೃತ್ತಗಳಲ್ಲಿ ಪೊಲೀಸ್ ಬಂದೂಬಸ್ತ್ ಮಾಡಲಾಗಿದೆ. ಉಳಿದಂತೆ ತುರ್ತು ಸೇವೆಗೆ ಅವಕಾಶ ನೀಡಿದ್ದು ಹಾಲು, ದಿನಸಿ, ಕೃಷಿ ಉಪಕರಣದ ಅಂಗಡಿಗಳು ಮೆಡಿಕಲ್ ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದ ಹೊಟೇಲ್ ಗಳಲ್ಲಿ ಪಾರ್ಸಲ್ ಸೇವೆ ಮಾತ್ರ ನೀಡಲಾಗುತ್ತಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g