May 2, 2024

MALNAD TV

HEART OF COFFEE CITY

ಸ್ವೀಪ್ ಸಮಿತಿ ಹಮ್ಮಿಕೊಂಡ ಕಾರ್ಯಕ್ರಮ ಗಳಿಂದ ಮತದಾನ ಯಶಸ್ವಿಯಾಗಿದೆ -ಡಾ.ಜಿ.ಪ್ರಭು

1 min read

ಚುನಾವಣಾ ಹಬ್ಬದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕೆಂಬ ಕಾರಣಕ್ಕೆ ಸ್ವೀಪ್ ಸಮಿತಿ ಹಮ್ಮಿಕೊಂಡ ಹತ್ತಾರು ಕಾರ್ಯಕ್ರಮಗಳು ಯಶಸ್ವಿಯಾದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಈ ವರೆಗಿನ ಗರಿಷ್ಠ ಪ್ರಮಾಣದ ಶೇ.೮೦ ರಷ್ಟು ಮತದಾನ ನಡೆಯಲು ಸಾಧ್ಯವಾಗಿದ್ದು, ಇದು ಹೆಮ್ಮೆಯ ವಿಷಯ ಎಂದು ಸ್ವೀಪ್ ಸಮಿತಿಅಧ್ಯಕ್ಷರೂಜಿ.ಪಂ.ಮುಖ್ಯಕಾರ್ಯನಿವಾಹಕ ಅಧಿಕಾರಿಗಳೂ ಆದ ಡಾ.ಜಿ.ಪ್ರಭು ತಿಳಿಸಿದರು.ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಎಲ್ಲಾ ತಾ.ಪಂ. ಇಓ ಗಳು, ಗ್ರಾಮ ಪಂಚಾಯ್ತಿಗಳು, ಜಿ.ಪಂ. ವ್ಯಾಪ್ತಿಯಲ್ಲಿ ಬರುವ ಎಲ್ಲಾ ಇಲಾಖೆಗಳಿಗೆ ಚುನಾವಣಾ ಆಯೋಗ ಗುರುತರವಾದ ಜವಾಬ್ದಾರಿಯ್ನು ನೀಡಿತ್ತು. ಮತದಾರರಿಗೆ ಮತದಾನ ಕುರಿತು, ಅರಿವು, ಜಾಗೃತಿ ಮೂಲಕ ಚುನಾವಣೆಯಲ್ಲಿ ಭಾಗೀದಾರರನ್ನಾಗಿಸುವ ಕಾರ್ಯವನ್ನು ಅತ್ಯಂತ ವ್ಯಾಪಕವಾಗಿ ಮಾಡಿದ್ದೆವೆ ಎಂದರು.ಪ್ರಪ್ರಥಮವಾಗಿ ಯುವ ಮತದಾರರನ್ನು ನೊಂದಾಯಿಸುವ ಕಾರ್ಯಕ್ರಮವನ್ನು ಚುರುಕಾಗಿ ಮಾಡಿದ್ದೇವೆ. ಇದರ ಕೀರ್ತಿ ಎಲ್ಲಾ ಸಹಾಕಯಕ ಚುನಾವಣಾಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಸಲ್ಲಬೇಕಾಗುತ್ತದೆ ಎಂದರು.
ಪ್ರತಿ ಕಾಲೇಜಿಗೆ ಹೋಗಿ ೧೮ ವರ್ಷ ಮೀರಿದವರನ್ನು ಮನವೊಲಿಸಿ ಮತದಾರರ ಪಟ್ಟಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಫಲವಾಗಿ ೧೮೫೦೦ ಮಂದಿ ಹೊಸ ಮತದಾರರು ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ಸಾಧ್ಯವಾಯಿತು. ಇದು ಮೊದಲ ಯಶಸ್ಸು ಎಂದರು.
ಇವಿಎoವಿಚಾರದಲ್ಲಿ ಸಾರ್ವಜನಿಕ ವಲಯದಲ್ಲಿ ಇದ್ದ ಊಹಾಪೋಹಗಳನ್ನು ಕಂಡಿದ್ದೇವೆ. ಈ ಹಿನ್ನೆಲೆಯಲ್ಲಿ ಇದು ಅತ್ಯಂತ ಪಾರದರ್ಶಕ ಮತ್ತು ಸುವ್ಯವಸ್ಥಿತವಾದದ್ದು ಇವಿಎಂಗಳು ಎನ್ನುವುದನ್ನು ಮನವರಿಕೆ ಮಾಡುವ ಸಲುವಾಗಿ ವ್ಯಾಪಕವಾಗಿ ಜನ ಜಾಗೃತಿ ಮೂಡಿಸಲಾಗಿದೆ. ಸುಮಾರು ೬ ಲಕ್ಷ ಜನರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.

