May 14, 2024

MALNAD TV

HEART OF COFFEE CITY

ನಾರಯಣಗುರು ಸ್ತಬ್ಧ ಚಿತ್ರ ತಿರಸ್ಕೃತ: ಕ್ಷಮೆಯಾಚನೆಗೆ ಭೋಜೇಗೌಡ ಆಗ್ರಹ

1 min read

ಚಿಕ್ಕಮಗಳೂರು: ದೆಹಲಿಯಲ್ಲಿ ಗಣರಾಜ್ಯೋತ್ಸವ ಹಿನ್ನಲೆಯಲ್ಲಿ ಜ.26ರಂದು ನಡೆಯುವ ಸ್ತಬ್ಧ ಚಿತ್ರಗಳ ಪ್ರದರ್ಶನಕ್ಕೆ ಕೇರಳ ರಾಜ್ಯ ಕಳುಹಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಅವರ ಸ್ತಬ್ಧ ಚಿತ್ರವನ್ನು ತಿರಸ್ಕರಿಸುವ ಮೂಲಕ ಕೇಂದ್ರ ಸರ್ಕಾರ ಸಮಾಜ ಸುಧಾರಣೆಗೆ ಶ್ರಮಿಸಿದ ಮುತ್ಸದ್ಧಿ ಸಂತರೊಬ್ಬರಿಗೆ ಹಾಗೂ ಅವರ ಅನುಯಾಯಿಗಳಿಗೆ ಅಪಮಾನ ಮಾಡಿದ್ದು, ಕೇಂದ್ರ ಸರ್ಕಾರ ಕೂಡಲೇ ದೇಶದ ಜನರಲ್ಲಿ ಕ್ಷಮೆಯಾಚಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ  ಮಾತನಾಡಿ,ಅವರು ಗಣರಾಜ್ಯೋತ್ಸದ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ನಡೆಯುವ ಪೆರೇಡ್‍ನಲ್ಲಿ ದೇಶದ ಎಲ್ಲ ರಾಜ್ಯಗಳ ಸ್ತಬ್ಧ ಚಿತ್ರಗಳ ಪ್ರದರ್ಶನ ನಡೆಯುತ್ತದೆ. ಇದಕ್ಕಾಗಿ ಕೇಂದ್ರ ಸರ್ಕಾರ ಸಮಿತಿಯೊಂದನ್ನು ನೇಮಿಸಿದ್ದು, ಈ ಸಮಿತಿಗೆ ಎಲ್ಲಾ ರಾಜ್ಯಗಳು ಕಳುಹಿಸುವ ಸ್ತಬ್ಧ ಚಿತ್ರಗಳನ್ನು ಆಯ್ಕೆ ಮಾಡುವ ಅಧಿಕಾರ ಇರುತ್ತದೆ. ಅದರಂತೆ ಈ ಬಾರಿ ಎಲ್ಲ ರಾಜ್ಯಗಳು ಗಣರಾಜ್ಯೋತ್ಸವ ಪೆರೇಡ್‍ಗೆ ತಮ್ಮ ರಾಜ್ಯಕ್ಕೆ ಸಂಬಂಧಿಸಿದ ಸ್ತಬ್ಧ ಚಿತ್ರಗಳನ್ನು ಕಳುಹಿಸಿದ್ದವು ಇದರಲ್ಲಿ ಕೇರಳ ರಾಜ್ಯವು ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ಕಳುಹಿಸಿದ್ದು, ಈ ಸ್ತಬ್ಧ ಚಿತ್ರವನ್ನು ಕೇಂದ್ರದ ಸಮಿತಿಯು ತಿರಸ್ಕರಿಸುವ ಮೂಲಕ ದೇಶದಲ್ಲಿರುವ ಶೋಷಣೆ, ಜಾತೀಯತೆ, ಅಸ್ಪøಶ್ಯತೆ, ಮೂಢನಂಬಿಕೆ ವಿರುದ್ಧ ಹೋರಾಡಿದ ಮಹಾನ್ ಸಂತರೊಬ್ಬರಿಗೆ ಅವಮಾನ ಮಾಡಿದೆ ಎಂದು ಆರೋಪಿಸಿದರು.

ಅಸ್ಪøಶ್ಯತೆ, ಮಹಿಳಾ ಶೋಷಣೆ ವಿರುದ್ಧ ನಾರಾಯಣಗುರು ಅವರ ಹೋರಾಟ ಜಗತ್ತಿಗೆ ತಿಳಿದಿದೆ. ಸಮಾಜ ಸುಧಾರಣೆಯಲ್ಲಿ ಅವರ ಕೊಡುಗೆ ಅಪಾರವಾಗಿದೆ. ಈ ಕಾರಣಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ಅವರನ್ನು ಒಂದು ಸಮುದಾಯದ ಜನರು ದೇವರೆಂದೇ ಆರಾಧಿಸುತ್ತಾರೆ. ನಾರಾಯಣ ಗುರುಗಳ ಸಾಧನೆ, ತತ್ವ, ಸಿದ್ಧಾಂತಗಳು ಇಂದಿನ ಸಮಾಜಕ್ಕೆ ಮಾದರಿಯಾಗಿದ್ದು, ಅವರ ಜೀವನ ಸಾಧನೆ, ವ್ಯಕ್ತಿತ್ವದಿಂದಾಗಿ ಎಲ್ಲ ಸಮುದಾಯದ ಜನರಿಗೂ ಅವರು ಆದರ್ಶಪ್ರಾಯರಾಗಿದ್ದಾರೆಂದರು.
ಇಂತಹ ಮಹಾನ್ ಸಮಾಜ ಸುಧಾರಕರೊಬ್ಬರ ಸ್ತಬ್ಧ ಚಿತ್ರವನ್ನು ಕೇಂದ್ರ ಸರ್ಕಾರ ತಿರಸ್ಕರಿಸುವ ಮೂಲಕ ಕೇರಳ ರಾಜ್ಯದ ಜನರಿಗೆ ಅಪಮಾನ ಮಾಡಿದೆ. ಈ ಅಪಮಾನ ಇಡೀ ದೇಶದ ಜನರಿಗಾದ ಅಪಮಾನವಾಗಿದೆ ಎಂದು ನುಡಿದರು

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!