May 17, 2024

MALNAD TV

HEART OF COFFEE CITY

ದೇಶದ ಶ್ರೇಯೋಭಿವೃದ್ಧಿಗೆ ಪ್ರಧಾನಿ ಹಗಲಿರುಳು ಶ್ರಮಿಸುತ್ತಿದ್ದಾರೆ: ರಾಜ್ಯಸಭಾ ಸದಸ್ಯ ಜಗ್ಗೇಶ್

1 min read

ಚಿಕ್ಕಮಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 135ಕೋಟಿ ಜನರ ಶ್ರೇಯೋಭಿ ವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ವಿರೋಧ ಪಕ್ಷದವರಿಗೆ ಟೀಕೆ ಮಾಡಲು ವಿಷಯ ಗಳಿಲ್ಲದೇ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ರಾಜ್ಯಸಭೆ ಸದಸ್ಯ ಜಗ್ಗೇಶ್ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಬುಧವಾರ ನಗರದಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಆಯೋಜಿಸಿದ್ದ ವಿಕಾಸ ತೀರ್ಥ ಬೈಕ್ ರ್ಯಾಲಿ ಉದ್ಘಾಟಿಸಿ, ಆಜಾದ್ ಪಾರ್ಕ್ ವೃತ್ತದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದರು.ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವ ಮುಂಚೇ ಪ್ರಧಾನಮಂತ್ರಿ ಆಡಂಬರದ ಜೀವನ ನಡೆಸುತ್ತಿದ್ದರು. ಅವರ ಸುತ್ತಮುತ್ತ ಹೊಗಳು ಭಟ್ಟರು ಇರುತ್ತಿದ್ದರು. ಅನೇಕ ವರ್ಷಗಳಿಂದ ಇದೇ ನಡೆದುಕೊಂಡು ಬಂದಿತ್ತು ಎಂದರು.ಇಂದು ಕುಟುಂಬ ನಿರ್ವಹಣೆಯೇ ಕಷ್ಟ ಇರುವಂತ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ದೇಶದ 135 ಕೋಟಿ ಜನರಿಗೆ ಎಳ್ಳಷ್ಟು ತೊಂದರೆಯಾಗದಂತೆ ಶ್ರದ್ಧೆಯಿಂದ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯತ್ತಿದ್ದಾರೆ ಎಂದು ಬಣ್ಣಿಸಿದರು.
ವಿಪಕ್ಷದಲ್ಲಿ ಒಬ್ಬರನ್ನು ನಾಯಕ ಎಂದು ಬಿಂಬಿಸುತ್ತಿದ್ದಾರೆ. ಅವರು ಏನು ಹೇಳುತ್ತಾ ರೆಂದು ಗೋತ್ತಾಗುವುದಿಲ್ಲ, ಬಾಯಿಗೂ ತಲೆಗೂ ಸಂಪರ್ಕವೇ ಇಲ್ಲ. ಅವರಲ್ಲಿ ನಾಯಕತ್ವ ಗುಣವೇ ಇಲ್ಲ ವಿಪಕ್ಷ ನಾಯಕ ರಾಹುಲ್ ಗಾಂಧಿಯನ್ನು ಚೇಡಿಸಿದರು.

