May 14, 2024

MALNAD TV

HEART OF COFFEE CITY

ಉತ್ತಮ ಕಾರ್ಯ ವೈಖರಿಗೆ ತರಬೇತಿ ಅವಶ್ಯಕ: ಕೆ.ಎನ್. ರಮೇಶ್

1 min read

ಚಿಕ್ಕಮಗಳೂರು-ದೈನಂದಿನ ಆಡಳಿತ ವ್ಯವಸ್ಥೆಯಲ್ಲಿ ಉತ್ತಮ ಕಾರ್ಯ ವೈಖರಿ ಜತೆಗೆ ಸೂಕ್ತನಿರ್ಧಾರವನ್ನು ಕೈಗೊಳ್ಳಲು ತರಬೇತಿಯ ಅಧಿಕಾರಿ ವರ್ಗಕ್ಕೆ ತರಬೇತಿಯ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದರು.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕಂದಾಯ ಇಲಾಖೆ ನೌಕರರಿಗೆ ಕಂದಾಯ ವಿಷಯಗಳ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸರ್ಕಾರದ ಎಲ್ಲಾ ಹಂತದ ಅಧಿಕಾರಿಗಳಿಗೆ ತರಬೇತಿ ನೀಡಬೇಕು ಎನ್ನುವುದು ರಾಜ್ಯ ಸರ್ಕಾರದ ಆಶಯವಾಗಿದ್ದು, ಅದರಂತೆ 2021 ರಲ್ಲಿ ರಾಜ್ಯ ತರಬೇತಿ ಪರಿಷತ್ ಸ್ಥಾಪನೆ ಮಾಡುವ ಮೂಲಕ ತರಬೇತಿ ಕಾರ್ಯಾರಂಭ ಆರಂಭಿಸಿದೆ. ಅಧಿಕಾರಿಗಳು ತರಬೇತಿ ಪಡೆಯುವ ಬಗ್ಗೆ ಸ್ಪಷ್ಟವಾದ ನೀತಿಯನ್ನು ರೂಪಿಸಿದೆ ಎಂದರು.

ಅಧಿಕಾರಿಗಳಿಗೆ 3 ಹಂತದಲ್ಲಿ ತರಬೇತಿ ಇದ್ದು ಮೊದಲ ಹಂತದಲ್ಲಿ ಸೇವೆಗೆ ಸೇರಿದ ಬಳಿಕ ನೀಡುವ ಬುನಾದಿ ತರಬೇತಿ, ಎರಡನೇ ಹಂತದ ಕಾರ್ಯವೈಖರಿ, ದೈನಂದಿನ ಕಾರ್ಯಚಟುವಟಿಕೆಗಳ ಕುರಿತು ಸಮರ್ಥ ನಿರ್ವಹಣೆ, ಸಾಮಾಥ್ರ್ಯ ಹೆಚ್ಚಿಸುವ ತರಬೇತಿ, ಇನ್ನು ಮೂರನೇ ಹಂತದಲ್ಲಿ ಮೇಲ್ವಿಚಾರಣೆ, ನಿರ್ಧಾರ ಕೈಗೊಳ್ಳುವುದು, ಮೌಲ್ಯಮಾಪನಕ್ಕೆ ಸಂಬಂಧಿಸಿದ ತರಬೇತಿಯನ್ನು ಒಳಗೊಂಡಿದೆ. ಈ ಎಲ್ಲಾ ತರಬೇತಿಗಳನ್ನು ಪಡೆದುಕೊಂಡಲ್ಲಿ ಯಶಸ್ವಿಯಾಗಿ ತಮ್ಮ ಕೆಲಸಗಳನ್ನು ನಿರ್ವಹಿಸಬಹುದಾಗಿದೆ ಎಂದು ತಿಳಿಸಿದರು.
ಪ್ರತಿ ಕಛೇರಿಗಳಲ್ಲಿ ಕಡ್ಡಾಯವಾಗಿ ಗಾರ್ಡ್ ಫೈಲ್ ನಿರ್ವಹಣೆ ಮಾಡಬೇಕು, ಇಲ್ಲಿ ಸರ್ಕಾರದಿಂದ ಇಲಾಖೆಗೆ ಸಂಬಂಧಿಸಿದಂತೆ ಬರುವ ಹೊಸ ಸುತ್ತೋಲೆ, ಆದೇಶಗಳು, ಸಂಗ್ರಹ ಮಾಡಿಟ್ಟುಕೊಳ್ಳಬೇಕು, ಜತೆಗೆ ಆಡಿಟ್ ವರದಿಯನ್ನು ಸಮರ್ಥವಾಗಿಟ್ಟುಕೊಳ್ಳಬೇಕು, ಭೂ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಸಾಕಷ್ಟು ನಮೂನೆಗಳಿದ್ದು ನಿಯಮಗಳು, ಅರ್ಜಿಗಳ ಬಗ್ಗೆ ತಿಳುವಳಿಕೆ ಹೊಂದಿರಬೇಕು ಎಂದರು.

