May 11, 2024

MALNAD TV

HEART OF COFFEE CITY

ಅಬ್ಬರಿಸಿ ಬೊಬ್ಬಿರಿಯುತ್ತಿರೋ ಮಳೆ ನಿಲ್ಲಲೆಂದು ಪ್ರಾರ್ಥನೆ, ಕಿಗ್ಗಾದಲ್ಲಿರುವ ಋಷ್ಯಶೃಂಗೇಶ್ವರನಿಗೆ ಶತರುದ್ರಾಭಿಷೇಕ ಹಾಗೂ ವಿಶೇಷ ಪೂಜೆ,

1 min read

ಚಿಕ್ಕಮಗಳೂರು : ಮಲೆನಾಡಿಗರು ಮಳೆದೇವರೆಂದೇ ಖ್ಯಾತಿಯಾಗಿರುವ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಕಿಗ್ಗಾದಲ್ಲಿರುವ ಋಷ್ಯಶೃಂಗೇಶ್ವರನಿಗೆ ಶತರುದ್ರಾಭಿಷೇಕ ಹಾಗೂ ವಿಶೇಷ ಪೂಜೆ ಸಲ್ಲಿಸಿ ಮಲೆನಾಡು ಸೇರಿದಂತೆ ರಾಜ್ಯಾದ್ಯಂತ ಅಬ್ಬರಿಸಿ ಬೊಬ್ಬಿರಿಯುತ್ತಿರೋ ಮಳೆ ನಿಲ್ಲಲೆಂದು ಪ್ರಾರ್ಥಿಸಿಕೊಂಡಿದ್ದಾರೆ.

ಈ ಹಿಂದೆ ರಾಜ್ಯಕ್ಕೆ ಬರಗಾಲ ಆವರಿಸಿದಾಗ ಈ ಋಷ್ಯಶೃಂಗನಿಗೆ ಪೂಜೆ ಸಲ್ಲಿಸಿದ ಮೇಲೆ ರಾಜ್ಯದಲ್ಲಿ ಸಾಕಷ್ಟು ಮಳೆ ಬಂದಿರೋ ಉದಾಹರಣೆ ಇದೆ. ಅತಿವೃಷ್ಟಿ ಸಂದರ್ಭದಲ್ಲಿ ಪೂಜೆ ಸಲ್ಲಿಸಿದಾಗ ಮಳೆ ನಿಂತ ಉದಾಹರಣೆಯೂ ಸಾಕಷ್ಟಿದೆ. ಜೊತೆಗೆ, ಈ ಋಷ್ಯಶೃಂಗ ಆಸ್ಟ್ರೇಲಿಯಾದಲ್ಲೂ ಮಳೆ ತರಿಸಿದ ದೇವರು. ಎರಡು ವರ್ಷಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ಕಾಡ್ಗಿಚ್ಚಿಗೆ ಅರಣ್ಯ ನಾಶವಾಗಿ, ಪ್ರಾಣಿ ಪಕ್ಷಿಗಳು ಸಾವನ್ನಪ್ಪಿದಾಗ ಭಾರತೀಯ ಮೂಲದವರು ಆಸ್ಟ್ರೇಲಿಯಾದಲ್ಲಿ ಮಳೆಬರಲೆಂದು ಇಲ್ಲಿ ಪೂಜೆ ಮಾಡಿಸಿದ್ದರು. ಬಳಿಕ ಅಲ್ಲೂ ಮಳೆ ಸುರಿದಿತ್ತು. ಹಾಗಾಗಿ, ಮಲೆನಾಡಲ್ಲಿ ಫೆಬ್ರವರಿಯಿಂದಲೂ ನಿರಂತರ ಮಳೆಯಾಗುತ್ತಿದ್ದು ಬೆಳೆಗಳು ಮಣ್ಣು ಪಾಲಾಗಿ ಜನ ಕಂಗಾಲಾಗಿದ್ದಾರೆಂದು ಮಲೆನಾಡಿಗರು ಮಳೆ ನಿಲ್ಲಿಸೋ ದೇವ ಎಂದು ಈ ಋಷ್ಯಶೃಂಗನಿಗೆ ಶತರುದ್ರಾಭಿಷೇಕ ಮಾಡಿಸಿ ಬೇಡಿಕೊಂಡಿದ್ದಾರೆ.

 

 

ಕಾಫಿನಾಡಲ್ಲಿ ಮಳೆಗಾಲ ಆರಂಭವಾಗೋದೆ ಮಾರ್ಚ್ ಕೊನೆ ವಾರದಲ್ಲಿ. ಆದ್ರೆ, ಈ ವರ್ಷ ಫೆಬ್ರವರಿಯಿಂದಲೇ ಆರಂಭವಾದ ಮಳೆ ಇಂದಿಗೂ ನಿಂತಿಲ್ಲ. ಕಳೆದ 11 ತಿಂಗಳಿಂದ ನಿರಂತವಾಗಿ ಮಳೆ ಸುರಿಯುತ್ತಿರುವುದರಿಂದ ಜಿಲ್ಲೆ ಆಹಾರ ಬೆಳೆ ಹಾಗೂ ಪ್ರಮುಖ ವಾಣಿಜ್ಯ ಬೆಳೆಗಳು ಸಂಪೂರ್ಣ ಹಾಳಾಗಿದೆ. ಕೆಲಭಾಗದಲ್ಲಿ ಕಾಫಿ ಗಿಡದಲ್ಲೇ ಕೊಳೆಯುತ್ತಿದ್ರೆ, ಹಲವೆಡೆ ನೆಲಕ್ಕುದುರಿದೆ. ನೆಲಕ್ಕುದುರಿರೋ ಕಾಫಿಯನ್ನ ಆಯುವುದಕ್ಕೂ ಮಳೆ ಬಿಡುತ್ತಿಲ್ಲ. ಮಳೆಯಲ್ಲೇ ನೆನೆದುಕೊಂಡು ಅಳಿದುಳಿದ ಕಾಫಿ ಕಿತ್ತರೆ ಒಣಗಿಸೋದಕ್ಕೂ ಬಿಸಿಲಿಲ್ಲ. ಅಡಿಕೆಯೂ ಕೊಳೆತು ಮಣ್ಣು ಪಾಲಾಗುತ್ತಿದೆ. ಹಾಗಾಗಿ, ಮಲೆನಾಡಿಗರು ಒಲೆ ಮೇಲೆ ಕಾಫಿ, ಅಡಿಕೆಯನ್ನ ಒಣಗಿಸುವ ಸ್ಥಿತಿ ನಿರ್ಮಾಣವಾಗಿದೆ. ಶೃಂಗೇರಿ, ಕೊಪ್ಪ, ಕಳಸ ಭಾಗದಲ್ಲಿ ಮಳೆ ನೀರಿನ ಜೊತೆ ಅಡಿಕೆ ಕೊಚ್ಚಿ ಹೋಗುತ್ತಿದೆ. ಹಾಗಾಗಿ, ಈ ಹಿಂದೆ ಋಷ್ಯಶೃಂಗ ಬೇಕೆಂದಾಗ ಮಳೆ ಸುರಿಸಿದ್ದಾನೆ. ಬೇಡವಾದಗ ನಿಲ್ಲಿಸಿದ್ದಾನೆ. ಹಾಗಾಗಿ, ಮಲೆನಾಡಿಗರು ಮಳೆ ನಿಲ್ಲಿಸೋ ದೇವ ಎಂದು ಋಷ್ಯಶೃಂಗನಿಗೆ ಕೈಮುಗಿದಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!