May 13, 2024

MALNAD TV

HEART OF COFFEE CITY

ಜನಸಂಪರ್ಕ ಸಭೆ ಕಾಟಾಚಾರಕ್ಕೆ ನಡೆಯಬಾರದು: ಶಾಸಕ ತಮ್ಮಯ್ಯ

1 min read

ಚಿಕ್ಕಮಗಳೂರು: ಜನಸಂಪರ್ಕ ಸಭೆ ಕಾಟಾಚಾರದ ಸಭೆಯಾಗಬಾರದು ಒಮ್ಮೆ ಬಂದ ಅರ್ಜಿ ಮತ್ತೆ ಅದೇ ಹೋಬಳಿ ಸಭೆಯಲ್ಲಿ ಬರಬಾರದು ಎಂದು ಶಾಸಕ ಎಚ್.ಡಿ ತಮ್ಮಯ್ಯ ಅಧಿಕಾರಿಗಳಿಗೆ ಎಚ್ಚರಿಸಿದರು. ಅರಣ್ಯ ಅಧಿಕಾರಿಗಳು ಆಕಾಶದಿಂದ ಬಂದವರಂತೆ ಆಡಬಾರದು ಎಂದು ತಮ್ಮಯ್ಯ ಗರಂ ಆದರು.

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಹೋಬಳಿ ಮಟ್ಟದ ಜನಸಂಪರ್ಕ ಸಭೆ ಮಲ್ಲೇನಹಳ್ಳಿ ಗ್ರಾಮದಲ್ಲಿ ಶಾಸಕ ಎಚ್.ಡಿ ತಮ್ಮಯ್ಯ ನೇತೃತ್ವದಲ್ಲಿ ನಡೆದಿದ್ದು ನೂರಾರು ಸಮಸ್ಯೆಗಳ ಸಾಲು ಸಾಲು ಅಹವಾಲುಗಳು ಕೇಳಿಬಂದವು. ಮೂಲಭೂತ ಸಮಸ್ಯೆಗಳು ಕುಡಿವ ನೀರು, ಚರಂಡಿ,ರಸ್ತೆ , ಸೇರಿದಂತೆ ಪೆನ್ಶನ್, ವೈದ್ಯರ ಕೊರತೆ , ಹೀಗೆ ಕುಂದುಕೊರತೆಗಳು ಗ್ರಾಮಸ್ಥರು ಕೇಳಿದರು.

ವೃದ್ದೆ ಪಾರ್ವತಮ್ಮ ಮನೆಗೆ ನೀರು ನುಗ್ಗಲು ಕಾರಣವಾದ ಅರಣ್ಯ ಇಲಾಖೆ ಡಿ.ಆರ್.ಎಫ್.ಓ ವಿರುದ್ಧ ಕೆಂಡಾಮಂಡಲರಾದ ಶಾಸಕ ತಮ್ಮಯ್ಯ ಯಾವುದೇ ಕಾರಣಕ್ಕೂ ತೊಂದರೆ ಕೊಡಬಾರದು ಎಂದು ಗದರಿದರು, ಅಲ್ಲದೆ ಸಭೆಗೆ ಬಾರದ ಅರಣ್ಯ ಇಲಾಖೆಯವರದ್ದು ಬೇಜವಾಬ್ದಾರಿ ನಿಲುವು ಕೂಡಲೇ ಅವರಿಗೆ ಶೋಕಾಸ್ ನೋಟೀಸ್ ಕೊಡಿ ನಾನು ಸರ್ಕಾರಕ್ಕೆ ಬರೆಯುತ್ತೇನೆ ಎಂದರು.

ಜನರ ಬಳಿಗೆ ಸರ್ಕಾರ ಬರುವುದಕ್ಕೆ ಈ ಜನಸಂಪರ್ಕ ಸಭೆ ನಡೆಸಲಾಗುತ್ತಿದೆ ಎಂದ ತಮ್ಮಯ್ಯ ಮಲೆನಾಡಲ್ಲಿ ಕೇಳಿಬರುವ ಒತ್ತುವರಿ ಎಂಬ ಪದವೇ ತಪ್ಪು ಎಂದು ವಾದಿಸಿದ ಅವರು ಸ್ವಲ್ಪ ಭೂಮಿ ಬದುಕಲು ಉಳುಮೆ ಮಾಡಿಕೊಂಡಿದ್ದರೆ ಅವರನ್ನು ಸಾಗುವಳಿದಾರರು ಎನ್ನಬೇಕು ಎಂದರು.

ಕಂದಾಯ ಅರಣ್ಯ ಇಲಾಖೆ ಜಂಟಿ ಸರ್ವೆ ವಿಷಯದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಮತ್ತೆ ಕೆಂಡವಾದ ಶಾಸಕ ತಮ್ಮಯ್ಯ ಅವರು ಆಕಾಶದಿಂದ ಬಂದಂತೆ ಆಡಬೇಡಿ ನೀವು ಎಲ್ಲರಂತೆ ಮನುಷ್ಯರು ಅಲ್ಲ ನಾವೇ ಬೇರೆ ಅಂದುಕೊಂಡಿದ್ದಾರೆ ಎಂದರು.

ಗ್ಯಾರೆಂಟಿಗಳನ್ನು ಏಳೇ ತಿಂಗಳಲ್ಲಿ ಜಾರಿಗೊಳಿಸಿರುವ ಸಿ.ಎಂ ಸಿದ್ದರಾಮಯ್ಯ ದೇಶದ ಯಶಸ್ವಿ ಮುಖ್ಯಮಂತ್ರಿ ಎಂದ ತಮ್ಮಯ್ಯ ವಿಶೇಷ ಅನುದಾನ 25 ಕೋಟಿ ಕೊಟ್ಟರೆ 15 ಕೋಟಿ ಗ್ರಾಮೀಣ ಭಾಗಕ್ಕೆ ಮೀಸಲಿಡುವುದಾಗಿ ಅವರು ಭರವಸೆ ನೀಡಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!