ಬಿಜಿಎಸ್ ಪದವಿ ಪೂರ್ವ ಕಾಲೇಜು ಶೇ.95.05 ರಷ್ಟು ಫಲಿತಾಂಶ
1 min readಚಿಕ್ಕಮಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರದ ಬಿಜಿಎಸ್ ಪದವಿ ಪೂರ್ವ ಕಾಲೇಜು ಶೇ.95.05 ರಷ್ಟು ಫಲಿತಾಂಶ ಗಳಿಸಿದೆ.ಕಾಲೇಜಿನ 189 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಅವರಲ್ಲಿ 180 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಅತ್ಯುನ್ನತ ಶ್ರೇಣಿಯಲ್ಲಿ 71 ವಿದ್ಯಾರ್ಥಿಗಳು ಹಾಗೂ 97 ವಿದ್ಯಾರ್ಥಿ ಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಹೊಂದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಸಿ.ವಿ.ವಿಶ್ವಾಸ್ ಶೇ.98.66 ಅಂಕಗಳಿಸಿ ಜಿಲ್ಲೆಗೆ ದ್ವೀತಿಯ ಸ್ಥಾನ ಗಳಿಸಿ ದ್ದಾನೆ. ಕೆ.ಎಸ್.ಸಚಿನ್ ಶೇ.98.16, ಎಂ.ಎನ್.ಪ್ರೀತಮ್ ಶೇ.97.83, ವಾಣಿಜ್ಯ ವಿಭಾಗದಲ್ಲಿ ಜೀವನ್ ಸಿ.ಎಲ್.ಸಾಗರ್ ಶೇ. 97.05, ವಿನಿತಾ ರೋಡ್ರಿಗ್ರಸ್ ಶೇ.97.33, ಖುಷಿ ಪುಟ್ಟಣ್ಕರ್ ಶೇ.96.33 ರಷ್ಟು ಅಂಕಗಳಿಸಿದ್ದಾರೆ.
ಪರೀಕ್ಷಾ ಫಲಿತಾಂಶ ಹೊರ ಬೀಳುತ್ತಿದ್ದಂತೆ ಕಾಲೇಜಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಂಭ್ರಮ ಗರಿಗೆದರಿತ್ತು. ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರಾಂಶು ಪಾಲ ಜೆ.ಜಿ.ಸುರೇಂದ್ರ ಸಿಹಿ ತಿನ್ನಿಸಿ ಸಂಭ್ರಮಿಸಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g