May 5, 2024

MALNAD TV

HEART OF COFFEE CITY

ಚರಂಡಿಗೆ ಬಿದ್ದ ಜಾನುವಾರು, ಹೆದ್ದಾರಿ ಪ್ರಾಧಿಕಾರದ ವಿರುದ್ದ ಸಾರ್ವಜನಿಕರ ಆಕ್ರೋಶ

1 min read

ಕೊಟ್ಟಿಗೆಹಾರ:ಹೆದ್ದಾರಿ ಅಗಲೀಕರಣದ ಭಾಗವಾಗಿ ಕೊಟ್ಟಿಗರಹಾರದ ರಸ್ತೆ ಇಬ್ಬದಿಯಲ್ಲಿ ಬಾಕ್ಸ್ ಚರಂಡಿಗಳನ್ನು ನಿರ್ಮಾಣ ಮಾಡಲಾಗಿದ್ದು ಕೆಲವೆಡೆ ಬಾಕ್ಸ್ ಚರಂಡಿಯನ್ನು ಮುಚ್ಚದೇ ಇರುವುದರಿಂದ ಜಾನುವಾರೊಂದು ಬಾಕ್ಸ್ ಚರಂಡಿಗೆ ಬಿದ್ದ ಘಟನೆ ಶನಿವಾರ ಸಂಜೆ ನಡೆದಿದೆ.

ಜಾನುವಾರೊಂದು ಬಾಕ್ಸ್ ಚರಂಡಿಗೆ ಬಿದ್ದು ಹೊರ ಬರಲಾಗದೇ ಒದ್ದಾಡುತ್ತಿದ್ದು ಸ್ಥಳೀಯರು ಹರಸಾಹಸ ಪಟ್ಟು ಜಾನುವಾರನ್ನು ಹೊರ ತೆಗೆದಿದ್ದಾರೆ.
ಬಾಕ್ಸ್ ಚರಂಡಿ ಕಾಮಗಾರಿ ಮುಗಿದು ಹಲವು ಕಾಲವಾದರೂ ಕೂಡ ಕೆಲವೆಡೆ ಬಾಕ್ಸ್ ಚರಂಡಿಗಳನ್ನು ಮುಚ್ಚಿಲ್ಲ. ಇದರಿಂದ ನಾಯಿ, ಹಸು ಮುಂತಾದ ಪ್ರಾಣಿಗಳು ಬಾಕ್ಸ್ ಚರಂಡಿಯೊಳಗೆ ಬೀಳುತ್ತಿದ್ದು ಹೆದ್ದಾರಿ ಪ್ರಾಧಿಕಾರ ಬಾಕ್ಸ್ ಚರಂಡಿಯನ್ನು ಮುಚ್ಚಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!