May 14, 2024

MALNAD TV

HEART OF COFFEE CITY

ವೀಕೆಂಡ್ ಕಫ್ರ್ಯೂ: ಪ್ರವಾಸಿತಾಣಗಳಿಗೆ ಸಂಪೂರ್ಣ ನಿರ್ಬಂಧ

1 min read

 

ಸರ್ಕಾರದ ಆದೇಶದಂತೆ ವೀಕೆಂಡ್ ಕಫ್ರ್ಯೂಗೆ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆವರೆಗೂ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವೀಕೆಂಡ್ ಕಫ್ರ್ಯೂ ಹಿನ್ನಲೆಯಲ್ಲಿ ಜಿಲ್ಲೆಯ ಗಡಿಪ್ರದೇಶ ಹಾಗೂ ನಗರದ ಪ್ರಮುಖ ರಸ್ತೆಗಳಲ್ಲಿ ಪೊ ಲೀಸ್ ಇಲಾಖೆಯಿಂದ ಚೆಕ್‍ಪೋಸ್ಟ್ ತೆರೆಯಲಾಗಿದೆ. ತಪಾಸಣೆಗೆ ಮಾರ್ಷಲ್‍ಗಳ ತಂಡವನ್ನು ರಚಿಸಿದ್ದು, ಪರಿಶೀಲನೆ ನಡೆಸಲಿದ್ದಾರೆ ಎಂದರು.

ಸಾರ್ವಜನಿಕ ಉದ್ಯಾನವನ, ಮದ್ಯದಂಗಡಿ, ಪ್ರವಾಸಿಗರಿಗೆ ನಿರ್ಬಂಧಗಳನ್ನು ವಿಧಿಸಲಾ ಗಿದೆ. ಸಾರ್ವಜನಿಕರ ಅನಗತ್ಯ ಸಂಚಾರವನ್ನು ನಿರ್ಬಂಧಿಸಲಾಗಿದೆ. ತುರ್ತು ಸಂದರ್ಭದಲ್ಲಿ ಸಂಚರಿಸುವರು ಅಗತ್ಯ ದಾಖಲೆಗಳನ್ನು ತಪಾಸಣಾ ಅಧಿಕಾರಿಗಳಿಗೆ ತೋರಿಸಿ ಸಂಚರಿಸಲು ಅವಕಾಶವಿದೆ ಎಂದು ಹೇಳಿದರು.

ದೇವಸ್ಥಾನಗಳಲ್ಲಿ 50 ಜನರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ವಿಶೇಷ ಪೂಜಸೇವಾ ಕಾರ್ಯಗಳಿಗೆ ನಿರ್ಬಂಧಿಸಲಾಗಿದೆ. ದೇವರ ದರ್ಶನ ಪಡೆದುಕೊಳ್ಳುವವರು ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ ಎಂದರು.

ಮಾಹಿತಿ ತಂತ್ರಜ್ಞಾನ, ಐಟಿಸೇವೆ, ದೂರವಾಣಿಸೇವೆ, ಕೈಗಾರಿಕೆ ಸಿಬ್ಬಂದಿಗಳಿಗೆ ಓಡಾಡಲು ಅವಕಾಶವಿದೆ. ಗುರುತಿನ ಚೀಟಿಯನ್ನು ತಪಾಸಣೆ ವೇಳೆ ಪ್ರದರ್ಶಿಸಬೇಕು. ಆರೋಗ್ಯ ಸೇವೆ ಎಂದಿನಂತೆ ಇರಲಿದ್ದು, ರೋಗಿಗಳು ತುರ್ತು ಸಂದರ್ಭದಲ್ಲಿ ಪರಿಚಾರಕರ ಜೊತೆಯಲ್ಲಿ ಓಡಾಡಲು ಅವಕಾಶವಿದೆ ಸೂಕ್ತ ದಾಖಲೆ ನೀಡಬೇಕು. ಮೆಡಿಕಲ್ ಶಾಪ್, ಆಸ್ಪತ್ರೆಗಳಿಗೆ ಹೋಗಿಬರಲು ಅವಕಾಶವಿದೆ. ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳ ಒಡಾಟಕ್ಕೆ ಅವ ಕಾಶವಿದೆ ಎಂದರು.

