May 17, 2024

MALNAD TV

HEART OF COFFEE CITY

ನೀತಿ ಮತ್ತು ಜಾತಿ ಸಂಘರ್ಷದಲ್ಲಿ ನೀತಿ, ಅಭಿವೃದ್ಧಿ ಹಾಗೂ ನಡವಳಿಕೆಗೆ ಗೆಲುವಾಗುತ್ತದೆ-ಸಿ.ಟಿ.ರವಿ

1 min read

 ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ನೀತಿ ಮತ್ತು ಜಾತಿ ಸಂಘರ್ಷದಲ್ಲಿ ನೀತಿ, ಅಭಿವೃದ್ಧಿ ಹಾಗೂ ನಡವಳಿಕೆಗೆ ಗೆಲುವಾಗುತ್ತದೆ ಎಂದು ಬಿಜೆಪಿ ಅಭ್ಯರ್ಥಿ, ಪಕ್ಷದ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅಭಿಪ್ರಾಯಿಸಿದರು.
 ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಮ್ಮ ಕ್ಷೇತ್ರದಲ್ಲಿ ೩೪ ಗ್ರಾ.ಪಂ.ಗಳಿವೆ ಅವುಗಳ ಮತಗಟ್ಟೆ ಸಮೀಕ್ಷೆ ಮೇರೆಗೆ ನಮಗೆ ಅಷ್ಟೂ ಪಂಚಾಯ್ತಿಗಳಲ್ಲಿ ಮುನ್ನಡೆ ಸಿಗಲಿದೆ. ನಗರ ಯಾಪ್ತಿಯ ೩೫ ವಾರ್ಡ್ಗಳ ಪೈಕಿ ೨೦ ವಾರ್ಡ್ಗಳಲ್ಲಿ ಬಿಜೆಪಿಗೆ ಸ್ಪಷ್ಟ ಮುನ್ನಡೆ ಇದೆ ಎಂದು ತಿಲಿಸಿದರು.ಉಳಿದ ೧೫ ವಾರ್ಡ್ಗಳ ಪೈಕಿ ೯ ವಾರ್ಡ್ಗಳಲ್ಲಿ ಹಿನ್ನಡೆ ಇದ್ದರೆ ಉಳಿದ ೬ ವಾರ್ಡ್ಗಳಲ್ಲಿ ಸಮಬಲ ಇದೆ ಎಂದು ವಿವರಿಸಿದರು.ಒಟ್ಟು ಚಲಾವಣೆಗೊಂಡಿರುವ ಮತಗಳ ಪೈಕಿ ಬಿಜೆಪಿ ೯೫ ಸಾವಿರ ಮತಗಳನ್ನು ಗಳಿಸಲಿದೆ. ವಾತಾವರಣ ಎಲ್ಲೆಡೆ ಚೆನ್ನಾಗಿದೆ. ಅಂದಾಜು ೨೮ ರಿಂದ ೩೦ ಸಾವಿರ ಮತಗಳ ಮುನ್ನಡೆಯನ್ನು ನಿರೀಕ್ಷೆ ಮಾಡಿದ್ದೇವೆ ಎಂದರು.ಫಲಿತಾAಶ ಬರುವ ಮುನ್ನವೇ ಕಾಂಗ್ರೆಸಿಗರು ಸಭೆಗಳ ಮೇಲೆ ಸಭೆ ಮಾಡುತ್ತಿರುವುದನ್ನು ನಾನು ಗಮನಿಸಿದ್ದೇನೆ. ಎಲ್ಲಾ ಕ್ಷೇತ್ರದ ಫಲಿತಾಂಶ ಬಂದ ಮೇಲೆ ಇವಿಎಂ, ಚುನಾವಣಾ ಆಯೋಗವನ್ನು ದೂರಲು ಆರಂಭಿಸುತ್ತಾರೆ ಎಂದು ಟೀಕಿಸಿದರು.ಅವರು ಗೆದ್ದರೆ ಪ್ರಜಪ್ರಭುತ್ವದ ಗೆಲುವು ಎನ್ನುತ್ತಾರೆ. ಅವರು ಸೋತರೆ ಆಯೋಗ, ಸರ್ಕಾರದ ಮೇಲೆ ದೂರುತ್ತಾರೆ. ಎರಡೂ ಹೇಳಿಕೆಗಳನ್ನು ಅವರು ಸಿದ್ಧಪಡಿಸಿಕೊಂಡಿರುತ್ತಾರೆ ಎಂದರು.
ಈ ಬಾರಿಯೂ ಬಿಜೆಪಿಯದ್ದೇ ಸರ್ಕಾರ, ಪೂರ್ಣ ಬಹುಮತ ಬರುತ್ತದೆ. ಕುಮಾರಸ್ವಾಮಿ ಮಾತನಾಡುವುದು ಮಾತ್ರ ಕನ್ನಡ, ಕರ್ನಾಟಕದ ಬಗ್ಗೆ ಮಾತ್ರ ಉಳಿದದ್ದೆಲ್ಲ ಸಿಂಗಾಪುರವೇ ಎಂದು ಲೇವಡಿ ಮಾಡಿದರು. ನಾವು ಬೇರೆ ಯಾರೊಂದಿಗೂ ಕೈ ಜೋಡಿಸುವ ಪ್ರಶ್ನೆ ಬರುವುದಿಲ್ಲ. ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸುತ್ತದೆ ಎಂದು ಹೇಳಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!