ಸರ್ಕಾರದ ಯಾವುದೇ ಕಾಯ್ದೆ, ಕಾನೂನು ಕಟ್ಟಳೆಗಳನ್ನು ಪಾಲಿಸಲು ತರಬೇತಿಯ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ರೂಪಾ ಮಾತನಾಡಿ ಕಾರ್ಯದ ಒತ್ತಡಗಳ ನಡುವೆ ಸಮರ್ಥವಾಗಿ ಕೆಲಸ ನಿರ್ವಹಿಸಲು ತರಬೇತಿ ಹೆಚ್ಚು ಅಗತ್ಯವಿದೆ, ಮುಖ್ಯವಾಗಿ ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುವುದು ಪೂರ್ವ ಜನ್ಮದಲ್ಲಿ ಮಾಡಿದ ಪುಣ್ಯವೆಂದು ಭಾವಿಸಬೇಕು, ಏಕೆಂದರೆ ಜನನ ಹಾಗೂ ಮರಣ ಪತ್ರ, ಜಾತಿ, ಆದಾಯ, ಪಿಂಚಣಿ ಒಳಗೊಂಡಂತೆ ವಿವಿಧ ದಾಖಲೆಗಳನ್ನು ಕಂದಾಯ ಇಲಾಖೆ ಮೂಲಕ ಸೌಲಭ್ಯಗಳನ್ನು ಒದಗಿಸುತ್ತಿದ್ದು ಇದರ ಸದುಪಯೋಗ ಕಟ್ಟಕಡೆಯ ಅರ್ಹ ಫಲಾನುಭವಿಗೆ ಸಿಗುವಂತೆ ಕಂದಾಯ ಇಲಾಖೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುವಾಗ ಅಧಿಕಾರಿಗಳು ಕನಿಷ್ಟ ಜ್ಞಾನ, ತಿಳುವಳಿಕೆ ಜತೆಗೆ ಹೃದಯವಂತಿಕೆಯನ್ನು ಬೆಳೆಸಿಕೊಳ್ಳಬೇಕು, ಮುಖ್ಯವಾಗಿ ಕಾನೂನಿನ ತಿಳುವಳಿಕೆ ಅತ್ಯಗತ್ಯ ಎಂದರು. ಸರ್ಕಾರದ ಹೊಸ ಆದೇಶಗಳು, ಕಡತಗಳ ನಿರ್ವಹಣೆ ಬಗ್ಗೆ ತರಬೇತಿ ಹೆಚ್ಚು ಅನುಕೂಲಕರವಾಗಲಿದ್ದು ಪ್ರತಿಯೊಬ್ಬರು ಇದರ ಉಪಯೋಗಪಡೆದುಕೊಳ್ಳುವಂತೆ ಸಲಹೆ ನೀಡಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!