ಅಗತ್ಯವಸ್ತುಗಳ ಸೇವೆಗಳಾದ ದಿನಸಿ ಅಂಗಡಿಗಳು, ಆಹಾರ ಪದಾರ್ಥಗಳು, ಹಣ್ಣು ತರಕಾರಿ, ಮೀನು ಮಾಂಸ ಅಂಗಡಿಗಳು, ಹಾಲಿನ ಬೂತ್‍ಗಳು, ಪಶುಆಹಾರ ಅಂಗಡಿ ಗಳು ಇವುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.

ಹೋಟೆಲ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ಪಾರ್ಸಲ್‍ಗೆ ಅವಕಾಶ ನೀಡಲಾಗಿದೆ. ಕುಳಿತು ತಿನ್ನಲು ಅವಕಾಶವಿಲ್ಲ, ರೈಲು, ಬಸ್ ಪ್ರಯಾಣಿಕರು ಟಿಕೆಟ್ ತೋರಿಸಿ ಓಡಾಡಲು ಅವ ಕಾಶ ನೀಡಲಾಗುವುದು. ಮದುವೆ ಸಮಾರಂಭಗಳಲ್ಲಿ 200 ಜನಕ್ಕೆ ಅವಕಾಶ ನೀಡಲಾಗಿದೆ. ಒಳಾಂಗಣದಲ್ಲಿ 100 ಜನರಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

 

ಏನಿರಲ್ಲ:

ಸಾರ್ವಜನಿಕ ಉದ್ಯಾನವನ.

ಮದ್ಯದಂಗಡಿ.

ಪ್ರವಾಸಿಗರಿಗೆ ನಿರ್ಬಂಧ.

ಜನದಟ್ಟಣೆಗೆ ನಿರ್ಬಂಧ.

ಅನಗತ್ಯ ಸಂಚಾರ ನಿರ್ಬಂಧ.

ದೇವಸ್ಥಾನಗಳಲ್ಲಿ ವಿಶೇಷ ಸೇವೆಗಳಿಗೆ ನಿರ್ಬಂಧ.

———–

ಏನೆನಿರುತ್ತೇ:

ಅಗತ್ಯ ಸೇವೆ.(ದಿನಸಿ ಅಂಗಡಿಗಳು, ಆಹಾರ ಪದಾರ್ಥಗಳು, ಹಣ್ಣು ತರಕಾರಿ, ಮೀನು ಮಾಂಸ ಅಂಗಡಿಗಳು ಹಾಲಿನ ಬೂತ್‍ಗಳು, ಪಶು ಆಹಾರ ಅಂಗಡಿ)

ಆರೋಗ್ಯ ಸೇವೆ.

ಶಾಲಾ ಕಾಲೇಜು.

ದೇವಸ್ಥಾನ

ಮಾಹಿತಿ ತಂತ್ರಜ್ಞಾನ, ಐಟಿ ಸೇವೆ, ಕೈಗಾರಿಕೆ, ದೂರವಾಣಿ ಸೇವೆ( ಸಿಬ್ಬಂದಿ ಗುರುತಿನ ಚೀಟಿ ಕಡ್ಡಾಯ)

ತುರ್ತು ಆರೋಗ್ಯ ಸೇವೆ (ಅಗತ್ಯ ದಾಖಲೆಗಳ ಪ್ರದರ್ಶನ ಕಡ್ಡಾಯ)

ಬಸ್, ರೈಲು, ಆಟೋ, ಟ್ಯಾಕ್ಸಿ ಸೇವೆ ಲಭ್ಯ(ದಾಖಲೆ ಪ್ರದರ್ಶನ ಕಡ್ಡಾಯ)

ಹೋಟೆಲ್ ಸೇವೆ (ಪಾರ್ಸಲ್‍ಗೆ ಅವಕಾಶ)

ರೆಸ್ಟೋರೆಂಟ್ (ಶೇ.50ರಷ್ಟು ಗ್ರಾಹಕರಿಗೆ ಅವಕಾಶ)

ಮದುವೆ ಸಮಾರಂಭ 200 ಜನರಿಗೆ ಅವಕಾಶ.

ಒಳಾಂಗಣ ಕಾರ್ಯಕ್ರಮ 100 ಜನರಿಗೆ ಅವಕಾಶ.

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!