 

 

 

 

ಅತೀ ಹೆಚ್ಚು ಜನ ಮತದಾರರು ಪ್ರಜಾಪ್ರಬುತ್ವದ ಹಬ್ಬದಲ್ಲಿ ಪಾಲ್ಗೊಳ್ಳಬೇಕು ಎನ್ನುವುದು ನಮ್ಮ ಅಂತಿಮ ಉದ್ದೇಶವಾಗಿತ್ತು. ಆ ನಿಟ್ಟಿನಲ್ಲಿ ಕಳೆದ ಒಂದೂವರೆ ತಿಂಗಳಿನಿ0ದ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ಜಿ.ಪಂ.ವ್ಯಾಪ್ತಿಗೆ ಬರುವ ಎಲ್ಲಾ ಇಲಾಖೆಗಳು ಸಕ್ರೀಯವಾಗಿ ತೊಡಗಿಸಿಕೊಂಡು ಮತದಾನದ ಕುರಿತು ಜಾಗೃತಿ ಮೂಡಿಸಲಾಗಿದೆ ಎಂದರು.ಇದೇ ಕಾರ್ಯಕ್ರಮದಡಿ ಮತಗಟ್ಟೆಗಳಾಗಿದ್ದ ಸರ್ಕಾರಿ ಶಾಲೆಗಳನ್ನು ಅಂದಗೊಳಿಸಲಾಗಿದೆ. ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಕಡಿಮೆ ಮತದಾನ ಆದ ಕಡೆಗಳಲ್ಲಿ ವಿಶೇಷ ತಂಡ ರಚಿಸಿ ಅರಿವು ಮೂಡಿಸಲಾಗಿದೆ ಎಂದು ತಿಳಿಸಿದರು.ತಮ್ಮಮೊಂದಿಗೆ ಜಿಲ್ಲಾ ಚುನಾವಣಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟ ಹಾಗೂ ಗ್ರಾ.ಪಂ.ಮಟ್ಟದ ಅಧಿಕಾರಿ ನೌಕರರು ನಾವೆಲ್ಲ ಒಂದು ಎಂದು ಭಾವಿಸಿ ಕೈಜೋಡಿಸಿದ ಕಾರಣಕ್ಕೆ ಯಶಸ್ವಿಗೆ ಕಾರಣವಾಗಿದೆ. ಅಲ್ಲದೆ ದೊಡ್ಡ ಸಂಖ್ಯೆಯಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಜಿಲ್ಲೆಯ ಎಲ್ಲಾ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಎAಸಿಸಿ ಅನುಷ್ಠಾನದ ಎಸ್‌ಎಸ್‌ಟಿ, ಎಫ್‌ಎಸ್‌ಟಿ ತಂಡಗಳು ಸೇರಿ ಎಲ್ಲಾ ಸಿಬ್ಬಂದಿಗಳು ಪಾಲ್ಗೊಂಡಿದ್ದಾರೆ. ಅವರ ಸೇವೆ ಸ್ಮರಣೀಯ, ಅವರೆಲ್ಲರ ಕಾರ್ಯವನ್ನು ಜವಾಬ್ದಾರಿಯುತವಾಗಿ ನಿಭಾಯಿಸಿದ್ದಾರೆ. ಎಂದರು.
ವಿಶೇಷವಾಗಿ ನಾವೇ ಸ್ವಯಂ ಪ್ರೇರಿತವಾಗಿ ನಕ್ಸಲ್ ಬಾಧಿತ ಪ್ರದೇಶದಲ್ಲಿ ಹಾಗೂ ಕಡಿಮೆ ಮತದಾನ ಆಗಿರುವ ಪ್ರದೇಶದಲ್ಲಿ ಈ ಬಾರಿ ಮತದಾನ ಪ್ರಮಾಣ ಹೆಚ್ಚಿಸುವುದು, ೧೦೦ ವರ್ಷ ತುಂಬಿದ ಮತದಾರರಿಗೆ ಗೌರವಿಸಿ ಮತದಾನಕ್ಕೆ ಕರೆತರುವುದು, ಸುಮಾರು ೯೫೦೦ ವಿಕಲ ಚೇತನರಿಗೆ ಗ್ರಾ.ಪಂ.ವಾರು ವಾಹನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಯುವಮತದಾರರಿಗೆ ಆಮಂತ್ರಣ ಕೊಟ್ಟು ಉತ್ಸಾಹ ತುಂಬಲಾಗಿದೆ. ಎಲ್ಲಾ ವೈಶಿಷ್ಠಪೂರ್ಣ ಕಾರ್ಯಗಳಿಗೆ ಹೆಚ್ಚು ಸ್ಪಂದನೆ ಸಿಕ್ಕಿದೆ ಎಂದರು.
ಮತಗಟ್ಟೆಗಳ ಅಂದ, ಚಂದ, ಮೂಲ ಸೌಕರ್ಯಗಳ ಬಗ್ಗೆ ಮತದಾರರಿಂದ ಉತ್ತಮ ಅಭಿಪ್ರಾಯಗಳು ವ್ಯಕ್ತವಾಗಿದೆ. ಇನ್ನೂ ಸ್ವಲ್ಪ ಪ್ರಮಾಣದ ಮತದಾನ ಹೆಚ್ಚಾಬೇಕಿತ್ತು. ಆದರೂ ಈ ವರೆಗಿನ ಗರಿಷ್ಠ ಮಟ್ಟ ಮುಟ್ಟಿದ್ದಕ್ಕೆ ಹೆಮ್ಮೆ ಇದೆ ಎಂದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!