ಕಾಯ, ವಾಚ, ಮನಸ್ಸಾ ಶ್ರದ್ಧೆಯಿಂದ ಕೆಲಸ ಮಾಡಿದರೇ ಅಧಿಕಾರ ಹುಡುಕಿಕೊಂಡು ಬರುತ್ತದೆ. ಒತ್ಲಾ ಹೊಡೆದರೇ ಏನು ಬರುವುದಿಲ್ಲ ಎಂದ ಅವರು, ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾದ ಬಳಿಕ ಭಾರತ ವಿಶ್ವಮಟ್ಟದಲ್ಲಿ ಅಗ್ರಸ್ಥಾನ ಪಡೆದಿದೆ ಎಂದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ದೇಶ ದೊಡ್ಡದು, ಕಾಂಗ್ರೆಸ್‍ನವರಿಗೆ ಕುಟುಂ ಬ ದೊಡ್ಡದು ಎಂದರು.
ಕಾಂಗ್ರೆಸ್‍ನವರಲ್ಲಿ ನಾನು ತಿನ್ನುತ್ತೇನೆ ನೀವು ತಿನ್ನಿ ಎನ್ನುವಂತೆ ಹಗರಣಗಳ ಮೇಲೆ ಹಗರಣ ಮಾಡಿದರು. ಆಡುಮುಟ್ಟದ ಸೊಪ್ಪಿಲ್ಲ, ಕಾಂಗ್ರೆಸ್ ಮಾಡದ ಹಗರಣವಿಲ್ಲ. ಕಾಂಗ್ರೆಸ್‍ನವರು ಸ್ಕ್ಯಾಮ್ ಮಾಡಿದರೇ, ಮೋದಿ ಅವರು ಸ್ಕೀಮ್ ಮಾಡಿದರು ಎಂದು ಟೀಕಿಸಿದರು.
ಆಲೂಗಡ್ಡೆ ಬಿತ್ತಿ ಚಿನ್ನ ತಗೆಯುವ ಕಲೆಯನ್ನು ಕಾಂಗ್ರೆಸ್‍ನವರು ಕರಗತ ಮಾಡಿ ಕೊಂಡಿದ್ದಾರೆ. ಕಾಂಗ್ರೆಸ್‍ನ ಬಹುತೇಕ ನಾಯಕರು ಜೈಲಿನಲ್ಲಿದ್ದಾರೆ. ಕೆಲವರು ಬೇಲ್‍ನಲ್ಲಿ ದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಚಿಕ್ಕಮಗಳೂರು ನಗರದಲ್ಲಿ ರಸ್ತೆ ಕಾಮಗಾರಿ ಬರದಿಂದ ನಡೆಯುತ್ತಿದೆ. ಚಿಕ್ಕಮಗಳೂರು ಬೇಲೂರು ಹಾಸನ ರೈಲು ಸಂಪರ್ಕ ಸರ್ವೇ ಕಾರ್ಯ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ. ತರೀಕೆರೆ, ಕಡೂರು, ಚಿಕ್ಕಮಗಳೂರು ಕೆರೆ ತುಂಬಿಸುವ ಮೊದಲ ಹಂತದ ಕಾಮಗಾರಿ ನಡೆಯುತ್ತಿದೆ ಎಂದರು.
ಕಾಂಗ್ರೆಸ್‍ನವರು ಹಳಿ ಇಲ್ಲದೇ ರೈಲು ಬಿಟ್ಟರು, ನಾವು ಹಳಿ ಮೇಲೆ ರೈಲು ಬಿಡುವ ಕೆಲಸ ಮಾಡುತ್ತಿದ್ದೇವೆ. ಸಿದ್ಧರಾಮಯ್ಯ ಅವರಿಗೆ ಸುಳ್ಳೇ ಮನೆ ದೇವರು ಎಂದ ಅವರು ಬಿಜೆಪಿ ಅಭಿವೃದ್ಧಿ ಕಾರ್ಯಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಬಹಿರಂಗಸಭೆಗೂ ಮುನ್ನಾ ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಬೈಕ್ ರ್ಯಾಲಿಗೆ ರಾಜ್ಯಸಭಾ ಸದಸ್ಯ ಜಗ್ಗೇಶ್ ಚಾಲನೆ ನೀಡಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್ಯಾಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ.ಕಲ್ಮುರಡಪ್ಪ, ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಎಚ್.ಡಿ.ತಮ್ಮಯ್ಯ, ಸಂತೋಷ್ ಕೊಟ್ಯಾನ್, ರಾಜೇಶ್ ಸೇರಿದಂತೆ ಅನೇಕರು ಇದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!